Get Updates
Get notified of breaking news, exclusive insights, and must-see stories!

ರಂಗದ ಮೇಲೆ ಶಂಕರ್‌ನಾಗ್‌ ಸ್ಮರಣೆ : ಡಿ.29 ರಿಂದ ರಂಗಶಂಕರ

ಬೆಂಗಳೂರು : ಎರಡು ಹಂತಗಳಲ್ಲಿ ದಿವಂಗತ ಶಂಕರನಾಗ್‌ ನೆನಪಿನ ರಂಗಶಂಕರ ನಾಟಕೋತ್ಸವ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ ಎಂದು ಸಂಕೇತ್‌ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಅರುಂಧತಿ ನಾಗ್‌ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಡಿಸೆಂಬರ್‌ 29ರಂದು 14 ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಉಳಿದ 13 ಜಿಲ್ಲಾ ಕೇಂದ್ರಗಳಲ್ಲಿ ಜನವರಿ 21ರಂದು ನಾಟಕೋತ್ಸವ ನಡೆಯುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅರುಂಧತಿ ನಾಗ್‌ ತಿಳಿಸಿದರು. ಶಂಕರನಾಗ್‌ ಜನ್ಮದಿನವಾದ ನವಂಬರ್‌ 9 ರಂದೇ ನಾಟಕೋತ್ಸವ ನಡೆಯಬೇಕಿದ್ದರೂ, ರಾಜ್‌ ಅಪಹರಣದ ಪ್ರಯುಕ್ತ ಉತ್ಸವವನ್ನು ಮುಂದೂಡಲಾಗಿತ್ತು ಎಂದರು.

ಯುವ ಪ್ರತಿಭೆಗಳು ಹಾಗೂ ಗ್ರಾಮೀಣ ತಂಡಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ರಂಗೋತ್ಸವದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಹೆಸರಾಂತ ಹಾಗೂ ಅನುಭವಿ ರಂಗ ತಂಡಗಳೊಂದಿಗೆ ಉದಯೋನ್ಮುಖ ತಂಡಗಳು, ನಾಟಕಕಾರರು ಪಾಲ್ಗೊಳ್ಳುತ್ತಿರುವುದು ಉತ್ಸವದ ವಿಶೇಷವಾಗಿದೆ. ಉತ್ಸವದ ಎಲ್ಲಾ ನಾಟಕಗಳನ್ನು ಅನಿಕೇತನ ಟ್ರಸ್ಟ್‌ ಪ್ರಾಯೋಜಿಸುತ್ತಿದೆ ಎಂದು ಅರುಂಧತಿ ತಿಳಿಸಿದರು.

(ಇನ್ಪೊ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+