ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಲ್ಲಿನಿಂದ ತೆಂಗಿನ ಸಿಪ್ಪೆ ಸಿಗಿವ ಗೌತಮವರ್ಮ ‘ಲಿಮ್ಕಾ’ ಪುಸ್ತಕಕ್ಕೆ

By Staff
|
Google Oneindia Kannada News

ಬೆಂಗಳೂರು : ಒಂದು ತೆಂಗಿನ ಕಾಯಿ ಸಿಪ್ಪೆ ಸುಲಿಯೋದಿಕ್ಕೆ ನಿಮಗೆ ಎಷ್ಟು ನಿಮಿಷ ಬೇಕು? 1,2,3.. ಚನ್ನಪಟ್ಟಣದ ಪಟ್ಲು ಗ್ರಾಮದ ಗೌತಮವರ್ಮ 1 ನಿಮಿಷಕ್ಕೆ 3 ತೆಂಗಿನಕಾಯಿ ಸಿಪ್ಪೆ ಸುಲಿಯಬಲ್ಲ ; ಅದೂ ಹಲ್ಲಿನಿಂದ. ಅಂತಿಮ ಬಿ.ಎ. ಓದುತ್ತಿರುವ ಈ ಬಹುಮುಖ ಪ್ರತಿಭೆ ‘ಲಿಮ್ಕಾ’ ದಾಖಲೆ ಪುಸ್ತಕ ಸೇರಲಿದ್ದಾನೆ.

ಶುಕ್ರವಾರ ಬೆಂಗಳೂರಿನ ಪ್ರೆಸ್‌ ಕ್ಲಬ್‌ ಮುಂದೆ ಮಾಧ್ಯಮದವರ ದಂಡು. 38 ನಿಮಿಷ 44 ಸೆಕೆಂಡುಗಳಲ್ಲಿ ಗೌತಮವರ್ಮ 51 ತೆಂಗಿನಕಾಯಿಗಳ ಸಿಪ್ಪೆಯನ್ನು ಸಿಗಿದು ಹಾಕಿ ದಾಖಲೆ ನಿರ್ಮಿಸಿದರು. 1997ರಲ್ಲಿ ಕೇರಳದ ಜಾರ್ಜ್‌ ಎಂಬುವರು 30 ಸೆಕೆಂಡುಗಳಲ್ಲಿ ಒಂದು ತೆಂಗಿನಕಾಯಿ ಸಿಪ್ಪೆ ಸುಲಿದಿದ್ದರು. 1999ರಲ್ಲಿ ಚಿಕ್ಕ ಮಗಳೂರಿನ ಅನಿಲ್‌ ಬಂಗೇರಾ ನಾಲ್ಕೂವರೆ ನಿಮಿಷಗಳಲ್ಲಿ 3 ತೆಂಗಿನಕಾಯಿ ಸಿಪ್ಪೆ ಸುಲಿದು ಹಾಕಿದ್ದರು. ಗೌತಮ ಈ ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ. ಗಿನ್ನೆಸ್‌ ಪುಸ್ತಕ ಸೇರುವ ಗುರಿ ಈತನದು.

ಜಿಲ್ಲಾ ಮಟ್ಟದ ಜೂಡೋ ಚಾಂಪಿಯನ್‌ ಕೂಡ ಆಗಿರುವ ಗೌತಮವರ್ಮ ರಾಜ್ಯ ಕುಸ್ತಿ ತಂಡದಲ್ಲೂ ಇದ್ದಾರೆ. ಸರ್ಕಾರದ ಕಣ್ಣಿಗೇ ಬೀಳದ ಇಂಥ ಪ್ರತಿಭೆಗೆ ತಕ್ಕ ಪ್ರೋತ್ಸಾಹ ಲಭಿಸಲಿ ಎಂಬ ಕಾರಣಕ್ಕೆ ಹೊಂಬೇಗೌಡ ಯುವಕರ ಸಂಘ, ಮಾಧ್ಯಮದವರಿಗೆ ಈತನನ್ನು ಪರಿಚಯಿಸಿತು.

ಚಲಿಸುವ ಮೋಟಾರ್‌ ಬೈಕ್‌ ಮೇಲೆ ಕೂತು, ಹ್ಯಾಂಡಲ್‌ ಹಿಡಿಯದೇ ತೆಂಗಿನಕಾಯಿ ಸುಲಿದಿರುವುದು, ಹಲ್ಲಿನಿಂದ 50 ಕೆ.ಜಿ. ಅಕ್ಕಿ ಮೂಟೆ ಎತ್ತಿರುವುದು, ಹಲ್ಲಿನಿಂದ ಸೈಕಲ್ಲನ್ನು ಕಚ್ಚಿ ತೆಂಗಿನ ಮರ ಏರಿರುವುದು- ಇವು ಗೌತಮನ ಇತರ ಸಾಧನೆಗಳು. 16 ವರ್ಷ ಪ್ರಾಯದವನಿದ್ದಾಗ ಹಲ್ಲಿನಿಂದ ತೆಂಗಿನಕಾಯಿ ಸುಲಿಯುವ ಗೀಳು ಹಚ್ಚಿಕೊಂಡ ಗೌತಮನ ಕಣ್ಣು ಈಗ ದಾಖಲೆಗಳತ್ತ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X