Get Updates
Get notified of breaking news, exclusive insights, and must-see stories!

ಕರಾವಳಿ ಜಿಲ್ಲೆಗಳಲ್ಲಿ 907 ಕಿಂಡಿ ಅಣೆಕಟ್ಟುಗಳ ನಿರ್ಮಾಣ ಯೋಜನೆ

ಮಂಗಳೂರು : ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಗೆ ಕಿಂಡಿ ಅಣೆಕಟ್ಟು ನಿರ್ಮಿಸುವ 145.5 ಕೋಟಿ ರುಪಾಯಿಗಳ ಸಮಗ್ರ ಯೋಜನೆ ‘ಪಶ್ಚಿಮ ವಾಹಿನಿ’ಯನ್ನು ಸರ್ಕಾರ ಸಿದ್ಧಪಡಿಸಿದೆ.

ರಾಜ್ಯ ಸಣ್ಣ ನೀರಾವರಿ ಸಚಿವ ಕುಮಾರ್‌ ಬಂಗಾರಪ್ಪ ಶನಿವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು. ಈ ಯೋಜನೆಯಡಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 907 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗುವುದು . ಅವುಗಳ ನಿರ್ವಹಣೆಗಾಗಿ ನೀರು ಬಳಕೆದಾರರ ಸಂಘಗಳನ್ನೂ ರಚಿಸಲಾಗುವುದು ಎಂದರು.

ಪಶ್ಚಿಮ ವಾಹಿನಿ ಒಂದು ಸಮಗ್ರ ಯೋಜನೆಯಾಗಿದ್ದು, ಇದರಲ್ಲಿ ಒಳನಾಡು ಮೀನುಗಾರಿಕೆ, ಕಿರು ಜಲ ವಿದ್ಯುತ್‌ ಯೋಜನೆ ಹಾಗೂ ಏತ ನೀರಾವರಿ ಯೋಜನೆಗಳೂ ಸೇರಿವೆ. ಯೋಜನೆಯನ್ವಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 259, ಉಡುಪಿಯಲ್ಲಿ 451 ಹಾಗೂ ಉತ್ತರ ಕನ್ನಡದಲ್ಲಿ 197 ಅಣೆಕಟ್ಟುಗಳು ನಿರ್ಮಾಣವಾಗಲಿವೆ ಎಂದು ಕುಮಾರ್‌ ಬಂಗಾರಪ್ಪ ವಿವರಿಸಿದರು.

ಸುದ್ದಿಗೋಷ್ಠಿಗೆ ಮುನ್ನ ಸಚಿವರು ಪಶ್ಚಿಮ ವಾಹಿನಿ ಯೋಜನೆಯ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದರು. ಯೋಜನೆಯ ಸಂಯೋಜಕ ಡಾ. ವೀರೇಂದ್ರ ಹೆಗ್ಗಡೆ ಕೂಡ ಹಾಜರಿದ್ದರು.

(ಮಂಗಳೂರು ಪ್ರತಿನಿಧಿಯಿಂದ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+