ಎನ್‌ಸಿಎ ಹುದ್ದೆಗೆ ಬ್ರಿಜೇಶ್ ಮೇಲೆ ಬೆರಣಿ ತಟ್ಟುತ್ತಿರುವ ಅನ್ಶುಮನ್
*ರಾಮರಾಜ್
ಬೆಂಗಳೂರು : ‘1999ರ ವಿಶ್ವ ಕಪ್‌ನಲ್ಲಿ ಬ್ರಿಜೇಶ್ ಪಟೇಲ್ ಅವರನ್ನು ಮ್ಯಾನೇಜರ್ ಮಾಡಿ ನಾನು ದೊಡ್ಡ ತಪ್ಪು ಮಾಡಿದೆ’ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಅನ್ಶುಮನ್ ಗಾಯಕವಾಡ್ ಕೊಟ್ಟಿದ್ದಾರೆ ಎನ್ನಲಾದ ಹೇಳಿಕೆಗೆ, ಕರ್ನಾಟಕ ರಾಜ್ಯ ಕ್ರಿಕೆಟ್ ಒಕ್ಕೂಟ (ಕೆಎಸ್‌ಸಿಎ)ದ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಕೆಂಡಾಮಂಡಲರಾಗಿದ್ದಾರೆ.
ಈ ಬಗೆಗೆ ಇಂಡಿಯಾ ಇನ್ಫೋ ಜತೆ ಅವರು ಅನೌಪಚಾರಿಕ ಹರಟೆಯಲ್ಲಿ ಆಡಿದ ಕೆಲ ಮಾತುಗಳು ಇಲ್ಲಿವೆ....
ನನ್ನನ್ನು ಮ್ಯಾನೇಜರ್ ಮಾಡಲು ಆತ ಯಾರು? ಆ ಕೆಲಸ ಮಾಡೋದು ಮಂಡಲಿ. ನಾನು ಯಾರದ್ದೋ ಕೆಲಸದಲ್ಲಿ ಮೂಗು ತೂರಿಸಿದವನಲ್ಲ. ಬೇಕಾದರೆ ಹುಡುಗರನ್ನೇ ಕೇಳಿ ? ನಾನಲ್ಲಿ ಕೆಲಸ ಮಾಡಿದ್ದರಿಂದಲೇ ಆತನ ಯೋಗ್ಯತೆ ಏನು ಅನ್ನೋದನ್ನ ಮಂಡಲಿಗೆ ನನ್ನ ವರದಿಯಲ್ಲಿ ತಿಳಿಸಲು ಸಾಧ್ಯವಾಯಿತು.
ಕಳೆದ 3 ವರ್ಷಗಳಲ್ಲಿ ಆತ ಕಿಸಿದಿರುವುದೇನು? ಬೌಲರ್‌ಗಳಾಗಲೀ, ಬ್ಯಾಟ್ಸ್‌ಮನ್‌ಗಳಾಗಲಿ ಆತನಿಂದ ಎಳ್ಳಷ್ಟೇನಾದರೂ ಕಲಿತಿದ್ದಾರಾ? 50 ಇತರೆ ರನ್ ಕೊಟ್ಟು, ರನ್ ಬೆನ್ನಟ್ಟುವಾಗ 3 ಓವರ್ ಕಳಕೊಂಡರೆ ಅದಕ್ಕೆ ನಾನು ಹೊಣೆಯೇ? ಹುಡುಗರನ್ನು ಸೇರಿಸಿ ಒಂದು ಚರ್ಚೆ ಮಾಡುತ್ತಿರಲಿಲ್ಲ. ತೆಂಡೂಲ್ಕರ್, ಮೊಂಗಿಯಾ ಮತ್ತೆ ದ್ರಾವಿಡ್ ಜೊತೆ ಆತ ಮರಾಠಿನಲ್ಲೇ ಮಾತಾಡುತ್ತಿದ್ದರು. ಆದರೆ ನಾನು ಕರ್ನಾಟಕದ ಹುಡುಗರ ಜೊತೆ ಕನ್ನಡದಲ್ಲಿ ಮಾತಾಡಿದರೆ ಆತನಿಗೆ ಕಿರಿಕಿರಿ! ಗಾಯಕವಾಡ್ ಹಾಗೂ ರವೀಂದ್ರ ಚಡ್ಡ. ಈ ಇಬ್ಬರೂ ಕ್ರಿಕೆಟ್ ದಿಗ್ಗಜಗಳು ! ಇಬ್ಬರ ಯೋಗ್ಯತೆ ಏನು ಅಂತ ಮಂಡಲಿಗೆ ನನ್ನ ವರದಿಯಲ್ಲಿ ಒಂದಿಂಚೂ ಬಿಡದೆ ತಿಳಿಸಿದ್ದೇನೆ.
ಎನ್‌ಸಿಎ ನಿರ್ದೇಶಕ ಸ್ಥಾನಕ್ಕೆ ಗಾಯಕವಾಡ್ ತಿಪ್ಪರಲಾಗ ?
ಗಾಯಕವಾಡ್, ಬ್ರಿಜೇಶ್ ವರನ್ನು ದೂರಲು ನಿಖರವಾದ ಕಾರಣ ಏನು ಅಂತ ಇನ್ನೂ ಗೊತ್ತಾಗಿಲ್ಲ. ಮಾಜಿ ಟೆಸ್ಟ್ ಆಟಗಾರ ಹನುಮಂತ ಸಿಂಗ್ ಬಿಟ್ಟು ಕೊಟ್ಟಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ನಿರ್ದೇಶಕ ಜಾಗೆ ಈಗ ತೆರವಾಗಿದ್ದು, ಗಾಯಕವಾಡ್ ಕಣ್ಣು ಅದರ ಮೇಲಿದೆ ಎಂಬುದು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
ಕಳೆದ ಮೇ. 1 ರಂದು ಬೆಂಗಳೂರಿನಲ್ಲಿ ಉದ್ಘಾಟನೆಗೊಂಡಿದ್ದ ಎನ್‌ಸಿಎಯನ್ನು ಇಲ್ಲಿಂದ ಎತ್ತಂಗಡಿ ಮಾಡಬೇಕೆಂದು ಬಿಸಿಸಿಐ ಹೇಳಿತ್ತು. ನಮ್ಮ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಬಿಗಿ ಪಟ್ಟಿನಿಂದ ಅದು ಬಹುತೇಕ ಬೆಂಗಳೂರಲ್ಲೇ ಉಳಿಯೋದು ಖಚಿತವಾಗಿದೆ.
ಬಿಸಿಸಿಐನ ಮಾಜಿ ಅಧ್ಯಕ್ಷ ರಾಜ್ ಸಿಂಗ್ ಡುಂಗಾರ್‌ಪುರ್ ನೇತೃತ್ವದ ಎನ್‌ಸಿಎ ಸಮಿತಿಯ ಸದಸ್ಯರೂ ಆಗಿರುವ ಬ್ರಿಜೇಶ್ ಪಟೇಲ್, ಅದರ ನಿರ್ದೇಶಕ ಸೀಟು ಹತ್ತುವ ಸಾಧ್ಯತೆಗಳಿವೆ. ಅದೇ ಸ್ಥಾನದ ಮೇಲೆ ಕಣ್ಣಿಟ್ಟಿರುವ ಗಾಯಕವಾಡ್, ಈ ಕಾರಣಕ್ಕೇ ಬ್ರಿಜೇಶ್ ಮೇಲೆ ಬೆರಣಿ ತಟ್ಟೋ ಯತ್ನ ಮಾಡುತ್ತಿದ್ದಾರೆ ಅನ್ನುವ ಮಾತುಗಳೂ ಕೇಳಿ ಬರುತ್ತಿವೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications