ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಸಾಯವನ್ನೇ ನಂಬಿಕೊಂಡವರಿಗೆ ಕೆಲವು ಭರವಸೆಗಳು

By Staff
|
Google Oneindia Kannada News
  • ಗ್ರಾಮೀಣ ಪ್ರದೇಶಗಳ ವಿದ್ಯುತ್‌ ಸಮಸ್ಯೆ ನೀಗಲು 750 ಕೋಟಿ ರುಪಾಯಿಗಳ ಸಮಗ್ರ ಯೋಜನೆ
  • ಕೃಷಿಕರಿಗೆ ನೀಡುವ ಸಾಲದಲ್ಲಿ ಶೇ. 24ರಷ್ಟು ಹೆಚ್ಚಳ. ಪ್ರಸ್ತುತ 51 ಸಾವಿರದ 500 ಕೋಟಿ ರುಪಾಯಿ ಸಾಲ ಸೌಲಭ್ಯ ಹರಿಸುತ್ತಿರುವ ಸರ್ಕಾರ ಅದನ್ನು 64 ಸಾವಿರ ಕೋಟಿಗೆ ಏರಿಸಿದೆ.
  • ರಾಷ್ಟ್ರೀಯ ಕೃಷಿ ಬ್ಯಾಂಕು ಹಾಗೂ ಗ್ರಾಮೀಣಾಭಿವೃದ್ಧಿ ಯೋಜನೆಗಳಡಿಯ ಸಾಲಗಳ ಮೇಲಿನ ಬಡ್ಡಿ ಯಲ್ಲಿ ಶೇ. 1ರಷ್ಟು ಇಳಿಕೆ. ಪ್ರಸ್ತುತ 11.5 ಪ್ರತಿಶತ ಇರುವ ಬಡ್ಡಿಯನ್ನು ಶೇ. 10.5ಕ್ಕೆ ಇಳಿಸಲಾಗಿದೆ.
  • ಪ್ರಸ್ತುತ 4.5 ಸಾವಿರ ಕೋಟಿ ರುಪಾಯಿ ಇರುವ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಧಿಯ ಮೊತ್ತವನ್ನು 5 ಸಾವಿರ ಕೋಟಿಗಳಿಗೆ ಹೆಚ್ಚಳ.
  • ಕೃಷ್ಯುತ್ಪನ್ನಗಳ ದಾಸ್ತಾನಿಗೆ ನಬಾರ್ಡಿನ ನೆರವಿನ ಬಡ್ಡಿ ದರದಲ್ಲಿ ಇಳಿಕೆ. ಪ್ರಸ್ತುತ ಪ್ರತಿಶತ 10 ಇರುವ ಬಡ್ಡಿ ದರವನ್ನು ಶೇ.8.5ಕ್ಕೆ ಇಳಿಸಲಾಗಿದೆ.
  • ಕೃಷ್ಯುತ್ಪನ್ನಗಳ ಉತ್ಪಾದನೆ ಮತ್ತು ವಿತರಣೆಯಲ್ಲಿ ಆಯಾ ರಾಜ್ಯಗಳಿಗೆ ಹೆಚ್ಚು ಸ್ವಾತಂತ್ರ್ಯ. ಸಾರ್ವಜನಿಕ ವಿತರಣಾ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಕಡಿಮೆ ಬೆಲೆಯಲ್ಲಿ ಆಹಾರ ಧಾನ್ಯ ಒದಗಿಸಲು ರಾಜ್ಯ ಸರ್ಕಾರಗಳಿಗೆ ಕೇಂದ್ರದ ಸಂಪೂರ್ಣ ಆರ್ಥಿಕ ನೆರವಿನ ಭರವಸೆ.
  • ಆಹಾರ ಧಾನ್ಯಗಳು ಹಾಗೂ ಕೃಷ್ಯುತ್ಪನ್ನಗಳು ಹೊರರಾಜ್ಯಗಳಿಗೆ ಮುಕ್ತವಾಗಿ ಹರಿಯುವುದಕ್ಕೆ ಕಡಿವಾಣ ಹಾಕಲು ಅಗತ್ಯ ವಸ್ತುಗಳ ಕಾಯ್ದೆಯ ಪುನರ್‌ ಪರಿಶೀಲನೆ.
  • ಅಡುಗೆ ಎಣ್ಣೆ, ಟೀ, ತೆಂಗು ಹಾಗೂ ಕಾಫಿ ಮೇಲಿನ ಆಮದು ಸುಂಕದಲ್ಲಿ ಹೆಚ್ಚಳ
(ಯುಎನ್‌ಐ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X