ಬಿಯರ್ ತುಟ್ಟಿಯ ಪೆಟ್ಟು : ಬೆಂಗಳೂರ ಪಬ್‌ಗಳು ಬಿಕೋ ಬಿಕೋ
* ಇಮ್ರಾನ್ ಖುರೇಶಿ
ಬೆಂಗಳೂರು : ಮದ್ಯಪಾನ ವಿರೋಧಿಗಳು ಬಜೆಟ್ಟು ಹೊರಬಿದ್ದ ತಕ್ಷಣವೇ ಹರ್ಷಿಸುತ್ತಿದ್ದರೆ, ಪಬ್ ನಗರಿಯ ಗುಂಡು ದುಕಾನುಗಳ ಒಡೆಯರು ತಲೆ ಮೇಲೆ ಕೈಹೊತ್ತು ಕೂತಿದ್ದಾರೆ. ಅದರಲ್ಲೂ ಪಬ್‌ಗಳ ಮಾಲೀಕರಿಗಂತೂ ನಿದ್ದೆಯೇ ಹತ್ತುತ್ತಿಲ್ಲ. ರಾಮನವಮಿಯ ಪಾನಕದಂತೆ ಖರ್ಚಾಗುವ ಬಿಯರ್ ಈಗ ಕಂಡಾಪಟ್ಟೆ ತುಟ್ಟಿಯಾದ್ದರಿಂದ ಅದನ್ನು ಜನ ಮೂಸಿ ನೋಡುತ್ತಿಲ್ಲ ; ನಿಂಬೆ ಪಾನಕ ಕುಡಿದೇ ತೃಪ್ತಿ ಪಟ್ಟುಕೊಳ್ಳುತ್ತಾರೆ ಎಂಬುದು ಅವರ ಅಳಲು.
ಒಂದೊಂದು ಶರಾಬು ಅಂಗಡಿಗಳಲ್ಲಿ, ಪಬ್‌ಗಳಲ್ಲಿ ಬಿಯರ್ ಬೆಲೆ ತರಾವರಿಯಾಗಿ ಗುರುವಾರದಿಂದಲೇ ಏರಿಬಿಟ್ಟಿದೆ. ಬಾಟಲಿಯಾಂದಕ್ಕೆ 4 ರುಪಾಯಿಯಿಂದ 9 ರುಪಾಯಿವರೆಗೆ ಹೆಚ್ಚಿಸಿ ಮಾರುತ್ತಿದ್ದಾರೆ. ಆದರೆ ಖರೆ ಹೆಚ್ಚಳದ ಪಟ್ಟಿ ಪಬ್ ಒಡೆಯರಿಗೆ ಇನ್ನೂ ಸಿಕ್ಕಿಲ್ಲವಾದ್ದರಿಂದ ಕೆಲವು ಕಡೆ ಹಳೇ ರೇಟಿಗೇ ಬಿಯರ್ ಬಿಕರಿಯಾಗುತ್ತಿದೆ.
ಕರ್ನಾಟಕ ಬ್ರಿವರೀಸ್ ಅಸೋಸಿಯೇಶನ್ ಅಧ್ಯಕ್ಷ ಕೆ.ಪಿ.ಬಾಲಸುಬ್ರಮಣ್ಯಂ ಅವರಲ್ಲಂತೂ ಈಗ ಪಾದರಸದ ಚಲನಶೀಲತೆ. ಒಕ್ಕೂಟದ ಸದಸ್ಯರ ಅಳಲಿಗೆ ಅವರು ಸ್ಪಂದಿಸಲೇಬೇಕು. ಹರೀಬರಿಯ ನಡುವೆ ಪಟಪಟನೆ ಕೆಲ ಮಾತುಗಳನ್ನು ನಡೆಯುತ್ತಲೇ ಆಡಿದರು- ಕಳೆದ 3 ವರ್ಷಗಳಲ್ಲಿ ಬಿಯರ್ ಮಾರಾಟ ಪ್ರತಿಶತ 10ರಿಂದ 11ರಷ್ಟು ಇಳಿಮುಖವಾಗಿದೆ. ಬಿಯರ್ ಶೇಖರಣೆಯಲ್ಲೂ ಕಂಡಾಪಟ್ಟೆ ಇಳಿಮುಖವಾಗಿದೆ. 1996ರಲ್ಲಿ 8.7 ದಶಲಕ್ಷ ಕೇಸ್‌ಗಳಷ್ಟು ಇರುತ್ತಿದ್ದ ಶೇಖರಣೆ ಇವತ್ತು ಕೇವಲ 6.2 ದಶಲಕ್ಷ ಕೇಸ್‌ಗಳಿಗೆ ಇಳಿದಿದೆ. ಇದು ಹೀಗೇ ಮುಂದುವರೆದರೆ ಬಿಯರ್ ಮಾರಾಟವನ್ನೇ ನಿಲ್ಲಿಸಬೇಕಾದ ಪರಿಸ್ಥಿತಿ ಬಂದೊದಗಲಿದೆ.
ಡಾಕ್ಟ್ರೇ ಹೇಳ್ತಾರೆ ಬಿಯರ್ ಸೇವನೆ ಆರೋಗ್ಯಕ್ಕೆ ಒಳ್ಳೆಯದೆಂದು
ಬಿಯರ್ ಅನ್ನು ಮದ್ಯಪಾನಗಳ ಯಾದಿಗೆ ಸೇರಿಸಿರುವುದೇ ಸರಿಯಿಲ್ಲ. ವೈದ್ಯರೇ ಹೇಳುವಂತೆ ಇದರ ಬಳಕೆ ಆರೋಗ್ಯಕ್ಕೆ ಒಳ್ಳೆಯದು. ಆದರೂ ನಮ್ಮ ಸರ್ಕಾರ ಅದನ್ನು ಮದ್ಯಪಾನವೆಂದು ಕರೆದು, ಸಿಕ್ಕಾಪಟ್ಟೆ ಸುಂಕ ಹಾಕುತ್ತಿದೆ.
ಏಕಾಏಕಿ ಈ ಪಾಟಿ ಸುಂಕ ಏರಿಸಿರೋದು ನಮಗೂ ಹೊಡೆತ, ಸರ್ಕಾರಕ್ಕೂ ಹೊಡೆತ. ಇದರಿಂದ ರಾಜ್ಯ ಬೊಕ್ಕಸಕ್ಕೆ ಒಂದಲ್ಲ ಎರಡಲ್ಲ, 10 ಬಿಲಿಯನ್ ರುಪಾಯಿ ನಷ್ಟವಾಗಲಿದೆ. ನಮಗೂ ಬಿಯರ್ ಗಿರಾಕಿಗಳು ಯದ್ವಾತದ್ವಾ ಕಡಿಮೆ ಆಗ್ತಾರೆ. ಬೇಸಿಗೆಯಲ್ಲಿ ಬಿಯರ್ ಕುಡಿಯಲು ಬಯಸುವ ಮಂದಿ ಸಾಕಷ್ಟು. ಆದರೆ ಅದಕ್ಕಾಗಿ ಇಷ್ಟೊಂದು ಹಣ ತೆರಲು ಅವರು ಸಿದ್ಧವಿರುವುದಿಲ್ಲ. ಒಂದೋ ಕುಡಿಯುವ ಪ್ರಮಾಣ ಕಡಿಮೆ ಮಾಡುತ್ತಾರೆ, ಇಲ್ಲ ಬಿಯರ್ ಸೇವನೆಯನ್ನೇ ಪೂರಾ ನಿಲ್ಲಿಸುತ್ತಾರೆ ಎನ್ನುತ್ತಾರೆ ಹೆಸರು ಹೇಳಬಯಸದ ಪಬ್ ಒಂದರ ಒಡೆಯ.
ಸರ್ಕಾರವೇನೋ ಸಾಮಾಜಿಕ ಕಳಕಳಿಯ ದೃಷ್ಟಿಯಿಂದ ಮದ್ಯದ ಮೇಲಿನ ಸುಂಕವನ್ನ ಹೆಚ್ಚಿಸಿದೆ. ಇದರಿಂದ ಹೊರೆಯಾಗಲಿರುವ ಬೊಕ್ಕಸ ತುಂಬಿಸಿಕೊಳ್ಳುವ ಯೋಚನೆಯನ್ನೂ ಮಾಡದೆಯೇನೂ ಇಲ್ಲ. ಆದರೆ ನಮ್ಮ ಕರ್ನಾಟಕದ ಮುಖ್ಯಮಂತ್ರಿ ಕೃಷ್ಣ ರಾಜ್ಯ ಬಜೆಟ್ಟಿನಲ್ಲಿ ಪಬ್ ಒಡೆಯರಿಗೆ ಸಿಹಿ ಸುದ್ದಿ ಕೊಡುತ್ತಾರೋ, ಉರಿಯೋ ಗಾಯಕ್ಕೆ ಉಪ್ಪು ಸುರಿಯುತ್ತಾರೋ ನೋಡಬೇಕು.
ವಿದೇಶೀ ಮದ್ಯಗಳ ಮೇಲೆ ಶೇ.150 ಶುಲ್ಕ ಹಾಕಿ : ವಿದೇಶೀ ಮದ್ಯದ ಆಮದಿನ ಪ್ರಮಾಣದ ಮೇಲಿನ ನಿಯಂತ್ರಣವನ್ನು ಸಂಪೂರ್ಣ ತೆಗೆದು ಹಾಕಿರುವ ಕೇಂದ್ರ ಸರ್ಕಾರದ ನಿರ್ಣಯವನ್ನು ಸ್ವಾಗತಿಸಿರುವ ಯುಬಿ ಗ್ರೂಪ್, ವಿದೇಶೀ ಮದ್ಯಗಳ ಮೇಲೆ ಕನಿಷ್ಠ ಶೇ.150 ವಿಶೇಷ ಶುಲ್ಕವನ್ನಾದರೂ ವಿಧಿಸಬೇಕೆಂದು ಒತ್ತಾಯಿಸಿದೆ.
ಯುಬಿ ಗ್ರೂಪ್‌ನ ಅಧ್ಯಕ್ಷ ವಿಜಯ್ ಆರ್.ರೇಖಿ ಗುರುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ದೇಶದ ಬೊಕ್ಕಸಕ್ಕೆ ಸುಮಾರು 200 ಬಿಲಿಯನ್ ರುಪಾಯಿ ತುಂಬಿಸುವ ದೇಶೀ ಮದ್ಯ ಉದ್ದಿಮೆಗೆ ವಿದೇಶೀ ಮದ್ಯಗಳಿಂದ ಹೊಡೆತ ಬೀಳಬಾರದು. ಹಾಗಂತ ಅವುಗಳು ಭಾರತಕ್ಕೆ ಬಾರದಿರಲಿ ಅನ್ನೋದೂ ಸರಿಯಲ್ಲ. ಈ ವಿಷಯದಲ್ಲಿ ಸಮತೋಲನ ಕಾಪಾಡಲು ಹಾಗೂ ವಿದೇಶೀ ಮದ್ಯಗಳ ಭರಾಟೆಯಲ್ಲಿ ಸ್ಥಳೀಯ ಕಂಪನಿಗಳು ಕೊಚ್ಚಿಕೊಂಡು ಹೋಗುವುದನ್ನು ತಡೆಗಟ್ಟಲು ವಿಶೇಷ ಶುಲ್ಕ ವಿಧಿಸಲೇಬೇಕು ಎಂದು ಕೇಂದ್ರವನ್ನು ಆಗ್ರಹಿಸಿದರು.
(ಐಎಎನ್‌ಎಸ್)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications