Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಮನಸ್ಸನ್ನು ನಿಮ್ಮ ಹತೋಟಿಯಲ್ಲಿಡಲು ಶತ ಪ್ರಯತ್ನ ಮಾಡುತ್ತಾ ಸುಸ್ತಾಗುತ್ತೀರಿ. ಆದರೆ ಹೆದರಿಕೆ ಬೇಡ, ಇನ್ನೊಬ್ಬರಿಗೆ ಹಾನಿ ಮಾಡಿಯೇನು ಎನ್ನುಚಿ ಪ್ರಜ್ಞೆಯೇ ನಿಮ್ಮನ್ನು ಇತರರ ದೃಷ್ಠಿಯಲ್ಲಿ ಒಳ್ಳೆಯವರನ್ನಾಗಿ ಮಾಡುತ್ತದೆ. ಧನಲಾಭವಿದೆ.

ವೃಷಭ :ನಿಮಗೆದುರಾಗುವ ಕೆಲವು ಅನನುಕೂಲ ಸನ್ನಿವೇಶಗಳನ್ನು ನಿರಾಳವಾಗಿ ನಿಭಾಯಿಸಿಬಿಟ್ಟರೆ ಇವತ್ತೆಲ್ಲಾ ಸುಂದರ ದಿನ. ಮನೆಯಲ್ಲಿ ಶುಭಕಾರ್ಯ ಇಟ್ಟುಕೊಳ್ಳಲು ಇದು ಸುಸಂದರ್ಭ.

ಮಿಥುನ : ಆರೋಗ್ಯ ಸುಧಾರಿಸಿಕೊಳ್ಳುತ್ತಿರುವ ಖುಷಿಯಲ್ಲಿ ಎಡವದಂತೆ ನೋಡಿಕೊಳ್ಳಿ. ಮತ್ತೆ ನಿಮ್ಮಿಂದ ಬಹುದೂರ ಹೋಗಿರುವ ಓದು, ವ್ಯಾಸಂಗಗಳನ್ನು ಬಳಿಗೆ ಕರೆದುಕೊಳ್ಳುವ ಯೋಚನೆ ಇದೆಯಾ ?

ಕಟಕ : ಇವತ್ತು ಯಾವ ಕೆಲಸ ಕಾರ್ಯಗಳಲ್ಲಿಯೂ ಧನಲಾಭವಾಗುವ ಹಾಗೆ ಕಾಣುವುದಿಲ್ಲ. ಆದ್ದರಿಂದ ಸಣ್ಣ ಪುಟ್ಟ ಬಾಕಿ ಕೆಲಸಗಳನ್ನೆಲ್ಲಾ ಇಂದು ಮುಗಿಸಿಬಿಡಿ. ದೇವಿ ಆರಾಧನೆಯಿಂದ ಶುಭವಾಗಬಹುದು.

ಸಿಂಹ : ನಿಮ್ಮ ವಿವೇಕಯುತ ವರ್ತನೆಯಿಂದ ಆಫೀಸು ಕೆಲಸಗಳಲ್ಲಿ ಜಯ ಸಾಧಿಸುತ್ತೀರಿ. ಎಂದೋ ಹಾಕಿಕೊಂಡ ಯೋಜನೆ ಸಂಪೂರ್ಣವಾದ ಖುಷಿಗೆ ಇವತ್ತು ಸಂಜೆ ಪಾರ್ಟಿ ಇಟ್ಟುಕೊಳ್ಳುತ್ತೀರಾ ?

ಕನ್ಯಾ : ಈಗ ನೀರಿನಂತೆ ಹಣ ಖರ್ಚು ಮಾಡಲು ನಿಮ್ಮ ಬಳಿ ಹಣ ಇದೆ. ಆದರೆ ನಿಮ್ಮ ಮನೆ, ಪರಿಸ್ಥಿತಿಗಳನ್ನು ಮರೆತುಬಿಟ್ಟೀರಾ ಜೋಕೆ. ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ ಸಲ್ಲ.

ತುಲಾ : ಮನಸ್ಸಿನ ಕ್ಲೇಷಗಳನ್ನು ಬಗೆಹರಿಸಿಕೊಳ್ಳುತ್ತೀರಿ. ಮನೆಯಲ್ಲಿನ ಕೋಳಿ ಜಗಳಗಳು ಎಷ್ಟೆಂದರೂ ಕಡಿಮೆ ಆಯುಸ್ಸಿನದು ಅಲ್ವೇ ? ಕಲಿಕೆಯಲ್ಲಿ ನಿಮ್ಮ ಆಸಕ್ತಿ ನಿಮಗೆ ಕೀರ್ತಿ ತಂದುಕೊಡಲಿದೆ.

ವೃಶ್ಚಿಕ : ಮನೆ ಮಂದಿಯಾಂದಿಗಿನ ಪಟ್ಟಾಂಗದಿಂದ ದಿನವಿಡೀ ಬೀಗುತ್ತಿರುತ್ತೀರಿ. ಮನಸ್ಸಿನೊಳಗಿನ ಯೋಚನೆಗಳನ್ನು ನೋವುಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬಾರದಾ ?

ಧನಸ್ಸು : ದೂರದೂರಿಗೆ ನೀವು ಪ್ರವಾಸ ಯೋಜನೆಗಳನ್ನು ಪ್ಲಾನ್‌ ಮಾಡುವಾಗ ಎರಡೆರಡು ಸಾರಿ ಜೇಬು ತಟ್ಟಿ ನೋಡಿಕೊಳ್ಳಬೇಕು ಮತ್ತೆ. ಮಗಳಿಂದ ಶುಭವಾರ್ತೆ ನಿರೀಕ್ಷಿಸಿ.

ಮಕರ : ಮಾಡಬೇಕಾಗಿರುವ ರಾಶಿ ಕೆಲಸ ಮುಂದಿಟ್ಟುಕೊಂಡು ಸಣ್ಣ ಪುಟ್ಟ ಕೆಲಸಗಳಿಗೇ ಸಮಯ ವ್ಯರ್ಥ ಮಾಡಬೇಡಿ. ಪ್ರವಾಸ ಸದ್ಯಕ್ಕೆ ಕೈಗೂಡುವುದಿಲ್ಲ ಆದ್ದರಿಂದ ಕನಸುಗಳ ಗೋಪುರ ಬೇಡ. ಕೋರ್ಟು ವ್ಯವಹಾರಗಳನ್ನು ಮುಂದೂಡುವುದು ಒಳ್ಳೆಯದು.

ಕುಂಭ : ಮೊಂಡು ವಾದದಿಂದ ಮಾತಿನಲ್ಲಿ ಜಯ ಸಿಕ್ಕರೂ, ಕೃತಿಯಲ್ಲಿ ಜಯ ಸಿಗದು ಎಂಬುದು ನಿಮಗೆ ತಿಳಿದಿದೆ. ವಾಸ್ತವದಲ್ಲಿ ನೀವು ಎದುರಿಸುತ್ತಿರುವ ಕಷ್ಟಗಳನ್ನು ಒಪ್ಪಿಕೊಳ್ಳಿ. ಕನಸುಗಳನ್ನೇ ಕಾಣುತ್ತಾ ಇದ್ದರೆ ಹೇಗೆ ?

ಮೀನ : ಮಹತ್ವದ ಕೆಲಸ ಕಾರ್ಯಗಳಲ್ಲಿ ಆಗುವ ಜಯದಿಂದ ಖುಷಿ ಪಡುತ್ತೀರಿ. ಸ್ನೇಹಿತರೊಂದಿಗೆ ಸುಳ್ಳು ಮಾತುಗಳಿಂದ ಜಯಿಸುವುದು ಸಾದ್ಯವಾಗುವುದಿಲ್ಲ ಅಂತ ತಿಳಿದ ಮೇಲೂ ಯಾಕೆ ವ್ಯರ್ಥ ಪ್ರಯತ್ನ ?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+