ಮಾರುತಿ ಉದ್ಯೋಗ್ ಖಾಸಗೀಕರಣದ ಲಾಭ ಅಮೆರಿಕಾ ಸಂಸ್ಥೆಗೆ!
ನ್ಯೂಯಾರ್ಕ್ : ಭಾರತದ ಜನಪ್ರಿಯ ಹಾಗೂ ಹಿರಿಯ ಕಾರು ಉತ್ಪಾದಿಸುವ ಸಂಸ್ಥೆ ಮಾರುತಿ ಉದ್ಯೋಗ್ ನಿಯಮಿತದ ಉದ್ದೇಶಿತ ಖಾಸಗೀಕರಣದಿಂದ ಅಮೆರಿಕದ ಜನರಲ್ ಮೋಟರ್ಸ್ ಕಾರ್ಪೊರೇಷನ್ಗೆ ಹೆಚ್ಚು ಲಾಭವಾಗಲಿದೆ ಎಂದು ಅಮೆರಿಕದ ವಾಣಿಜ್ಯ ಪತ್ರಿಕೆಯಾಂದು ವರದಿ ಮಾಡಿದೆ.
ಅಮೆರಿಕದ ಜನರಲ್ ಮೋಟರ್ಸ್ ಕಾರ್ಪೊರೇಷನ್ ಏಷ್ಯಾ ಖಂಡದಲ್ಲಿ ತನ್ನ ವಾಣಿಜ್ಯವಹಿವಾಟನ್ನು ವಿಸ್ತರಿಸಲು ತುದಿಗಾಲಿನಲ್ಲಿ ನಿಂತಿದ್ದು, ಮಾರುತಿ ಉದ್ಯೋಗ್ನ ಉದ್ದೇಶಿತ ಖಾಸಗೀಕರಣದ ಲಾಭ ಈ ಸಂಸ್ಥೆಗೆ ದೊರಕಲಿದೆ ಎಂದು ಪತ್ರಿಕೆ ಹೇಳಿದೆ.
ಮಾರುತಿ ಉದ್ಯೋಗ್ ಸಂಸ್ಥೆಯಲ್ಲಿ ಭಾರದ ಸರಕಾರ ಹಾಗೂ ಜಪಾನ್ ಸುಝುಕಿ ಮೋಟರ್ ನಿಗಮದ ಸಮಪಾಲಿದೆ. ಎರಡೂ ಶೇ. 50ರ ಪಾಲುದಾರಿಕೆ ಹೊಂದಿವೆ. ಆದರೆ, ಜನರಲ್ ಮೋಟಾರ್ಸ್ ಕಾರ್ಪೊರೇಷನ್ ಸುಝುಕಿ ಮೋಟರ್ಸ್ನಲ್ಲಿ ಶೇ. 20ರಷ್ಟು ಪಾಲುದಾರಿಕೆ ಪಡೆದಿದೆ. ಈಗ ಭಾರತ ಸರಕಾರ ಮಾರುತಿ ಉದ್ಯೋಗ್ನ ಷೇರು ಮಾರಾಟ ಮಾಡಿದರೆ, ಜನರಲ್ ಮೋಟಾರ್ಸ್ ಸಂಸ್ಥೆಯ ಮೇಲೆ ಹಿಡಿತ ಸಾಧಿಸುತ್ತದೆ ಎಂದೂ ವರದಿ ಹೇಳಿದೆ.
ಇದಕ್ಕೆ ಮತ್ತೂ ಒಂದು ಕಾರಣ ಇದೆ. 50ರಷ್ಟು ಪಾಲುದಾರಿಕೆ ಹೊಂದಿರುವ ಸುಝುಕಿ ಮೋಟರ್ಸ್ ಭಾರತ ಸರಕಾರ ಮಾರಲಿಚ್ಛಿಸಿರುವ ಷೇರುಗಳನ್ನು ಕೊಳ್ಳಲು ತಾನು ಇಚ್ಛಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ ಎಂಬ ಸುಳಿವೂ ದೊರೆತಿದೆ. ಮಿಗಿಲಾಗಿ ದೇವೂ, ಫೋರ್ಡ್ಗಳ ಭರಾಟೆಯಲ್ಲಿ 15-20 ವರ್ಷಗಳಷ್ಟು ಹಳೆಯದಾದ ಮಾರುತಿ ಕಾರು ಮಾದರಿಗಳು ಮಾರುಕಟ್ಟೆಯಲ್ಲಿ ತಮ್ಮ ಹಿಂದಿನ ಆಕರ್ಷಣೆ ಹಾಗೂ ಬೆಲೆ ಕಳೆದುಕೊಳ್ಳುತ್ತಿವೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications