ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿವೇಗದ ಹಾದಿಯಲ್ಲಿ ಜಾರುತ್ತಿರುವ ಅಖ್ತರ್‌

By Staff
|
Google Oneindia Kannada News

ಡ್ಯುನೆಡಿನ್‌ : ರಾವಲ್ಪಿಂಡಿ ಎಕ್ಸ್‌ಪ್ರೆಸ್‌ ಶೋಯೆಬ್‌ ಅಖ್ತರ್‌ ಚೆಂಡು ಮತ್ತೆ ಅಡ್ಡದಾರಿಯಲ್ಲಿ ಓಡುತ್ತಿದೆ. ನ್ಯೂಜಿಲೆಂಡ್‌ ಸರಣಿಯಲ್ಲಿ ಸತತ ಎರಡನೇ ಬಾರಿಗೆ ಅವರ ಬೌಲಿಂಗ್‌ ಶೈಲಿ ಕುರಿತ ಅಪಸ್ವರ ಎದ್ದಿದೆ.

ಬುಧವಾರ ಪಾಕ್‌ ಹಾಗೂ ಕಿವೀಸ್‌ ನಡುವೆ ನಡೆದ ಸೀಮಿತ ಓವರ್‌ಗಳ ಪಂದ್ಯದಲ್ಲಿ ಅಖ್ತರ್‌ ಎಸೆತಗಳು ಅನುಮಾನಾಸ್ಪದವಾಗಿದ್ದವು ಎಂದು ನ್ಯೂಜಿಲೆಂಡ್‌ ಅಂಪೈರ್‌ಗಳಾದ ಡಗ್‌ ಕೌವಿ ಹಾಗೂ ಸ್ಟೀವ್‌ ಡನ್‌ ತಕರಾರು ಎತ್ತಿದ್ದಾರೆ. ಈ ಕುರಿತು ವಿವರವಾದ ವರದಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಗೆ ಸಲ್ಲಿಸಿದ್ದಾರೆ.

ಪಂದ್ಯದಲ್ಲಿನ ಅಖ್ತರ್‌ ಎಸೆತಗಳನ್ನು ಒಳಗೊಂಡ ವಿಡಿಯೋ ಕೆಸೆಟ್ಟನ್ನು ಈಗಾಗಲೇ ಐಸಿಸಿಗೆ ಕಳುಹಿಸಲಾಗಿದೆ ಎಂದು ಪಂದ್ಯದ ರೆಫರಿ ಶ್ರೀಲಂಕಾದ ರಂಜನ್‌ ಮುದುಗಲೆ ತಿಳಿಸಿದ್ದಾರೆ. ಕೆಸೆಟ್ಟಿನ ಮತ್ತೊಂದು ಪ್ರತಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೂ ತಲುಪಿದೆ. ಅಖ್ತರ್‌ ಅವರು ತಮ್ಮ ಬೌಲಿಂಗ್‌ ಶೈಲಿಯನ್ನು ಸುಧಾರಿಸಿಕೊಳ್ಳಲು ಆರು ವಾರಗಳ ಕಾಲಾವಕಾಶ ನೀಡಲಾಗಿದೆ.

ಬೌಲಿಂಗ್‌ ಶೈಲಿಯ ಬಗ್ಗೆ ತಕರಾರು ಎತ್ತಿದ್ದರೂ ಅಖ್ತರ್‌ ತಮ್ಮ ಆಟವನ್ನು ಮುಂದುವರಿಸಬಹುದಾಗಿದೆ. ಆದರೆ, ಗಾಯಾಳುಗಳ ಪಟ್ಟಿಯಲ್ಲಿರುವ ಅವರು ಮಾರ್ಚ್‌ 8 ರಿಂದ ಆಕ್ಲೆಂಡ್‌ನಲ್ಲಿ ಪ್ರಾರಂಭವಾಗುವ ಮೊದಲ ಟೆಸ್ಟನ್ನು ಪೆವಿಲಿಯನ್‌ನಿಂದಲೇ ವೀಕ್ಷಿಸುವ ಸಾಧ್ಯತೆಗಳು ಹೆಚ್ಚು . ಬುಧವಾರದ ಪಂದ್ಯದಲ್ಲಿ ಕೂಡ ಬೌಲಿಂಗ್‌ ಮಾಡುವಾಗ ಅಖ್ತರ್‌ ತಿಣುಕುತ್ತಿದ್ದರು. ಅವರಿಗೆ ನಾವು ಮತ್ತಷ್ಟು ಒತ್ತಡ ಹೇರುವುದಿಲ್ಲ ಎಂದು ಪಾಕ್‌ ತಂಡದ ಮೇನೇಜರ್‌ ಫಕೀರ್‌ ಇಜಾಜುದ್ದೀನ್‌ ರಾಯ್‌ಟರ್ಸ್‌ಗೆ ತಿಳಿಸಿದ್ದಾರೆ.

ಮೊದಲ ಬಾರಿಗೆ ಅಖ್ತರ್‌ ಬೌಲಿಂಗ್‌ ಕುರಿತು ಅಪಸ್ವರ ಎದ್ದಿದ್ದು 1999 ರಲ್ಲಿ , ಪರ್ತ್‌ನಲ್ಲಿ ಜರುಗಿದ ಆಸ್ಟ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ . ಆನಂತರ ಪ್ರಸ್ತುತ ನ್ಯೂಜಿಲೆಂಡ್‌ ಪ್ರವಾಸದ ಮೊದಲನೆ ಅಂತರರಾಷ್ಟ್ರೀಯ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡದ ನಾಯಕ ಸ್ಟೀಫನ್‌ ಫ್ಲೆಮಿಂಗ್‌ ಹಾಗೂ ಪಂದ್ಯದ ವೀಕ್ಷಕ ವಿವರಣೆಗಾರರು ಅಖ್ತರ್‌ ಬೌಲಿಂಗ್‌ ಕುರಿತು ಕಟುವಾಗಿ ಟೀಕಿಸಿದ್ದರು.

ಅಖ್ತರ್‌ ಈಗ ಕವಲು ದಾರಿಯಲ್ಲಿದ್ದಾರೆ. ಪದೇ ಪದೇ ಗಾಯಾಳುಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುತ್ತಿರುವ ಅವರು, ಬೌಲಿಂಗ್‌ ಶೈಲಿಯ ಕುರಿತೂ ಟೀಕೆ ಎದುರಿಸುತ್ತಿದ್ದಾರೆ. ದೈಹಿಕ- ಮಾನಸಿಕ ಆಘಾತದಿಂದ ಅವರು ಚೇತರಿಸಿಕೊಳ್ಳುತ್ತಾರೋ, ಅಥವಾ ತಮ್ಮದೇ ಅತಿ ವೇಗದಲ್ಲಿ ಕೊಚ್ಚಿ ಹೋಗುತ್ತಾರೋ ನೋಡಬೇಕು.

(ರಾಯ್‌ಟರ್ಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X