Get Updates
Get notified of breaking news, exclusive insights, and must-see stories!

ಭದ್ರಗಿರಿ ಅಚ್ಯುತ ದಾಸರಿಗೆ ಕನಕ ಪುರಂದರ ಪುರಸ್ಕಾರ

ಬೆಂಗಳೂರು : ಈ ಸಾಲಿನ ಜಾನಪದ ಶ್ರೀ, ವರ್ಣ ಶಿಲ್ಪಿ ವೆಂಕಟಪ್ಪ, ಜಕಣಾಚಾರಿ, ಕನಕ-ಪುರಂದರ ಮತ್ತು ಶಿಶುನಾಳ ಶರೀಫ ಪ್ರಶಸ್ತಿಗಳನ್ನು ರಾಜ್ಯ ಸರಕಾರ ಬುಧವಾರ ಪ್ರಕಟಿಸಿದೆ.

ಟಿಕ್ಕಳಿಗೆ ವಿಠ್ಠಲ ರಾವ್‌ ಅವರಿಗೆ ಜಾನಪದ ಶ್ರೀ, ಎಂ. ಎನ್‌. ಚಂದ್ರ ಶೇಖರ್‌ ಅವರಿಗೆ ವರ್ಣ ಶಿಲ್ಪಿ ವೆಂಕಟಪ್ಪ ಪುರಸ್ಕಾರ, ಎಂ. ಪರಮೇಶ್ವರಾಚಾರ್ಯರಿಗೆ ಜಕಣಾಚಾರಿ, ಭದ್ರಗಿರಿ ಅಚ್ಯುತ ದಾಸರಿಗೆ ಕನಕ ಪುರಂದರ ಹಾಗೂ ಎಚ್‌. ಕೆ. ನಾರಾಯಣ ಅವರಿಗೆ ಶಿಶುನಾಳ ಶರೀಫ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ . ಅಲ್ಲದೆ ಹಿರಿಯ ಪತ್ರಿಕೋದ್ಯಮಿ ಮೈಸೂರು ಮಠರಿಗೆ ಈ ಬಾರಿಯ ಟಿಎಸ್ಸಾರ್‌ ಪ್ರಶಸ್ತಿ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್‌ ಅವರ ಪ್ರಕಟಣೆ ತಿಳಿಸಿದೆ.

ಪ್ರಶಸ್ತಿ ಗಳು ತಲಾ ಒಂದು ಲಕ್ಷ ರೂಪಾಯಿ ನಗದು, ಕಂಚಿನ ವಿಗ್ರಹ ಮತ್ತು ತಾಮ್ರ ಪತ್ರವನ್ನೊಳಗೊಂಡಿರುತ್ತದೆ. ಜಾನಪದ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಟಿಕ್ಕಳಿಗೆ ವಿಠ್ಠಲ ರಾಯರು ಬಿಜಾಪುರ ಜಿಲ್ಲೆಯವರು. ಶ್ರೀ ಕೃಷ್ಣ ಪಾರಿಜಾತ ಕಲಾವಿದರಾಗಿ ರಂಗಭೂಮಿ ಗಾಯನದ ಪರಂಪರೆಯನ್ನು ಇವರು ಉಳಿಸಿಕೊಂಡು ಬಂದಿದ್ದಾರೆ.

ಜಕಣಾಚಾರಿ ಪ್ರಶಸ್ತಿಗೆ ಆಯ್ಕೆಯಾಗಿರುವ ಪರಮೇಶ್ವರಾಚಾರ್ಯರು ಮೂಲತಃ ಶಿವಮೊಗ್ಗದವರು. ಲೋಹ, ಮರ ಮತ್ತು ಶಿಲ್ಪಗಳ ಕೆತ್ತನಯಿಂದ ರಥ ಶಿಲ್ಪಿ ಎಂದೇ ಪ್ರಸಿದ್ಧರಾಗಿದ್ದಾರೆ.

ಚಿತ್ರಕಲೆ ಕ್ಷೇತ್ರದಲ್ಲಿನ ಸಾಧನೆಗೆ ನೀಡುವ ವರ್ಣ ಶಿಲ್ಪಿ ವೆಂಕಟಪ್ಪ ಪುರಸ್ಕಾರವನ್ನು ಈ ಬಾರಿ ಮೈಸೂರಿನ ಕಲಾವಿದ ಚಂದ್ರ ಶೇಖರ್‌ ಅವರಿಗೆ ನೀಡಲು ನಿರ್ಧರಿಸಲಾಗಿದೆ. ಹೊಳೆ ನರಸೀಪುರದ ಎಚ್‌. ಕೆ. ನಾರಾಯಣ ಅವರದು ಸುಗಮ ಸಂಗೀತ ಕ್ಷೇತ್ರ. ಮುಂಬಯಿ, ಚೆನ್ನೈನಂತಹ ಮೆಗಾ ಸಿಟಿಗಳಲ್ಲಿಯೂ ನಾರಾಯಣ ಅವರು ಕಚೇರಿಗಳನ್ನು ನೀಡಿದ್ದು ಈ ಬಾರಿಯ ಸಂತ ಶಿಶುನಾಳ ಶರೀಫ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.

ಕೀರ್ತನ ಕೇಸರಿ, ಕೀರ್ತನಾಚಾರ್ಯ ಎಂಬ ಬಿರುದುಗಳನ್ನು ಗಳಿಸಿರುವ ಭದ್ರಗಿರಿ ಅಚ್ಯುತ ದಾಸರು ಮೂಲ ನಾರಾಯಣ ಎಂಬ ಅಂಕಿತ ನಾಮದಿಂದ ಕನ್ನಡದಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಈ ಬಾರಿಯ ಕನಕ-ಪುರಂದರ ಪ್ರಶಸ್ತಿ ಅಚ್ಯುತ ದಾಸರಿಗೆ ಸಲ್ಲುತ್ತದೆ.

ಮೈಸೂರು ಮಠರಿಗೆ ಟಿಎಸ್ಸಾರ್‌ ಪ್ರಶಸ್ತಿ

ಈ ಬಾರಿಯ ಟಿಎಸ್ಸಾರ್‌ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಎಸ್‌. ಜಿ. ಮೈಸೂರು ಮಠ ಅವರಿಗೆ ನೀಡಲಾಗಿದೆ. 76 ವರ್ಷದ ಮೈಸೂರು ಮಠ ಅವರು ಥಾಮ್ಸನ್‌ ಫೌಂಡೇಶನ್‌ನ ಫೆಲೋಷಿಪ್‌ ಪಡೆದು ಲಂಡನ್‌ನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ವಿಶಾಲ ಕರ್ನಾಟಕ ದಿನ ಪತ್ರಿಕೆಯಿಂದ ಅವರು ತಮ್ಮ ಪತ್ರಿಕೋದ್ಯಮ ವೃತ್ತಿ ಆರಂಭಿಸಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+