ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಹೊಸ ಸಾಧ್ಯತೆಗಳ ಶೋಧದಲ್ಲಿದ್ದೀರಿ. ನಿಮ್ಮನ್ನು ನೀವು ತೆರೆದುಕೊಳ್ಳುತ್ತಿರುವುದರಿಂದ ಉತ್ತಮವಾದ ದಂಡೆ ದಕ್ಕುವ ಸಾಧ್ಯತೆಯೂ ಇದೆ. ಆದರೆ, ಈ ದಿನ ನೀವು ಆಕರ್ಷಣೆಯ ಕೇಂದ್ರವಲ್ಲ.ವೃಷಭ :ಔಷಧಿ ಮತ್ತು ಆಲ್ಕೋಹಾಲ್ ಸೇವನೆ ಅತಿಯಾಗದಂತೆ ಎಚ್ಚರ ವಹಿಸಿ. ವಿಪರೀತ ಒತ್ತಡದ ದಿನ. ನಿಮ್ಮ ಕಡೆಯಿಂದ ಭಾವನಾತ್ಮಕ ಅಪಘಾತ ಸಂಭವಿಸುವ ಸಾಧ್ಯತೆಯೂ ಇದೆ.
ಮಿಥುನ : ತರ್ಕ ನಿಮ್ಮ ಬದುಕಿಗೆ ಅಷ್ಟೊಂದು ಹೊಂದಿಕೆಯಾಗುತ್ತಿಲ್ಲ . ವಸ್ತು ನಿಷ್ಠ ಯೋಚನೆ ಹಾಗೂ ಕ್ರಿಯಾಚಾಲನೆಯಿಂದ ಗುರಿ ತಲುಪುತ್ತೀರಿ.
ಕಟಕ : ಸೌಹಾರ್ದತಾ ನಡವಳಿಕೆ ನಿಮ್ಮ ವಂಶವಾಹಿಗಳಲ್ಲೇ ಅಡಕವಾಗಿದೆ. ದೈಹಿಕ ಆರೋಗ್ಯದಂತೆಯೇ ಮನೋಆರೋಗ್ಯವೂ ಸುಂದರವಾಗಿದೆ. ಅವರು ನಿಮ್ಮನ್ನಿಷ್ಟ ಪಡುವುದರಲ್ಲಿ ಅನುಮಾನವೇ ಇಲ್ಲ.
ಸಿಂಹ : ಮನೆಯಲ್ಲಿನ ಸಣ್ಣ ಪುಟ್ಟ ಘಟನೆಗಳು ನಿಮ್ಮ ಬದುಕಿಗೇ ತಿರುವು ನೀಡುವ ಸಾಧ್ಯತೆಗಳಿವೆ. ಯಶಸ್ಸನ್ನು ಸಾಧಿಸಲು ನಿಮ್ಮ ಮುಂದಿರುವ ಎಲ್ಲಾ ಸಾಧ್ಯತೆಗಳನ್ನು ಬಳಸಿಕೊಳ್ಳಿ.
ಕನ್ಯಾ : ಈ ದಿನ ರಾಜಿಯಾಗಲೇ ಬೇಕಾದ ಅನಿವಾರ್ಯತೆ. ಶಕ್ತಿಯೂ ಕುಂದುತ್ತಿದೆ ಎಂದು ನಿಮಗನ್ನಿಸಬಹುದು. ಈ ಹೊತ್ತಿನಲ್ಲಿ ಮೌನವಾಗಿದಷ್ಟೂ ಕ್ಷೇಮವಾಗಿರುತ್ತೀರಿ.
ತುಲಾ : ನಂಬಿಕೆಗಳನ್ನು ಮತ್ತೆ ಪ್ರಶ್ನಿಸಿಕೊಳ್ಳುವ ಸ್ಥಿತ್ಯಂತರದ ನಡುವಿದ್ದೀರಿ. ಇತ್ತೀಚೆಗೆ ನಿಮ್ಮ ಬದುಕಿನಲ್ಲಿ ಪ್ರವೇಶಿಸಿದ ವ್ಯಕ್ತಿಗಳೂ ಇದಕ್ಕೆ ಕಾರಣರಿದ್ದಾರು. ದೈಹಿಕ ಶ್ರಮದ ಕೆಲಸಗಳನ್ನು ಅವಾಯ್ಡ್ ಮಾಡಿ.
ವೃಶ್ಚಿಕ : ಗೆಳೆಯರೊಂದಿಗೆ ಶುಭದಿನ. ಪ್ರಯಾಣದಿಂದ ಧನಲಾಭ. ವ್ಯಾಪಾರ ವಹಿವಾಟಿನಲ್ಲಿ ಧನಾಗಮ. ಅಪರೂಪದ ವ್ಯಕ್ತಿಗಳ ಭೇಟಿ.
ಧನಸ್ಸು : ನೀವು ಪ್ರಸ್ತುತ ತೊಡಗಿಕೊಂಡಿರುವುದರಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಭಾವನಾತ್ಮಕವಾಗಿದ್ದೀರಿ. ಇದರಿಂದ ದೈಹಿಕ ಶ್ರಮವೇ ಹೊರತು ಲಾಭವೇನಿಲ್ಲ.
ಮಕರ : ಹೊಸ ಗೆಳೆಯರು ಮತ್ತು ಪ್ರಣಯದ ಸಾಧ್ಯತೆಯಿದೆ. ನಿಮ್ಮ ಜನಪ್ರಿಯತೆಯ ಹೊಳಪೂ ಹೆಚ್ಚಲಿದೆ. ಹದಗೆಟ್ಟಿರುವ ಸಂಬಂಧಗಳನ್ನು ಸುಧಾರಿಸಿಕೊಳ್ಳಲಿದು ಸಕಾಲ.
ಕುಂಭ : ನಡೆ ನುಡಿ ಒಂದಾಗಿರುವುದು ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುತ್ತದೆ. ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನುಬದಲಿಸಿಕೊಳ್ಳುವ ನಡವಳಿಕೆ ವೃತ್ತಿಪರ ಲಕ್ಷಣವೇನಲ್ಲ .
ಮೀನ : ನಿಮ್ಮ ಅಂತರ್ವಾಣಿ ಈ ದಿನ ಹೆಚ್ಚು ಜಾಗೃತವಾಗಿದೆ ಹಾಗೂ ಜೀವನ್ಮುಖಿಯಾಗಿದೆ. ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸುತ್ತೀರಿ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications