Get Updates
Get notified of breaking news, exclusive insights, and must-see stories!

‘ಗದ್ದುಗೆಗಾಗಿ ಸುಲಿಗೆಕೋರರ ಜತೆ ಮಿಲನ : ಇವತ್ತಿನ ರಾಜಕಾರಣ’

ಮೈಸೂರು : ಭಾರತದಲ್ಲಿ 700 ರಾಜಕೀಯ ಪಕ್ಷಗಳಿವೆ. ಒಂದು ಪಕ್ಷ ಯಾವ ಪಕ್ಷದೊಂದಿಗೆ ಬೇಕಾದರೂ ನೆಂಟಸ್ತಿಕೆ ಬೆಳೆಸುತ್ತದೆ. ಈ ನೆಂಟಸ್ತಿಕೆ ಅನುಕೂಲ ಸಿಂಧುತ್ವದ ಫಲಿತಾಂಶವೇ ಹೊರತು ತತ್ತ್ವಗಳ ಮೊತ್ತವಲ್ಲ . ನಮ್ಮ ದೇಶದ ಒಬ್ಬ ಪ್ರಧಾನಿಯನ್ನು ಕೊಂದ ಬಣವೊಂದರ ಸಹೋದರ ಪಕ್ಷದೊಂದಿಗೆ ಯಃಕಶ್ಚಿತ್‌ ಗದ್ದುಗೆ ಆಸೆಗೆ ನೆಂಟಸ್ತಿಕೆ ಬೆಳೆಸುವುದು ಇವತ್ತಿನ ರಾಜಕಾರಣದಲ್ಲಿ ಬಟಾ ಬೆತ್ತಲು. ತಮಿಳುನಾಡಿನ ಎಐಎಡಿಎಂಕೆ- ಕಾಂಗ್ರೆಸ್ಸು- ಪಾಟ್ಟಾಳಿ ಮಕ್ಕಳ್‌ ಕಚ್ಚಿ (ಎಲ್‌ಟಿಟಿಇಗೆ ಅಯ್ಯೋ ಪಾಪ ಅನ್ನುವ ಪಕ್ಷ) ಒಡಂಬಡಿಕೆಯನ್ನು ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್‌.ಶೇಷನ್‌ ಉದಾಹರಿಸಿದ್ದು ಹೀಗೆ.

ಶುಕ್ರವಾರ ಮೈಸೂರು ವಿಶ್ವವಿದ್ಯಾಲಯದಲ್ಲಿ ‘ಭಾರತದಲ್ಲಿ ರಾಜಕೀಯದ ಸ್ಥಿತಿ- ಗತಿ’ ಎಂಬ ವಿಷಯದ ಬಗ್ಗೆ ಶೇಷನ್‌ ನಿರರ್ಗಳವಾಗಿ ಮಾತನಾಡಿದರು...

  • ಭಾರತದ ರಾಜಕಾರಣ ತತ್ತ್ವಾದರ್ಶ, ದೇಶಭಕ್ತಿ, ಸಹಿಷ್ಣುತೆಯಿಲ್ಲದ ಸ್ವಾರ್ಥ ರಾಜಕಾರಣಿಗಳಿಂದ ತುಂಬಿಹೋಗಿದೆ. ರಾಜಕಾರಣದಿಂದಾಗಿ ಧರ್ಮ ದಾರಿ ತಪ್ಪಿದೆ
  • ಜಮ್ಮು-ಕಾಶ್ಮೀರ ಸಮಸ್ಯೆ, ವಿಶ್ವ ವ್ಯಾಪಾರ ಸಂಸ್ಥೆಯ ಒಡಂಬಡಿಕೆ ಹಾಗೂ ಕೃಷಿಕರ ಸಮಸ್ಯೆ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆಯಾಗಬೇಕು
  • ದೇಶ ಎದುರಿಸುತ್ತಿರುವ ಇಂಥ ಗಂಭೀರ ಸಮಸ್ಯೆಗಳನ್ನೂ ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಬ್ರೂಟಸ್‌ಗಳು ನಮ್ಮಲ್ಲಿದ್ದಾರೆ. ನಾವು ಎಚ್ಚರದಿಂದ ಇರಬೇಕು
  • ಪಾಕಿಸ್ತಾನಕ್ಕೆ ಜಮ್ಮು ಅಥವಾ ಕಾಶ್ಮೀರದ ಒಂದೇ ಒಂದು ತುಂಡು ನೆಲ ಕೊಟ್ಟರೂ ಮುಂದೆ ಅದು ಮುಸಲ್ಮಾನ ಬಾಂಧವರಿರುವ ಎಲ್ಲಾ ರಾಜ್ಯಗಳನ್ನೂ ಕೇಳುತ್ತದೆ
  • ಅಗತ್ಯವಿರುವೆಡೆಗಳಲ್ಲಿ ಸಂವಿಧಾನ ಪರಾಮರ್ಶೆ ಸ್ವಾಗತಾರ್ಹ. ಆದರೆ ಅದರಲ್ಲಿ ಮುಚ್ಚುಮರೆ ಕೂಡದು
  • ಕಾನೂನಿನ ಕಿಂಚಿತ್ತೂ ಭಯವಿಲ್ಲದೆ ದರೋಡೆ ಸುಲಿಗೆ ನಡೆಯುವ ಬಿಹಾರದಂಥ ರಾಜ್ಯವುಳ್ಳ ನಮ್ಮದು ಪ್ರಾಣಿಗಳ ದೇಶ. ಕ್ಷುಲ್ಲಕ ಜನರ ಈ ನಡಾವಳಿ ತಪ್ಪಿಸುವುದಿರಲಿ, ನಿಯಂತ್ರಿಸುವುದು ಜೀವಿ ಶಾಸ್ತ್ರಜ್ಞನಿಂದಲೂ ಸಾಧ್ಯವಿಲ್ಲ
  • ನಿಸ್ವಾರ್ಥ, ದೇಶಭಕ್ತಿ , ಧರ್ಮ ಪರಿಪಾಲನೆ, ಅಭಿವೃದ್ಧಿಗೆ ದೀಕ್ಷೆ ಇವುಗಳನ್ನು ಹೊತ್ತ ಯುವಕರು ರಾಜಕೀಯ ಹೊಕ್ಕಿ, ಅದಕ್ಕೆ ಹೊಸ ರಂಗು ಕೊಡಬೇಕು
  • ಧಾರ್ಮಿಕ ಪ್ರಜ್ಞೆ ಮುಕ್ತಿಗೊಂದು ಮಾರ್ಗ. ಭಾಷೆ ಅಭಿವ್ಯಕ್ತಿಗೊಂದು ಸೇತುವೆ. ರಾಜಕಾರಣಿಗಳಿಗೆ ಇವೇ ಡಿವೈಡ್‌ ಅಂಡ್‌ ರೂಲ್‌ ಅಸ್ತ್ರ
(ಯುಎನ್‌ಐ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+