ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಇವತ್ತು ಬರೀ ಗೊಂದಲದ ದಿನ ಅಂತ ಕಿರಿಕ್ ಮಾಡಿಕೊಂಡರೆ ಹೇಗೆ ಹೇಳಿ ? ಗೊಂದಲಗಳೇ ನಿಮ್ಮನ್ನು ಗಟ್ಟಿ ಮಾಡುವುದಲ್ವೇ ? ಬೇಜಾರಿನ ನಡುವೆ ನಿಮಗೆ ಧನಾಗಮ ಯೋಗವಿದೆ. ದಿನದ ಕೊನೆಗೆ ಜೇಬು ತಾನೇ ಮುಟ್ಟಿ ನೋಡಿಕೊಳ್ಳುವುದು.ವೃಷಭ : ನೌಕರಿಯಲ್ಲಿ ಪ್ರಗತಿ ಕಾಣುತ್ತೀರಿ. ಹೊಸದನ್ನು ಕಲಿಯಬೇಕು ಎಂಬ ಉತ್ಸಾಹ ನಿಮ್ಮನ್ನು ಉನ್ನತ ಹುದ್ದೆಗೆ ಏರಿಸುತ್ತದೆ. ದೈಹಿಕ ಸುಸ್ತಿನತ್ತ ಸ್ವಲ್ಪ ಗಮನವಿರಲಿ.
ಮಿಥುನ : ನಿಮ್ಮ ಲೆಕ್ಕಾಚಾರಗಳು ಯಾವುದೇ ರೀತಿಯಲ್ಲಿಯೂ ಸರಿಯಾಗಿರುವುದಿಲ್ಲ ಅಂತ ಬೇಸರ ಬೇಡ. ಆರೋಗ್ಯದತ್ತ ಗಮನವಿರಲಿ. ಏರಿಳಿತಗಳು ಎಲ್ಲ ಕಡೆಯೂ ಸಹಜ ತಾನೇ. ತಾಳ್ಮೆಯೇ ನಿಮ್ಮನ್ನು ಕಾಪಾಡುವುದು.
ಕಟಕ : ಕಾಫಿಗೆ ಕರೆಯುವ ಸ್ನೇಹಿತರ ನೋವುಗಳನ್ನು ಕೇಳಿ ಬೆರಗಾಗುತ್ತೀರಿ. ಮನೆಯಲ್ಲಿ ಪುತ್ರನಿಂದ ಶುಭಕಾರ್ಯವಾಗಬಹುದು. ನಿಮ್ಮ ಏಕಾಗ್ರತೆಯಿಂದಾಗಿ ಹಿಡಿದಿರುವ ಕೆಲಸವನ್ನು ಯಶಸ್ವಿಯಾಗಿ ಮುಗಿಸುತ್ತೀರಿ.
ಸಿಂಹ : ಮನೆಯಲ್ಲಿ ಪತ್ನಿ ಕಾಡುವುದು ನಿಮ್ಮ ಮತ್ತು ಮನೆಯವರ ಒಳ್ಳೆಯದಕ್ಕೇ ಅಲ್ವಾ ? ಆರ್ಥಿಕ ಮುಗ್ಗಟ್ಟಿದೆ ಅಂತ ಸಿಟ್ಟು ಮಾಡಿಕೊಳ್ಳಬೇಡಿ. ಸದ್ಯದಲ್ಲಿಯೇ ಹೊಸ ಯೋಜನೆ ನಿಮ್ಮ ಕೈತುಂಬಾ ಹಣ ತರಲಿದೆ.
ಕನ್ಯಾ : ನಿಮ್ಮ ಲೆಕ್ಕಾಚಾರ ಸರಿಯಾದುದಕ್ಕೆ ಸಮಾಧಾನದ ನಿಟ್ಟುಸಿರು ಬಿಡುತ್ತೀರಿ. ಕೃಷಿ ಕ್ಷೇತ್ರದಲ್ಲಿ ಲಾಭ ಬರಬಹುದು. ಇಷ್ಟು ದಿನ ದುಡಿದಿರುವುದಕ್ಕೆ ನಷ್ಟ ಕಾಣಲಿಲ್ಲವಲ್ಲ ಅಂತ ಖುಷಿ ಪಡಲಿದ್ದೀರಿ.
ತುಲಾ : ಸಂಗಾತಿಯ ಸಿಟ್ಟನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾದರೆ ಮೌನವಾಗಿರಬೇಕು. ಇವತ್ತು ಸಂಜೆ ನಿಮಗೊಂದು ಆಶ್ಚರ್ಯದ ಸುದ್ದಿ ಕಾದಿದೆ. ಖುಷಿಯ ದಿನ. ಎಂಜಾಯ್.
ವೃಶ್ಚಿಕ : ಸ್ನೇಹಿತರೊಂದಿಗಿನ ಬೇಸರವೊಂದು ಬಿಟ್ಟರೆ ನೀವು ನಿರಾಳವಾಗಿರುತ್ತೀರಿ. ಸುತ್ತಾಡಬೇಕು ಎಂಬ ಆಸೆ ಮತ್ತೆ ಚಿಗುರುತ್ತದೆ. ಹಾಗಂತ ಪ್ರಯಾಣ ಭಾಗ್ಯ ಸದ್ಯಕ್ಕಿಲ್ಲ.
ಧನಸ್ಸು : ಶತ್ರುಗಳ ಬಗ್ಗೆ ಭಯ ಯಾಕೆ. ನಿಮ್ಮ ಕೆಲಸಗಳು ಸರಿಯಾಗಿರುತ್ತವೆ ಆದ್ದರಿಂದ ಅನಗತ್ಯ ಗೊಂದಲಗಳ ಅಗತ್ಯವಿಲ್ಲ.
ಮಕರ : ಕಳೆದು ಹೋದ ಆಸಕ್ತಿಯನ್ನು ಮತ್ತೆ ಚಿಗುರಿಸುವುದು ನಿಮ್ಮ ಮುಂದಿರುವ ಏಕಮೇವ ಕೆಲಸ. ಇಲ್ಲವಾದಲ್ಲಿ ನಿಮ್ಮ ಬಂಧುಗಳಿಗೆ ಮತ್ತೊಮ್ಮೆ ನಿರಾಸೆ ತರುತ್ತೀರಿ.
ಕುಂಭ : ಸುಖಾ ಸುಮ್ಮನೇ ಜಗಾಳಾಡಿದರೆ ಯಾವುದೇ ಲಾಭವಾಗುವುದಿಲ್ಲ. ಅದರಲ್ಲಿ ಸಿಗುವ ಥ್ರಿಲ್ ಬರೇ ಕ್ಷಣಿಕ ಅಂತ ಗೊತ್ತಿದ್ದೂ ಯಾಕೆ ಹೀಗೆ ? ಸ್ನೇಹಿತರು ನಿಮಗೆ ಸಹಕರಿಸಲಿದ್ದಾರೆ.
ಮೀನ : ಸ್ಪರ್ಧೆಯಲ್ಲಿ ಸೋತರೂ ಛಲ ಬಿಡುವ ಮನಸ್ಸು ನಿಮ್ಮದಲ್ಲ . ಆದ್ದರಿಂದ ಇವತ್ತೆಲ್ಲಾ ನೀವು ಶತ ಪ್ರಯತ್ನದಲ್ಲಿ ತೊಡಗಿರುತ್ತೀರಿ. ಸ್ಥಾನ ಲಾಭ ಖುಷಿ ತರುತ್ತದೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications