Get Updates
Get notified of breaking news, exclusive insights, and must-see stories!

ಸಂತ್ರಸ್ತ ನಿಧಿ ಹಾಗೂ ಮತಾಂತರ : ಪೋಪ್‌ ಸ್ಪಷ್ಟನೆಗೆ ವಿಹೆಚ್‌ಪಿ ಆಗ್ರಹ

ಬೆಂಗಳೂರು : ಗುಜರಾತ್‌ ಭೂಕಂಪ ಸಂತ್ರಸ್ತರಿಗೆ ಕಳುಹಿಸುತ್ತಿರುವ ಪರಿಹಾರ ನಿಧಿಯ ಹಿಂದೆ ಮತಾಂತರದ ಯಾವುದೇ ಉದ್ದೇಶ ಇಲ್ಲ ಎಂದು ವ್ಯಾಟಿಕನ್‌ ಪೋಪ್‌ ಸ್ಪಷ್ಟಪಡಿಸಲು ವಿಶ್ವಹಿಂದೂ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಭಾಯ್‌ ಒತ್ತಾಯಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪರಿಹಾರ ಕಾಮಗಾರಿಗಳಲ್ಲಿ ಯಾವುದೇ ಕೋಮುವಾದಿ ಕೆಲಸಗಳು ನಡೆಯಬಾರದು. ಗುಜರಾತ್‌ ಭೂಕಂಪ ಪರಿಹಾರ ಕಾರ್ಯ ಮತ್ತು ಧರ್ಮವನ್ನು ಕಲಬೆರಕೆ ಮಾಡುವ ಉದ್ದೇಶ ತಮಗಿಲ್ಲ ಎಂದು ಸ್ಪಷ್ಟಪಡಿಸಿದರು. ಮತಾಂತರದ ಉದ್ದೇಶವಿಲ್ಲ ಎಂಬ ಬಗ್ಗೆ ಅಧಿಕೃತ ಸ್ಪಷ್ಟೀಕರಣವನ್ನೇನೂ ಪರಿಷತ್‌ ಕೇಳಿಲ್ಲ ಬದಲಾಗಿ, ತನ್ನ ಅಭಿಪ್ರಾಯವನ್ನಷ್ಟೇ ಅದು ವ್ಯಕ್ತ ಪಡಿಸಿದೆ ಎಂದು ಪ್ರವೀಣ್‌ ವಿವರಿಸಿದರು.

ಆದರೆ, ವ್ಯಾಟಿಕನ್‌ ಪೋಪ್‌ ದೆಹಲಿಗೆ ಆಗಮಿಸಿದ್ದಾಗ, ಎಕ್ಲೆಸಿಯಾ ಇನ್‌ ಏಷ್ಯಾ ಎಂಬ ವಿಷಯದ ಬಗ್ಗೆ 64 ಪುಟಗಳ ದಾಖಲೆಯಾಂದನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ತಾವು ಭಾರತದಲ್ಲಿ ಮತಾಂತರ ನಡೆಸಲು ಬಯಸಿರುವುದಾಗಿ ಉಲ್ಲೇಖಿಸಲಾಗಿದೆ, ಅಲ್ಲದೆ ಇತರ ಧರ್ಮಗಳ ತತ್ವಗಳನ್ನು ಒಪ್ಪಿಕೊಳ್ಳದಂತೆ ಹೇಳಿರುವುದಾಗಿ ಪ್ರವೀಣ್‌ಭಾಯ್‌ ಆಪಾದಿಸಿದರು.

ಪ್ರಸ್ತುತ ಗುಜರಾತಿನ ಪರಿಹಾರ ಕಾಮಗಾರಿಯಲ್ಲಿ 15 ಸಾವಿರ ಮಂದಿ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ದುಡಿಯುತ್ತಿದ್ದಾರೆ. ಭೂಕಂಪದಿಂದ ಅನಾಥರಾಗಿರುವ ಮಕ್ಕಳ ಹಾಗೂ ವೃದ್ಧರ ಶುಶ್ರೂಷೆಗೆ ಪರಿಷತ್ತು ಮುಂದಿನ ದಿನಗಳಲ್ಲಿ ವಾತ್ಸಲ್ಯ ಮಂದಿರವನ್ನು ತೆರೆಯಲಿದೆ. ದೇಶಾದ್ಯಂತ ಸುಮಾರು 33 ಸಾವಿರ ಪರಿಷತ್ತಿನ ಘಟಕಗಳು ತಮ್ಮ ಕಾರ್ಯಗಳನ್ನು ಫೆಬ್ರವರಿ ಅಂತ್ಯದವರೆಗೆ ಬದಿಗೊತ್ತಿವೆ ಎಂದರು.

ಕರ್ನಾಟಕದ ನಾಗರಿಕ ವಿಮಾನಯಾನ ಇಲಾಖೆಯ ಮಾಜಿ ಸಚಿವ ಜಾನ್‌ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು ಸೋನಿಯಾ ಗಾಂಧಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾದ ಮೇಲೆ ಹಿಂದೂಗಳನ್ನು ಆಕರ್ಷಿಸಲು ಕಾಂಗ್ರೆಸ್‌ ಹೆಣಗುತ್ತಿದೆ ಎಂದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+