Get Updates
Get notified of breaking news, exclusive insights, and must-see stories!

ಎರಡನೇ ಟೆಸ್ಟ್‌ : ಆಸ್ಟ್ರೇಲಿಯಾಕ್ಕೆ 384 ರನ್‌ಗಳ ಭಾರಿ ಸವಾಲು

ಕೋಲ್ಕತ್ತಾ : ಕೈತಪ್ಪಿ ಹೋಗಿದ್ದ ಪಂದ್ಯವನ್ನು ಮತ್ತೆ ಭಾರತದ ತೆಕ್ಕೆಗೆ ತಂಡ ವಿ.ವಿ.ಎಸ್‌. ಲಕ್ಷ್ಮಣ್‌ ಹಾಗೂ ರಾಹುಲ್‌ ದ್ರಾವಿಡ್‌ ಅನುಕ್ರಮವಾಗಿ ತ್ರಿಶಕತ ಹಾಗೂ ದ್ವಿಶತಕ ವಂಚಿತರಾದರೂ ಸತತ 17ನೇ ಟೆಸ್ಟ್‌ ಜಯಕ್ಕೆ ಹಾತೊರೆಯುತ್ತಿರುವ ಆಸ್ಟ್ರೇಲಿಯಾಕ್ಕೆ 384ರನ್‌ಗಳ ಸವಾಲು ಎಸೆಯುವಲ್ಲಿ ಅತ್ಯದ್ಭುತ ಕಾಣಿಕೆ ನೀಡಿದರು.

ಇಂದು ಹೆಚ್ಚು ಹೆಚ್ಚು ರನ್‌ ಗಳಿಸಿ, ಆಸ್ಟ್ರೇಲಿಯಾಕ್ಕೆ ಕಠಿಣ ಸವಾಲು ಒಡ್ಡಬೇಕು ಎಂಬ ಮನೋಭಾವದಿಂದಲೇ ಆಟ ಆರಂಭಿಸಿದ ಈ ಇಬ್ಬರು ದಾಂಡಿಗರು ರನ್‌ ಗಳಿಸುವ ಆತುರದಲ್ಲಿ ಬಹುಬೇಗನೇ ವಿಕೆಟ್‌ ಒಪ್ಪಿಸಿದರು. 452 ಚೆಂಡುಗಳನ್ನೆದುರಿಸಿ 281 ರನ್‌ ಮಾಡಿದ್ದ ಲಕ್ಷ್ಮಣ್‌ ಮೆಕ್‌ ಗ್ರಾತ್‌ ಬೌಲಿಂಗ್‌ನಲ್ಲಿ ರಿಕಿ ಪಾಂಟಿಂಗ್‌ಗೆ ಕ್ಯಾಚಿತ್ತು ಔಟಾದರೆ, ಜಾಹೀರ್‌ ಖಾನ್‌ ಜತೆಗೂಡಿ ಆಡುತ್ತಿದ್ದ ರಾಹುಲ್‌ ದ್ರಾವಿಡ್‌ ಇಲ್ಲದ ರನ್‌ ಕದಿಯಲು ಹೋಗಿ ರನ್‌ಔಟ್‌ ಆದರು. ರಾಹುಲ್‌ 353 ಚೆಂಡುಗಳನ್ನೆದುರಿಸಿ 180ರನ್‌ ಗಳಿಸಿದರು.

ರಾಹುಲ್‌ ಔಟಾಗುತ್ತಿದ್ದಂತೆಯೇ ಭಾರತ ತನ್ನ ಇನ್ನಿಂಗ್ಸ್‌ ಅಂತ್ಯ ಘೋಷಿಸಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ನಾಯಕ ಗಂಗೂಲಿ ಹರ್‌ಭಜನ್‌ಸಿಂಗ್‌ರನ್ನು ಬ್ಯಾಟಿಂಗ್‌ಗೆ ಕಳುಹಿಸಿದರು. ಈ ಇಬ್ಬರು ಏಕದಿನದ ಪಂದ್ಯದಲ್ಲಿ ಆಡುವಂತೆ ಆಡಿದರು. ಖಾನ್‌ 23ರನ್‌ ಗಳಿಸಿದರೆ ಅಜೇಯರಾಗಿ ಉಳಿದರೆ, ಹರ್‌ಭಜನ್‌ 8 ರನ್‌ ಗಳಿಸಿ ಅಜೇಯರಾಗಿ ಉಳಿದರು.

ತಂಡದ ಸ್ಕೋರು 7 ವಿಕೆಟ್‌ ನಷ್ಟಕ್ಕೆ 657 ಆಗಿದ್ದಾಗ ನಾಯಕ ಗಂಗೂಲಿ ಡಿಕ್ಲೇರ್‌ ಮಾಡಿಕೊಂಡರು. ಈಗ ಆಸ್ಟ್ರೇಲಿಯಾಕ್ಕೆ ಗೆಲ್ಲಲು 384 ರನ್‌ಗಳು ಬೇಕು. ಎರಡನೇ ಟೆಸ್ಟ್‌ನ ಅಂತಿಮ ದಿನವಾದ ಇಂದು ಕಡ್ಡಾಯ ಓವರುಗಳೂ ಸೇರಿದಂತೆ ಹತ್ತಿರ ಹತ್ತಿರ 75 ಓವರ್‌ಗಳಲ್ಲಿ ಗೆಲುವಿನ ಗುರಿಯನ್ನು ಆಸ್ಟ್ರೇಲಿಯಾ ಮುಟ್ಟುತ್ತದೆಯೇ ಎಂಬುದನ್ನು ಕಾದು ನೋಡಬೇಕು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+