Get Updates
Get notified of breaking news, exclusive insights, and must-see stories!

ಕಾರ್ಮಿಕ ಕಾಯಿದೆಯಲ್ಲಿ ಭಾರಿ ಸುಧಾರಣೆ - ಸಿನ್ಹಾ ಸಾಹಸ

ನವದೆಹಲಿ : ಕಾಲ ಬದಲಾಗಿದೆ. ಉದಾರೀಕರಣ, ಖಾಸಗೀಕರಣಕ್ಕೆ ಚಾಲನೆ ದೊರೆತಿದೆ. ರೋಗಗ್ರಸ್ಥ ಕಂಪನಿಗಳ ಮುಚ್ಚುವ ಪ್ರಕ್ರಿಯೆಯೂ ಆರಂಭವಾಗಿದೆ. ಈ ನಿಟ್ಟಿನಲ್ಲಿ ಕಾನೂನು ಕಾಯಿದೆ ಸರಳೀಕರಿಸುವ ನಿಟ್ಟಿನಲ್ಲಿ ಕೇಂದ್ರ ವಿತ್ತ ಮಂತ್ರಿ ಯಶವಂತ ಸಿನ್ಹಾ ಅಂತೂ ಧೈರ್ಯ ಮಾಡಿ ಕಾರ್ಮಿಕ ಕಾಯಿದೆ ಸುಧಾರಣೆಗೂ ಕೈ ಇಟ್ಟಿದ್ದಾರೆ.

ಹಾಲಿ ಜಾಲ್ತಿಯಲ್ಲಿರುವ ಕಾಯಿದೆಯ ರೀತ್ಯ ಕಾರ್ಖಾನೆ ಮುಚ್ಚಲು ಅಥವಾ ನೌಕರರನ್ನು ಮನೆಗೆ ಕಳುಹಿಸಲು ರಾಜ್ಯ ಸರಕಾರದ ಅನುಮತಿ ಬೇಕಾಗಿತ್ತು. ಅದಕ್ಕೆ ಇದ್ದ ನೌಕರರ ಮಿತಿ 100 ಆಗಿತ್ತು. ಆದರೆ, ಬುಧವಾರ ಸಂಸತ್ತಿನಲ್ಲಿ ಮಂಡಿಸಲಾಗಿರುವ ಮುಂಗಡಪತ್ರದಲ್ಲಿ ಸೂಚಿಸಿರುವ ಕಾರ್ಮಿಕ ಕಾಯಿದೆ ಸುಧಾರಣೆಗಳ ರೀತ್ಯ ಇನ್ನು ಮುಂದೆ ಸಾವಿರಕ್ಕಿಂತ ಕಡಿಮೆ ನೌಕರರಿರುವ ಕಾರ್ಖಾನೆಗಳನ್ನು ಮುಚ್ಚಲು ಈ ನಿರ್ಬಂಧ ಇರುವುದಿಲ್ಲ.

ಆದರೆ, ನೌಕರನಿಗೆ ಮಾಲಿಕರು ಕೊಡಬೇಕಾದ ಪರಿಹಾರದ ಮೊತ್ತ ಮಾತ್ರ ಹಾಲಿ ಜಾರಿಯಲ್ಲಿರುವ ಪರಿಹಾರಕ್ಕಿಂತ ಮೂರು ಪಟ್ಟು ಹೆಚ್ಚಲಿದೆ. ಗುತ್ತಿಗೆ ಆಧಾರದ ನೌಕರರ ನೇಮಕಾತಿ ಕಾಯಿದೆಗೂ ಸೂಕ್ತ ಮಾರ್ಪಾಟು ಮಾಡಲಾಗಿದೆ. ಶ್ರಮಿಕ ವರ್ಗದ ಅದರಲ್ಲೂ ಅಸಂಘಟಿತ ಕಾರ್ಮಿಕ ವಲಯಕ್ಕೆ ವಿಮಾ ವ್ಯವಸ್ಥೆಯ ಪ್ರಸ್ತಾಪವೂ ಮೂಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+