ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಎಂಥಾ ಉದಾಸೀನದಿಂದ ದಿನ ಆರಂಭ ಮಾಡುತ್ತೀರೋ, ಸಂಜೆ ಅಷ್ಟೇ ಬಿರಿkುಯಾಗಿರುತ್ತೀರಿ. ಕೆಲಸಗಳು ಪರಿಸ್ಥಿತಿಗಳು ನಿಮ್ಮನ್ನು ಸುಮ್ಮನೇ ಕುಳಿತುಕೊಳ್ಳಲು ಬಿಡಲೊಲ್ಲವು.ವೃಷಭ : ನಿಮಗಿವತ್ತು ಕಳ್ಳರ ಭಯವಿರುತ್ತದೆ. ಆಫೀಸಿನಲ್ಲಿ ನೀವು ಮಾಡಬೇಕಾದ ಕೆಲಸಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಕಂಡು ಸಿಟ್ಟು ಮಾಡಿಕೊಳ್ಳಬೇಡಿ. ಯಾವ ಕೆಲಸವಾದರೇನು, ತಿಂಗಳ ಕೊನೆಗೆ ಯಾವುದೇ ವ್ಯತ್ಯಾಸವಿಲ್ಲ.
ಮಿಥುನ : ಮಾಡಿದ್ದನ್ನೇ ಮಾಡಿ ಕೆಲಸಗಳಲ್ಲಿ ನಿರಾಸಕ್ತಿ ಬಂದರೆ ಬೇಸರ ಬೇಡ. ಸಿಟ್ಟನ್ನೆಲ್ಲಾ ನುಂಗಿಕೊಂಡಲ್ಲಿ ಮತ್ತದೇ ಗೋಜಲಿನಲ್ಲಿರಬೇಕಾಗುತ್ತದೆ. ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವುದು ನಿಮ್ಮ ತಾಳ್ಮೆಗೆ ಬಿಟ್ಟದ್ದು.
ಕಟಕ : ಮನೆಯಲ್ಲಿ ದೇವತಾ ಕಾರ್ಯ ನಡೆಸಬೇಕು ಅಂತ ಹಾಕಿಕೊಂಡಿರುವ ಪ್ಲಾನ್‌ಗಳು ಸದ್ಯದಲ್ಲಿಯೇ ಕಾರ್ಯರೂಪಕ್ಕೆ ಬರಲಿವೆ. ಅದಕ್ಕೆ ಮುನ್ನ ದಿನಕ್ಕೆ ಮೂವತ್ತಾರು ಗಂಟೆ ಕೊಟ್ಟರೂ ಮುಗಿಯದಷ್ಟು ಕೆಲಸಗಳು ರಾಶಿ ಬಿದ್ದಿವೆಯಲ್ಲಾ ?
ಸಿಂಹ : ಇವತ್ತು ನೀವು ಮಾತನಾಡಿದ್ದೇ ಮಾತು. ಎಲ್ಲರೂ ಬೆಪ್ಪಾಗುವಂತೆ ನಿಮ್ಮ ವಾಕ್ಚಾತುರ್ಯವನ್ನು ಪ್ರದರ್ಶಿಸುತ್ತೀರಿ. ಧನಾಗಮವಾದೀತು. ಹಣವನ್ನು ಜೋಪಾನವಾಗಿಟ್ಟುಕೊಳ್ಳಬೇಕೆಂದಿದ್ದರೆ ಎಚ್ಚರದಿಂದಿರಬೇಕು.
ಕನ್ಯಾ : ನೌಕರಿಯಲ್ಲಿ ಬಡ್ತಿಯ ಸುದ್ದಿ ಬರಬಹುದು. ಮೂಗಿನ ತುದಿಯಲ್ಲಿಯೇ ಸಿಟ್ಟು ಇಟ್ಟುಕೊಂಡಲ್ಲಿ ಬರುವ ಭಾಗ್ಯ ಬಾಗಿಲಲ್ಲೇ ನಿಂತುಬಿಡುತ್ತದೆ. ಆದ್ದರಿಂದ ಈಗ ನಿಮ್ಮ ತಾಳ್ಮೆಗೇ ಪ್ರಾಶಸ್ತ್ಯ.
ತುಲಾ : ನಿಮ್ಮ ಹೆಂಡತಿಯ ತವರು ಮನೆಯಿಂದ ನೆಂಟರು ಬಂದರು ಅಂತ ಸಿಟ್ಟು ಬೇಡ. ಅವರಿಂದ ನಿಮಗೆ ಒಳ್ಳೆಯದಾಗಲಿದೆ. ಆದ್ದರಿಂದ ಯಾವತ್ತಿನ ಕೊಂಕು ಮಾತುಗಳನ್ನು ದೂರವಿಡಿ.
ವೃಶ್ಚಿಕ : ಆರ್ಥಿಕ ಮುಗ್ಗಟ್ಟು ನಿಮ್ಮ ಸ್ನೇಹಿತರಿಂದ ಪರಿಹಾರವಾಗುವುದು, ಸುಮ್ಮನೇ ಯಾಕೆ ಯೋಚನೆ ಮಾಡುತ್ತಿರಿ. ಆಫೀಸಿನ ಮಾಮೂಲಿ ತಕರಾರು ಬಿಟ್ಟರೆ ಎಲ್ಲವೂ ಚೆಂದವಾಗಿಯೇ ಇದೆ.
ಧನಸ್ಸು : ಲಾಟರಿ ಕೊಳ್ಳುವ ಅಭ್ಯಾಸವುಂಟಾ ? ಇವತ್ತು ಲಾಟರಿಯಿಂದ ಸೋಲಾಗುತ್ತದೆ. ಆದ್ದರಿಂದ ಆಫೀಸಿನಿಂದ ನೇರ ಮನೆಗೆ ಹೋಗುವುದು ಉತ್ತಮ. ಮನೆಯಲ್ಲಿ ಸಂತೋಷದ ವಾತಾವರಣ.
ಮಕರ : ನಿಮ್ಮ ಬಳಿ ಹಾಳು ಮಾಡುವುದಕ್ಕೆ ಅಂತ ಪ್ರತ್ಯೇಕ ಸಮಯವಿಲ್ಲ. ಸ್ನೇಹಿತರ ಮೇಲೆಲ್ಲಾ ಸಿಟ್ಟು ಮಾಡಿಕೊಂಡರೆ ಯಾವುದೇ ಪ್ರಯೋಜನವಾಗುವುದಿಲ್ಲ.
ಕುಂಭ : ವೃಥಾ ಖರ್ಚು ಮಾಡುತ್ತಿದ್ದೀರಿ ಎಂದು ಗೊತ್ತಿದ್ದರೂ, ಅದನ್ನು ನಿಯಂತ್ರಿಸಲು ಹೆಣಗಾಡಬೇಕಾಗುತ್ತದೆ. ಇವತ್ತು ಒಳ್ಳೆಯ ಭೋಜನ ಭಾಗ್ಯವಿದೆ.
ಮೀನ : ಒಟ್ಟು ಹಿತಕ್ಕೆ ದುಡಿಯುವುದು ಎಂದರೆ ಏನು ಅಂತ ನಿಮಗೆ ಗೊತ್ತಿಲ್ಲ. ಆದ್ದರಿಂದ ಸಣ್ಣವರಾಗಿಬಿಡುತ್ತೀರಿ. ಸ್ನೇಹಿತರ ಮೂಲಕ ನಿಮಗೂ ಲಾಭವಾಗಬಹುದು.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications