ಚಳಿ ಇತ್ತು ಎಂಬುದೇ ಮರೆತು ಹೋಗಿದೆ
ಬೆಂಗಳೂರು : ಕರಾವಳಿಯಲ್ಲಿ ಕನಿಷ್ಠ ತಾಪಮಾನ ಏರಿದೆ. ಉತ್ತರ ಒಳನಾಡಿನಲ್ಲಿ ತಾಪಮಾನ ಸಾಮಾನ್ಯ ಮಟ್ಟದಲ್ಲಿದೆ. ದಕ್ಷಿಣ ಒಳನಾಡಿನಲ್ಲಿ ಅಲ್ಪ ಬದಲಾವಣೆ ಕಂಡುಬಂದಿದೆ. ಇದಿಷ್ಟೂ ಕಳೆದ 24 ಗಂಟೆಗಳಲ್ಲಿನ ರಾಜ್ಯದ ಹವಾಮಾನ ವರ್ತಮಾನ.
ಬೆಂಗಳೂರಿನಲ್ಲಿ ಬಿಸಿಲೇರಿದೆ. ಗುರುವಾರ ಸಂಜೆ ಕೆಲಕಾಲ ಮೋಡ ಮುಸುಕಿ, ತಂಪಾದ ಗಾಳಿಯೂ ಬೀಸಿತು. ಮತ್ತೆ ಎಂದಿನಂತೆ ಬೇಸಿಗೆಯ ಅನುಭವ. ರಾಜ್ಯದ ಬಹುತೇಕ ಎಲ್ಲೆಡೆ ಬಿಸಿಲು ಏರುತ್ತಿದೆ. ಬೆವರು ಇಳಿಯುತ್ತಿದೆ. ತಲೆಯ ಮೇಲೆ ಫ್ಯಾನ್ ತಿರುಗುತ್ತಿದೆ. ಚಳಿಯ ನಡುಕ ಇತ್ತು ಎಂಬುದೇ ಮರೆತುಹೋಗಿದೆ. ರಾಜ್ಯದ ಅತಿ ಕನಿಷ್ಠ ತಾಪಮಾನ ಬೆಳಗಾವಿಯಲ್ಲಿ ದಾಖಲಾಗಿದೆ.
ಮುನ್ಸೂಚನೆಯಂತೆ ರಾಜ್ಯಾದ್ಯಂತ ಒಣಹವೆಯೇ ಮುಂದುವರಿಯಲಿದೆ. ಬೆಂಗಳೂರು ಹಾಗು ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇದ್ದು , ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇರುತ್ತದೆ ಎಂದಿದೆ ಹವಾಮಾನ ವೀಕ್ಷಣಾಲಯದ ವರದಿ.












Click it and Unblock the Notifications