ಬಿಸಿಸಿಐ ಮಾಜಿ ಅಧ್ಯಕ್ಷ ಐ.ಎಸ್.ಬಿಂದ್ರಾಗೆ 2 ವರ್ಷಗಳ ನಿಷೇಧ
ಚೆನ್ನೈ : ಬಿಸಿಸಿಐ ಮಾಜಿ ಅಧ್ಯಕ್ಷ ಐ.ಎಸ್.ಬಿಂದ್ರಾ ಇನ್ನು ಎರಡು ವರ್ಷಗಳ ಕಾಲ ಕ್ರಿಕೆಟ್ಟಿಗೆ ಸಂಬಂಧಿಸಿದ ಮಂಡಳಿಯ ಯಾವುದೇ ಸಭೆಯಲ್ಲೂ ಭಾಗವಹಿಸುವಂತಿಲ್ಲ. ಯಾವುದೇ ಸ್ಥಾನಕ್ಕೆ ಸ್ಪರ್ಧಿಸುವಂತೆಯೂ ಇಲ್ಲ. ಶುಕ್ರವಾರ ನಡೆದ ಬಿಸಿಸಿಐನ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಮ್ಯಾಚ್‌ಫಿಕ್ಸಿಂಗ್ ಸೊಲ್ಲು ಎದ್ದ ತಕ್ಷಣ ಕಳೆದ ವರ್ಷ ಮೇ ತಿಂಗಳಲ್ಲಿ 400 ಪುಟಗಳ ವರದಿಯಾಂದನ್ನು ಸಿದ್ಧಪಡಿಸಿದ್ದ ಬಿಂದ್ರಾ, ಮಂಡಳಿಯ ಅಧಿಕಾರಿಗಳನ್ನೆಲ್ಲಾ ಆರೋಪಿಸಿದ್ದರು. ಅವರ ವರ್ತನೆಗೆ ಕ್ರುದ್ಧವಾದ ಬಿಸಿಸಿಐ ಶೋಕಾಸ್ ನೋಟೀಸನ್ನೂ ನೀಡಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐನ ಶಿಸ್ತು ಸಮಿತಿ ಈಚೆಗೆ ಬಿಂದ್ರಾ ಅವರ ವಿಚಾರಣೆ ನಡೆಸಿತ್ತು. ಮಂಡಳಿಗೆ ಮಸಿ ಬಳಿಯುವ ಯತ್ನ ಮಾಡಿರುವುದರಿಂದ ಅವರಿಗೆ 2 ವರ್ಷಗಳ ಕಾಲ ನಿಷೇಧ ಹೇರಲಾಗಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಸಿಸಿಐ ಅಧ್ಯಕ್ಷ ಎ.ಸಿ.ಮುತ್ತಯ್ಯ ತಿಳಿಸಿದರು.
ಇನ್ನು ಎರಡು ವರ್ಷಗಳ ಕಾಲ ಯಾವುದೇ ಸಭೆಗೆ ಬಿಂದ್ರಾ ಅವರ ಹೆಸರನ್ನು ಶಿಫಾರಸು ಮಾಡಕೂಡೆಂದು ಪಂಜಾಬ್ ಕ್ರಿಕೆಟ್ ಮಂಡಳಿಗೂ ಎಚ್ಚರಿಕೆ ಕೊಡಲಾಗಿದೆ. ತಮ್ಮ ವಿರುದ್ಧ ಹೇರಲಾಗಿರುವ 2 ವರ್ಷಗಳ ನಿಷೇಧಕ್ಕೆ ಪ್ರತಿಕ್ರಿಯಿಸಿರುವ ಬಿಂದ್ರಾ, ಬಿಸಿಸಿಐ ಅಧ್ಯಕ್ಷ ಮುತ್ತಯ್ಯ ಅವರ ನಿರ್ಣಯಕ್ಕೆ ನಾನು ಸದಾ ಬದ್ಧ. ಹೇಳೋದಕ್ಕೆ ಇನ್ನೇನು ಬಾಕಿ ಇದೆ ಅಂದರು.
(ಸುದ್ದಿ ಸಂಸ್ಥೆಗಳು)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications