ವ್ಯಾಸಂಗ ಸಾಲ ಯೋಜನೆ, ಶಿಕ್ಷಣದಲ್ಲಿ ಖಾಸಗೀಕರಣದ ವಾಸನೆ?
*ಯೋಗೇಂದ್ರ ಶುಕ್ಲಾ
ನವದೆಹಲಿ : ವ್ಯಾಸಂಗಕ್ಕೆ ಸಾಲ ನೀಡುವ ವಿಚಾರವನ್ನು ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ತಿಳಿಸಿರುವುದು ಉನ್ನತ ಶಿಕ್ಷಣವನ್ನು ಖಾಸಗೀಕರಣಗಳಿಸುವ ನಿಟ್ಟಿನ ಮೊದಲ ಹೆಜ್ಜೆ ಎನ್ನಲಾಗುತ್ತಿದೆ.
ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಅನ್ನುವ ಆತಂಕವನ್ನು ನಿವಾರಿಸಿಕೊಳ್ಳುವ ಸಲುವಾಗಿ, ಖಾಸಗಿಯವರನ್ನು ಉನ್ನತ ಶಿಕ್ಷಣದಲ್ಲಿ ಎಷ್ಟರ ಮಟ್ಟಿಗೆ ತೊಡಗಿಸಿಕೊಳ್ಳಬಹುದು ಎಂದು ಸರ್ಕಾರ ಚಿಂತಿಸಲಾರಂಭಿಸಿತು. ಈ ಹಿನ್ನೆಲೆಯಲ್ಲಿ ಅಂಬಾನಿ ಸಮಿತಿಯನ್ನು ರಚಿಸಿತು. ಕೂಲಂಕಷ ಅಧ್ಯಯನ ನಡೆಸಿದ ಅಂಬಾನಿ ಸಮಿತಿ ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ವರದಿಯ ಶಿಫಾರಸುಗಳನ್ನು ಖುದ್ದು ವ್ಯಾಸಂಗ ಸಾಲ ಯೋಜನೆ ವಿವರಿಸುತ್ತದೆ...
ಭಾರತೀಯ ಬ್ಯಾಂಕುಗಳ ಒಕ್ಕೂಟ (ಐಬಿಎ) ಈ ಸಾಲ ಯೋಜನೆಯನ್ನು ಸಿದ್ಧಪಡಿಸಿದ್ದು, ಭಾರತದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಲು 7.5 ಲಕ್ಷ ರುಪಾಯಿವರೆಗೆ ಸಾಲ ಸಿಗುತ್ತದೆ. ವಿದೇಶಗಳಲ್ಲಿ ವ್ಯಾಸಂಗ ಮಾಡಲು ಗರಿಷ್ಠ 15 ಲಕ್ಷ ರುಪಾಯಿ ಸಾಲ ದೊರೆಯುತ್ತದೆ. 4 ಲಕ್ಷ ರುಪಾಯಿವರೆಗೆ ಸಾಲ ಪಡೆಯಲು ಯಾವುದೇ ಖಾತ್ರಿ ವಗೈರೆ ಪೂರಕ ಮಾಹಿತಿ ಒದಗಿಸಬೇಕಿಲ್ಲ. ಸಾಲದ ಬಡ್ಡಿ ದರ ನೀಡಲಾಗುವ ಸಾಲದ ಮೊತ್ತ (ಪಿಎಲ್‌ಆರ್) ವನ್ನು ಮೀರುವುದಿಲ್ಲ. 5ರಿಂದ 7 ವರ್ಷಗಳ ಅವಧಿಯಲ್ಲಿ ಸಾಲವನ್ನು ಹಿಂದಿರುಗಿಸಬೇಕು. ಈ ಅವಧಿಯ ವಿಸ್ತರಣೆಗೂ ಅವಕಾಶ ಉಂಟು.
ಆದರೆ ಉನ್ನತ ಶಿಕ್ಷಣವನ್ನು ಖಾಸಗೀಕರಣಗೊಳಿಸುವ ಯಾವುದೇ ಇರಾದೆ ಸದ್ಯಕ್ಕೆ ಸರ್ಕಾರಕ್ಕಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಅಂಬಾನಿ ವರದಿಯ ಶಿಫಾರಸುಗಳ ಬಗೆಗೆ ಚರ್ಚಿಸಿ, ಸಂಸತ್ತಿನ ಅನುಮೋದನೆ ಪಡೆದ ನಂತರವೇ ಖಾಸಗಿಯವರ ಕೈಗೆ ಉನ್ನತ ಶಿಕ್ಷಣದ ಎಷ್ಟು ಭಾಗವನ್ನು ಕೊಡಬೇಕೆಂಬುದನ್ನು ನಿರ್ಧರಿಸಲು ಸಾಧ್ಯ. ವ್ಯಾಸಂಗ ಸಾಲ ಯೋಜನೆ ವಿದ್ಯಾರ್ಥಿಗಳ ಉತ್ತಮ ಭವಿತವ್ಯ ರೂಪಿಸುವ ಉದ್ದಿಶ್ಯದಿಂದ ರೂಪುಗೊಂಡಿರುವುದೇ ವಿನಃ ಖಾಸಗೀಕರಣದ ಮೆಟ್ಟಿಲಾಗಿ ಅಲ್ಲ ಎನ್ನುತ್ತಾರೆ.
ಬುದ್ಧಿವಂತ ಬಡ ವಿದ್ಯಾರ್ಥಿಗಳು ಈ ಸುದ್ದಿ ಕೇಳಿ ಕಿವಿ ಅರಳಿಸಬಹುದು. ಆದರೆ ಇಷ್ಟೊಂದು ಭಾರಿ ಸಾಲ ಮಾಡಲು ಕೈಮುಂದೆ ಮಾಡುವುದು ಸುಲಭವೇನಲ್ಲ. ಜೊತೆಗೆ ಬಡ್ಡಿ ದರ ಎಷ್ಟೆಂಬುದನ್ನು ಸರ್ಕಾರ ಇನ್ನೂ ಖಚಿತ ಪಡಿಸಿಲ್ಲ. ಈ ಯೋಜನೆ ಬಡ ವಿದ್ಯಾರ್ಥಿಗಳಿಗೇ ವರದಾನವಾದರೆ ಒಳಿತು.
(ಯುಎನ್‌ಐ)
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications