ವರ್ಷವಿಡೀ ಹೆಣಗಾಡಿದ ಕೃಷ್ಣ ಸಪತ್ನೀಕರಾಗಿ ರಜಾ ಪ್ರವಾಸ
ಬೆಂಗಳೂರು : ರಾಜ್‌ಕುಮಾರ್ ಅಪಹರಣವಾದ ದಿನದಿಂದಲೂ ನಿದ್ದೆಗೆಟ್ಟು , ಶಾಂತಿ ಸುವ್ಯವಸ್ಥೆಗೆ ಭಂಗ ಬರದಂತೆ ಆಡಳಿತ ಯಂತ್ರವನ್ನು ನಿರ್ವಹಿಸಿದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು, ವಿಶ್ರಾಂತಿ ಪಡೆಯಲೋಸುಗ ಹಾಂಕಾಂಗ್, ಬ್ಯಾಂಕಾಕ್‌ನತ್ತ ಶುಕ್ರವಾರ ರಾತ್ರಿ ಪ್ರಯಾಣ ಬೆಳೆಸುತ್ತಿದ್ದಾರೆ.
ಸಕುಟುಂಬ ಪರಿವಾರ ಸಮೇತರಾಗಿ ಹಾಂಕಾಂಗ್, ಬ್ಯಾಂಕಾಕ್‌ನತ್ತ ತೆರಳುತ್ತಿರುವ ಕೃಷ್ಣ ಅವರೊಂದಿಗೆ, ಅವರ ಪತ್ನಿ ಪ್ರೇಮಾ ಕೃಷ್ಣ ಹಾಗೂ ಮಗಳು - ಅಳಿಯ ಸಹ ವಿಮಾನ ಏರಲಿದ್ದಾರೆ. ಈ ವರ್ಷದ ಕೊನೆಯ ಎರಡು ದಿನಗಳನ್ನು ಹಾಗೂ ಹೊಸ ವರ್ಷದ ಮೊದಲ ಮೂರು ದಿನಗಳನ್ನು ಸಂಪೂರ್ಣ ಖಾಸಗಿಯಾಗಿ ಕುಟುಂಬದ ಸದಸ್ಯರೊಂದಿಗೆ ಕಳೆಯಲಿಚ್ಛಿಸಿರುವ ಮುಖ್ಯಮಂತ್ರಿಗಳು 2000 ಉರುಳಿ, 2001 ಬೆಳಗಾಗುವ ಹೊತ್ತಿನಲ್ಲಿ ಕರ್ನಾಟಕದಲ್ಲಿ ಇರುವುದಿಲ್ಲ.
ಈ ಮುನ್ನ ವಿಶ್ರಾಂತಿಗಾಗಿ ಕೃಷ್ಣ ಅವರು ದುಬೈ ಹಾಗೂ ಅಮೆರಿಕಕ್ಕೆ ಹೋಗುತ್ತಾರೆ ಎಂಬ ವದಂತಿಗಳಿದ್ದವು. 2 ದಿನ ಖಾಸಗಿಯಾಗಿ ಕಳೆಯುವ ಅವರು, ರಾಜ್ಯಕ್ಕೆ ವಿದೇಶೀ ಬಂಡವಾಳ ಆಕರ್ಷಿಸುವ ಸಲುವಾಗಿ ವಾಣಿಜ್ಯೋದ್ಯಮಿಗಳೊಂದಿಗೆ ಮಾತುಕತೆ ನಡೆಸುವ ಕಾರ್ಯಕ್ರಮವೂ ಇದೆ ಎಂಬ ಊಹಾಪೋಹಗಳಿದ್ದವು. ಅಮೆರಿಕದಲ್ಲಿ ವಿಪರೀತ ಚಳಿ ಇರುವ ಕಾರಣ ಕೃಷ್ಣ , ಅಮೆರಿಕ ಪ್ರವಾಸವನ್ನು ರದ್ದು ಪಡಿಸಿದರು ಎಂದೂ ಹೇಳಲಾಗಿತ್ತು.
ಈಗಷ್ಟೇ ವಿಶ್ವಸನೀಯ ಮೂಲಗಳಿಂದ ಸಿಕ್ಕ ನಿಖರ ಮಾಹಿತಿಯ ರೀತ್ಯ ಎಲ್ಲ ಊಹಾಪೋಹಗಳಿಗೂ ಪೂರ್ಣ ವಿರಾಮ ಹೇಳುವಂತೆ ಮುಖ್ಯಮಂತ್ರಿಗಳು ಕುಟುಂಬದ ಸದಸ್ಯರೊಂದಿಗೆ ಶುಕ್ರವಾರ ರಾತ್ರಿ 8ಕ್ಕೆ ಚೆನ್ನೈಗೆ ತೆರಳಿ ಅಲ್ಲಿಂದ ಹಾಂಕಾಂಗ್, ಬ್ಯಾಂಕಾಕ್ ಹಾಗೂ ಇನ್ನಿತರ ಸ್ಥಳಗಳಿಗೆ ಭೇಟಿ ನೀಡಿ ಜನವರಿ 3ರಂದು ನಗರಕ್ಕೆ ವಾಪಸಾಗುತ್ತಿದ್ದಾರೆ.
( ನಮ್ಮ ಪ್ರತಿನಿಧಿಯಿಂದ )
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications