ಎಐಸಿಸಿ ಪೂರ್ಣಾಧಿವೇಶನದ ಧ್ಯೇಯ ವಾಕ್ಯ-ಎನ್‌ಡಿಎ ಡೌನ್ ಡೌನ್
ಬೆಂಗಳೂರು : ರಕ್ಷಣಾ ಹಗರಣದಲ್ಲಿ ಎನ್‌ಡಿಎ ಧುರೀಣರು ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಶುಕ್ರವಾರ ರಾತ್ರಿ ಸಭೆ ನಡೆಸಿ, ದೇಶದ ಪ್ರಸ್ತುತ ರಾಜಕೀಯ ಬದಲಾವಣೆಗಳನ್ನು ಪರಿಶೀಲಿಸಲಿದೆ.
ತೆಹಲ್ಕಾ ಡಾಟ್ ಕಾಂ ಬಯಲಿಗೆಳೆದಿರುವ ರಕ್ಷಣಾ ಹಗರಣದ ಹಿನ್ನೆಲೆಯಲ್ಲಿ ಸರ್ಕಾರವನ್ನು ಬರ್ಖಾಸ್ತುಗೊಳಿಸಬೇಕೆಂಬ ತನ್ನ ಪಟ್ಟಿನ ಜಾಡಿನಲ್ಲೇ ಶುಕ್ರವಾರದ ಸಭೆ ಸಾಗುವ ನಿರೀಕ್ಷೆಯಿದೆ. ಮಾರ್ಚ್ 17ರಿಂದ ಪ್ರಾರಂಭವಾಗುವ ಅಖಿಲ ಭಾರತ ಕಾಂಗ್ರೆಸ್ ಪೂರ್ಣಾಧಿವೇಶನದಲ್ಲೂ ಇದೇ ವಿಷಯ ತುಂಬಿಹೋಗುವ ಸಾಧ್ಯತೆಯಿದೆ.
ಎಐಸಿಸಿ ಪ್ರಧಾನ ಅಧಿವೇಶನದಲ್ಲಿ ಚರ್ಚಿಸಲಾಗುವ ಆರ್ಥಿಕ, ಕೃಷಿ, ರಾಜಕೀಯ ಹಾಗೂ ವಿದೇಶಾಂಗ ವ್ಯವಹಾರ ಕ್ಷೇತ್ರಗಳ ಕುರಿತಂತೆ ಗೊತ್ತುವಳಿ ನಿರ್ಣಯಗಳನ್ನೂ ಶುಕ್ರವಾರದ ಸಭೆಯಲ್ಲಿ ಅಂತಿಮಗೊಳಿಸಲಾಗುವುದು. ಖಾಸಗೀಕರಣ ವಿರೋಧಿಸಿ, ಸಾರ್ವಜನಿಕ ವಲಯಗಳಿಗೆ ಮಾನ್ಯತೆ ಕೊಡುವ ‘ನೆಹರೂತನದ ಆರ್ಥಿಕತೆ’ಗೆ ಕಾಂಗ್ರೆಸ್ ಒತ್ತು ಕೊಡಲಿದೆ. ಮಾಜಿ ವಿತ್ತ ಸಚಿವ ಪ್ರಣಬ್ ಮುಖರ್ಜಿ ನೇತೃತ್ವದಲ್ಲಿ ಗೊತ್ತುವಳಿಗಳನ್ನು ರೂಪಿಸಲಾಗಿದೆ.
ಭಾರತ್ ಅಲ್ಯುಮಿನಿಯಂ ಕಂಪನಿಯ ಬಂಡವಾಳ ವಾಪಸಾತಿ ಪಡೆಯುವ ನಿರ್ಧಾರ ಹಾಗೂ ವಿದೇಶೀ ನೀತಿಯ ವಿಷಯದಲ್ಲಿ ಎನ್‌ಡಿಎ ಇಟ್ಟಿರುವ ಹೆಜ್ಜೆಯನ್ನು ಸಭೆಯಲ್ಲಿ ವಿರೋಧಿಸಲಾಗುವುದು. ಎಡಪಕ್ಷಗಳಿಗೆ, ಅದರಲ್ಲೂ ವಿಶೇಷವಾಗಿ ಸಿಪಿಐ (ಎಂ) ಗೆ ಹತ್ತಿರಾಗುತ್ತಿರುವ ಕಾಂಗ್ರೆಸ್, ಎನ್‌ಡಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿದೆ. ಕಾಂಗ್ರೆಸ್ ಆಡಳಿತದ ರಾಜ್ಯಗಳ 9 ಮುಖ್ಯಮಂತ್ರಿಗಳು, ಎಐಸಿಸಿ ಸದಸ್ಯರು, ಪ್ರದೇಶ ಕಾಂಗ್ರೆಸ್ ಸಮಿತಿ ಪ್ರತಿನಿಧಿಗಳು ಹಾಗೂ ಸಂಸತ್ ಸದಸ್ಯರೂ ಸೇರಿದಂತೆ ಸುಮಾರು 10 ಸಾವಿರ ಪ್ರತಿನಿಧಿಗಳು ಅಖಿಲ ಭಾರತ ಕಾಂಗ್ರೆಸ್ ಪೂರ್ಣಾಧಿವೇಶನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಧ್ವಜಾರೋಹಣ ಮಾಡುವುದರೊಂದಿಗೆ ಅಧಿವೇಶನ ಶುರುವಾಗಲಿದೆ.
(ಯುಎನ್‌ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications