Get Updates
Get notified of breaking news, exclusive insights, and must-see stories!

ವಿಧಾನಸಭೆ - ರಸ್ತೆ : ಸದ್ದು ಮಾಡಿದ ಭಾರತೀಯ ಜನತಾ ಪಕ್ಷ

ಬೆಂಗಳೂರು : ಗುರುವಾರ ಬೆಂಗಳೂರಿನ ತುಂಬೆಲ್ಲಾ ಬಿಜೆಪಿಯದೇ ಸದ್ದು. ವಿಧಾನಸಭೆಯಲ್ಲೂ ಹಾಗೂ ರಸ್ತೆಯಲ್ಲಿ . ವಿಧಾನಸಭೆಯಲ್ಲಿ ಬುಧವಾರದ ಚಾಳಿಯನ್ನೇ ಬಿಜೆಪಿಯ ಸದಸ್ಯರು ಮುಂದುವರಿಸಿದರೆ, ರಸ್ತೆಯಲ್ಲಿ ಪ್ರತಿಭಟನೆ ನಡೆಸುವ ಹೊಣೆಯನ್ನು ಕಾರ್ಯಕರ್ತರು ಹೊತ್ತಿದ್ದರು.

ವಿಧಾನಸಭೆಯಲ್ಲಿ ಬುಧವಾರದ ದೃಶ್ಯವೇ ಮುಂದುವರೆಯಿತು. ಬಿಜೆಪಿಯ ಸದಸ್ಯರ ಸರ್ಕಾರಿ ವಿರೋಧಿ ಘೋಷಣೆಗಳು, ಆಡಳಿತ ಪಕ್ಷದ ಸಮರ್ಥನೆ- ಧಿಕ್ಕಾರಗಳ ಸದ್ದಿನ ನಡುವೆ ಉಡುಗಿಹೋದ ಸದನವನ್ನು ಸಭಾಪತಿ ಎಂ.ವಿ. ವೆಂಕಟಪ್ಪ ಅನಿವಾರ್ಯವಾಗಿ ಎರಡು ಬಾರಿ ಮುಂದೂಡಬೇಕಾಯಿತು.

ಸದನ ಪ್ರಾರಂಭವಾಗಿದ್ದೇ ತಡ, ರೈತರ ಕಣ್ಣೀರೊರೆಸಲಾಗದ, ಅವರ ಆತ್ಮಹತ್ಯೆಗೆ ಕಾರಣವಾಗುತ್ತಿರುವ ಪರಿಸ್ಥಿತಿ ಹೋಗಲಾಡಿಸಲಾರದ ಆಡಳಿತ ಪಕ್ಷವನ್ನು ಘೋಷಣೆಗಳ ಮೂಲಕ ಬಿಜೆಪಿ ಸದಸ್ಯರು ತರಾಟೆಗೆ ತೆಗೆದುಕೊಂಡರು. ಸಭಾಪತಿ ಸದನವನ್ನು ಮಧ್ಯಾಹ್ನ 1 ಗಂಟೆವರೆಗೆ ಮುಂದೂಡಿದರು. ಮತ್ತೆ ಸೇರಿದ ಸಭೆಯಲ್ಲೂ ಕಾಂಗ್ರೆಸ್ಸು- ಬಿಜೆಪಿ ಸದಸ್ಯರು ಒಬ್ಬೊರತ್ತ ಒಬ್ಬರು ಬೆಟ್ಟು ತೋರಿಸಿ, ಕೂಗಾಡಲು ಶುರುವಿಟ್ಟರು. ‘ಸದನದ ಬಾವಿ’ವರೆಗೂ ನುಗ್ಗಿದ ಸದಸ್ಯರನ್ನು ನಿಯಂತ್ರಿಸಲಾಗದ ಸಭಾಪತಿ ಮತ್ತೆ ಸದನವನ್ನು 3ಗಂಟೆಗೆ ಮುಂದೂಡಿದರು.

ಮಗದೊಮ್ಮೆ ಕಲಾಪದಲ್ಲಿ ಘೋಷಣೆಗಳೇ ಪ್ರತಿಧ್ವನಿಸಿದಾಗ, ಸಭಾಪತಿ ಹಿಂದಿನ ದಿನವೂ ಕಲಾಪಗಳು ನಡೆದಿಲ್ಲ. ಕುಂತು ಚರ್ಚಿಸದೆ ಹೀಗೆ ಕೂಗಾಡಿದರೆ ಸಮಸ್ಯೆ ಬಗೆಹರಿಯದು ಎಂದಾಗ ಪರಿಸ್ಥಿತಿ ಸ್ವಲ್ಪ ತಿಳಿಯಾಯಿತು. ಆಹಾರಧಾನ್ಯ ಖರೀದಿಯನ್ನು ಭಾರತೀಯ ಆಹಾರ ನಿಗಮ ನಿಲ್ಲಿಸಿರುವುದನ್ನು ಪ್ರಸ್ತಾಪಿಸುವುದು ಕಾಂಗ್ರೆಸಿನ ಉದ್ದಿಶ್ಯ. ರಾಜ್ಯದ ರೈತರ ಬೆಳೆಗೆ ಕುಸಿದಿರುವ ಬೆಂಬಲ ಬೆಲೆಯ ಪ್ರಸ್ತಾಪ ವಿರೋಧ ಪಕ್ಷ ಬಿಜೆಪಿಯದ್ದು. ಈ ನಡುವೆ ಎರಡೂ ಪಕ್ಷಗಳ ಉದ್ದಿಶ್ಯ ಗದ್ದಲದ ಸದ್ದಿನ ಯಾವುದೋ ಮೂಲೆ ಸೇರಿತೇ ಹೊರತು ಸಭೆಯಲ್ಲಿ ಯಾರಿಗೂ ಮನವರಿಕೆಯಾಗುವಂತೆ ಹೊಮ್ಮಲಿಲ್ಲ.

ರೈತ ವಿರೋಧಿ ಸರ್ಕಾರದ ನೀತಿ ಪ್ರತಿಭಟಿಸಿ ಭಾರೀ ಮೆರವಣಿಗೆ

ರೈತರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆಯೆಂದು ಆರೋಪಿಸಿ ಭಾರತೀಯ ಜನತಾಪಕ್ಷದ ಸುಮಾರು 25 ಸಾವಿರ ಕಾರ್ಯಕರ್ತರು ಗುರುವಾರ ನಗರದಲ್ಲಿ ಮೌನ ಮೆರವಣಿಗೆ ನಡೆಸಿದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌, ವಿಧಾನ ಪರಿಷತ್‌ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ್‌ ಸೇಡಂ ಮೆರವಣಿಗೆಯ ನೇತೃತ್ವ ವಹಿಸಿದ್ದರು.

ಮಲ್ಲೇಶ್ವರಂ ಆಟದ ಮೈದಾನದಿಂದ ಪ್ರಾರಂಭವಾದ ಮೆರವಣಿಗೆ ಶೇಷಾದ್ರಿ ರಸ್ತೆಯಲ್ಲಿನ ವಿಜ್ಞಾನ ಮತ್ತು ಕಲಾ ಕಾಲೇಜು ಬಳಿ ಕೊನೆಗೊಂಡಿತು. ವಿದ್ಯುತ್‌ ದರ ಏರಿಕೆ, ಅಸಮರ್ಪಕ ಮೆಕ್ಕೆಜೋಳ ಖರೀದಿ ಮುಂತಾದ ಜನ ಹಾಗೂ ರೈತ ವಿರೋಧಿ ರಾಜ್ಯ ಸರ್ಕಾರದ ನೀತಿಯನ್ನು ಪ್ರತಿಭಟಿಸಲು ಈ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು .

ಮೆರವಣಿಗೆ ಸಂಪೂರ್ಣ ಶಾಂತಿಯುತವಾಗಿತ್ತು . ಯಾವುದೇ ಅಹಿತಕರ ಘಟನೆಗಳು ಸಂಭವಿಸಲಿಲ್ಲ ಎಂದು ಜಂಟಿ ಪೊಲೀಸ್‌ ಕಮೀಷನರ್‌ ಬಿ.ಎನ್‌. ನಾಗರಾಜ್‌ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+