ವಸಂತನ ಸ್ವಾಗತಿಸಲು ತವಕಿಸುತ್ತಿದೆ ಪ್ರಕೃತಿ
ಬೆಂಗಳೂರು : ಚೈತ್ರದ ಆಗಮನಕ್ಕೆ ಉಳಿದಿರುವುದು ಕೇವಲ 20 ದಿನ ಮಾತ್ರ. ಮಾರ್ಚ್ 25ರಂದು ಯುಗಾದಿ. ಅದಕ್ಕೆ ಮೊದಲೇ ಚೈತ್ರವ ಸ್ವಾಗತಿಸುವ ರಂಗು ರಂಗಿನ ಹೋಳಿ. ಮುಂದಿನ ಶುಕ್ರವಾರದ ಹೋಳಿಯ ಹುಣ್ಣಿಮೆಗೆ ಬಣ್ಣಗಳು ಮಾರುಕಟ್ಟೆಗೆ ಬಂದಿದ್ದರೆ, ಮಾಮರದಿ ಕುಳಿತು ಕೋಗಿಲೆ ಕುಹೂ ಕುಹೂ ಎನ್ನುತ್ತಿವೆ.
ಮಾವಿನ ಮರದಲ್ಲಿ ಚಿಗುರೊಡೆದಿದೆ. ಹಸಿರೆಲೆಗಳ ಮರೆಯಲ್ಲಿ ಮಿಡಿಗಾಯಿಗಳು ಮಿನುಗುತ್ತಿವೆ. ಎಲ್ಲಿ ನೋಡಿದರೂ ಹಸಿರು. ಹಣ್ಣೆಲೆಗಳೆಲ್ಲವೂ ಶಿಶಿರದ ಚಳಿಗೆ ಉದುರಿ, ಚೈತ್ರದ ಹೊಸತನಕ್ಕೆ ಹೊಸತಾಗಿ ಚಿಗುರಿ ಕಣ್ಮನ ಸೆಳೆಯುತ್ತಿವೆ. ಎಳೆ ಹಸಿರಿನ ಅನುಭವ ಕಣ್ಣಿಗೆ ಆಹ್ಲಾದ ನೀಡುತ್ತಿದೆ. ಋತುರಾಜ ವಸಂತನ ಬರಮಾಡಿಕೊಳ್ಳಲು ಪ್ರಕೃತಿ ಹಾತೊರೆಯುತ್ತಿದೆ.
ಈ ಮಧ್ಯೆ ರಾಜ್ಯದಲ್ಲಿ ಒಣಹವೆ ಮುಂದುವರಿದಿದೆ. ಕರಾವಳಿಯ ಕೆಲವು ಭಾಗದಲ್ಲಿ ಉಷ್ಣಾಂಶ ಏರಿದೆ. ಮಿಕ್ಕ ಕಡೆ ಅಲ್ಪ ಬದಲಾವಣೆ ಗೋಚರಿಸಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಕನಿಷ್ಠ ತಾಪಮಾನ ಏರಿದೆ. ರಾಜ್ಯದ ಅತಿ ಹೆಚ್ಚು ತಾಪಮಾನ 37.5 ಡಿಗ್ರಿ ಸೆಲ್ಸಿಯಸ್ ಶಿವಮೊಗ್ಗದಲ್ಲೂ, ಅತಿ ಕನಿಷ್ಠ ತಾಪಮಾನ 16.6 ಡಿಗ್ರಿ ಸೆಲ್ಸಿಯಸ್ ಬೆಳಗಾವಿಯಲ್ಲೂ ಇತ್ತು.
ಮುನ್ಸೂಚನೆಯ ಪ್ರಕಾರ ರಾಜ್ಯಾದ್ಯಂತ ಮುಂದಿನ 24 ಗಂಟೆಗಳ ಅವಧಿಯಲ್ಲಿ ಒಣಹವೆಯೇ ಇರಲಿದೆ. ಬೆಂಗಳೂರು ಹಾಗೂ ಸುತ್ತ ಮುತ್ತಲ ಪ್ರದೇಶಗಳಲ್ಲಿ ಶುಭ್ರ ಆಕಾಶ ಇದ್ದು, ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ಇರಲಿದೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications