Get Updates
Get notified of breaking news, exclusive insights, and must-see stories!

ಪಾಕಿಸ್ತಾನದ ಜೈಲುಗಳಲ್ಲಿ ಕೊಳೆಯುತ್ತಿರುವ ಸಾವಿರಭಾರತೀಯ ಖೈದಿಗಳು

ನವದೆಹಲಿ : ಯುದ್ಧ ಖೈದಿಗಳೂ ಸೇರಿದಂತೆ ಕನಿಷ್ಠ ಸಾವಿರ ಭಾರತೀಯರು ಪಾಕಿಸ್ತಾನದ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಈ ವಿಷಯವನ್ನು ಗುರುವಾರ ರಾಜ್ಯಸಭೆಯ ಗಮನಕ್ಕೆ ತರಲಾಯಿತು.

ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಅಜಿತ್‌ ಕುಮಾರ್‌ ಪಾಂಜಾ ಗುರುವಾರ ಈ ವಿಷಯವನ್ನು ಲಿಖಿತ ಹೇಳಿಕೆಯ ಮೂಲಕ ರಾಜ್ಯ ಸಭೆಯ ಗಮನಕ್ಕೆ ತಂದರು. ಲಭ್ಯ ಮೂಲಗಳನ್ನುಲ್ಲೇಖಿಸಿ ಹೇಳಿಕೆಯಲ್ಲಿ ತಿಳಿಸಿರುವಂತೆ- ಭಾರತಕ್ಕೆ ಸೇರಿದ 54 ರಕ್ಷಣಾ ಸಿಬ್ಬಂದಿ, 819 ನಾಗರಿಕ ಖೈದಿಗಳು ಹಾಗೂ 127 ಮೀನುಗಾರರು ಪಾಕಿಸ್ತಾನದ ಜೈಲಿನಲ್ಲಿದ್ದಾರೆ.

ಯುದ್ಧ ಖೈದಿಗಳನ್ನು ಬಂಧನದಲ್ಲಿರಿಸಿರುವುದನ್ನು ಪಾಕಿಸ್ತಾನ ಈವರೆಗೆ ಖಚಿತಪಡಿಸಿಲ್ಲ . ಆದರೆ, 112 ಮೀನುಗಾರರನ್ನು ಬಂಧನಕ್ಕೊಳಪಡಿಸಿರುವುದನ್ನು ಮಾತ್ರ ಪಾಕ್‌ ಖಚಿತಪಡಿಸಿದೆ ಎಂದು ಪಾಂಜಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪಾಕಿಸ್ತಾನದ ಜೈಲುಗಳಲ್ಲಿರುವ ಭಾರತೀಯರನ್ನು ಬಿಡಿಸಿಕೊಳ್ಳುವ ಬಗ್ಗೆ ಈಗಾಗಲೇ ಹಲವು ಬಾರಿ ಪಾಕಿಸ್ತಾನಿ ಸರ್ಕಾರದೊಂದಿಗೆ ಉನ್ನತ ಮಟ್ಟದ ಪ್ರಯತ್ನಗಳನ್ನು ನಡೆಸಲಾಗಿದೆ. ಈ ಪ್ರಯತ್ನಗಳು ಇನ್ನೂ ಮುಂದುವರಿದಿವೆ ಎಂದೂ ಹೇಳಿಕೆ ತಿಳಿಸಿದೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+