ನಗು ಎಂದಿದೆ ಮಂಜಿನ ಬಿಂದು
ಮದರಾಸಿನಲ್ಲಿ ಬೀಳೋ ಎರಡು ಹನಿ ಮಳೆಗೇ ಥರಗುಟ್ಟುವ ಬೆಂಗಳೂರಿನ ಜನ ಚಾದರಕ್ಕಂಟಿಕೊಳ್ಳುವಂತಿದ್ದ ಎರಡು ದಿನಗಳ ಪರಿಸ್ಥಿತಿ ಈಗ ಕೊಂಚ ತಿಳಿಯಾಗಿದೆ. ಬಯ್ಗಿನ ಹೊತ್ತಿಗೆ ದಿನಕರ ಮುಖ ತೋರಿದ್ದಾನೆ.
ಶ್ರೀಲಂಕಾದಿಂದ ತಮಿಳುನಾಡಿಗೆ ಬೀಸಿದ ಚಂಡ ಮಾರುತದ ಬಿಸಿ ಬೆಂಗಳೂರಿಗರಿಗೂ ತಟ್ಟಿತು. ಎಷ್ಟೋ ಜನರಲ್ಲಿ ಆಗಲೇ ‘ಸೊರ್ರ ಬುಸ್ಸ’ ಶುರುವಾಗಿತ್ತು. ಹೊಸ ವರ್ಷದ ಕಾರ್ಯಕ್ರಮಕ್ಕೂ ಈ ಮಂಕು ಕವಿದು ಬಿಟ್ಟಿತೆ ಅನ್ನುವ ಗುಸುಗುಸು ಪ್ರಾರಂಭವಾಗಿತ್ತು. ಅಲ್ಲಲ್ಲಿ ಮೈದಾನಗಳ ಮೇಲೆ ತಲೆ ಎತ್ತುವ ಹೊಸ ವರ್ಷದ ಕಾಕ್ಟೈಲ್ ಅಡ್ಡಾಗಳು ವಾಟರ್ ಪ್ರೂಫ್ ಶಾಮಿಯಾನಗಳಿಗಾಗಿ ತಡಕಾಟ ನಡೆಸಿದ್ದವು. ಇನ್ನು ಸಾಕೆನ್ನುವಂತೆ ಬೆಂಗಳೂರಲ್ಲಿ ಉದುರುತ್ತಿದ್ದ ಕಿರಿಕಿರಿ ಸೋನ್ ಪಪ್ಪಡಿ ಮಳೆ ಪೂರ್ತಿ ನಿಂತಿದ್ದು, ಜಡ್ಡುಗಟ್ಟಿದ್ದ ಜನರಲ್ಲಿ ಜೀವ ಸಂಚಾರವಾಗಿದೆ.
ರಾಜ್ಯದಲ್ಲಿ ಅತಿ 12.1 ಡಿಗ್ರಿಯಷ್ಟು ಅತಿ ಕನಿಷ್ಠ ಉಷ್ಣಾಂಶ ಶಿವಮೊಗ್ಗೆಯಲ್ಲಿ ದಾಖಲಾಗಿದೆ. ಉಳಿದಂತೆ ಯಥಾ ಒಣಹವೆ. ಇನ್ನು ಎರಡು ದಿನಗಳಲ್ಲಿ ಕನಿಷ್ಠ ಉಷ್ಣಾಂಶ ಕೊಂಚ ಏರುವ ಸಾಧ್ಯತೆಯಿದೆ ಎಂಬುದು ಹವಾಮಾನ ಇಲಾಖೆಯ ವರದಿ. ಬೆಂಗಳೂರಲ್ಲಿ ಚುಮುಚುಮು ಚಳಿಗೆ ಕಡಿವಾಣ ಹಾಕಲೋ ಎನ್ನುವಂತೆ ಕನಿಷ್ಠ ಉಷ್ಣತೆ 17 ಡಿಗ್ರಿಯಷ್ಟಿದೆ.
ಆಕಾಶಕ್ಕೆ ಹೊಸ ವರ್ಷದ ಶುಭಾಶಯ ಕೋರುತ್ತಿರುವ ಎಲೆಗಳ- ಹೂಗಳ ಮೇಲೆ ಕುಂತ ಮಂಜಿನ ಹನಿಗಳು ನಗು ಎನ್ನುತ್ತಿವೆ ; ವರ್ಷದಂಚಿನಲ್ಲಿ ನಿಂತಿರುವ ನಿಮಗೂ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications