ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂ ಜಿ - ಬ್ರಿಗೇಡ್‌ ರೋಡ್‌ಗೆ ಹೊಸ ವರ್ಷದ ಪಾರ್ಟಿಗೆ ಕಾಲಿಡುವ ಮುನ್ನ...

By Staff
|
Google Oneindia Kannada News

ಬೆಂಗಳೂರು : ಬರೋ ಭಾನುವಾರ ವರ್ಷದ ಕೊನೆ ದಿನಕ್ಕೆ ವಿದಾಯ ಹೇಳಿ ಹೊಸ ವರ್ಷ ಬರಮಾಡಿಕೊಳ್ಳಲು ಗೆಳೆಯರೊಂದಿಗೆ ಎಂ.ಜಿ.- ಬ್ರಿಗೇಡ್‌ ರೋಡ್‌ಗಳಿಗೆ ಹೋಗೋ ಪ್ರೋಂಗ್ರಾಂ ನಿಮ್ಮಲ್ಲಿದ್ದರೆ ಈ ಸುದ್ದಿಯನ್ನು ಗಮನ ಇಟ್ಟು ಓದಿ......

ಆವತ್ತು ಸಂಜೆ 6.30ರಿಂದ ಮರುದಿನ (2001, ಜನವರಿ, ಸೋಮವಾರ) ಬೆಳಗಿನ ಜಾವ 5 ಗಂಟೆವರೆಗೆ ಎಂ.ಜಿ.ರಸ್ತೆ, ಸೆಂಟ್‌ ಮಾರ್ಕ್ಸ್‌ ರಸ್ತೆ, ಬ್ರಿಗೇಡ್‌ ರಸ್ತೆ ಹಾಗೂ ಚರ್ಚ್‌ಸ್ಟ್ರೀಟ್‌ಗಳಲ್ಲಿ ನಿಮ್ಮ ಗಾಡಿ ಬಿಡುವಂತಿಲ್ಲ. ಹೊಸ ವರ್ಷದ ಕಾಕ್‌ಟೈಲ್‌ ಪಾರ್ಟಿಗೆ ಹೇಳಿ ಮಾಡಿಸಿದ ತಾಣ ಎಂ.ಜಿ. ಹಾಗೂ ಬ್ರಿಗೇಡ್ಸ್‌ ಎಂಬ ಜನರ ಲೆಕ್ಕಾಚಾರವನ್ನು ಈ ಬಾರಿ ಸ್ವಲ್ಪ ತಿದ್ದಿ, ಪೊಲೀಸರ ಹೊರೆಯನ್ನು ಒಂದಿಷ್ಟು ಇಳಿಸುವ ನಿರ್ಣಯವಿದು. ಪೊಲೀಸ್‌ ಕಮಿಷನರ್‌ ಟಿ.ಮಡಿಯಾಳ್‌ ಈ ಸುದ್ದಿ ಕೊಟ್ಟಿದ್ದಾರೆ.

ಅನಿಲ್‌ ಕುಂಬ್ಳೆ ವೃತ್ತದಿಂದ ಮೇಯೋ ಹಾಲ್‌ ಜಂಕ್ಷನ್‌, ಬ್ರಿಗೇಡ್‌ ರಸ್ತೆಯ ಆರ್ಟ್ಸ್‌ ಮತ್ತು ಕ್ರಾಫ್ಟ್‌ ವೃತ್ತದಿಂದ ಒಪೆರಾ ವೃತ್ತ, ಚರ್ಚ್‌ಸ್ಟ್ರೀಟ್‌ ಜಂಕ್ಷನ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್‌, ಮ್ಯೂಸಿಯಂ ಜಂಕ್ಷನ್‌ನಿಂದ ಮದ್ರಾಸ್‌ ಬ್ಯಾಂಕ್‌ ಜಂಕ್ಷನ್‌, ವೆಸ್ಟ್‌ ಹೌಸ್‌ ರಸ್ತೆ ಜಂಕ್ಷನ್‌ನಿಂದ ಬ್ರಿಗೇಡ್‌ ರಸ್ತೆ ಜಂಕ್ಷನ್‌ , ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಕಬ್ಬನ್‌ ರಸ್ತೆ ಜಂಕ್ಷನ್‌ವರೆಗೆ ಈ ನಿರ್ಬಂಧ ಅನ್ವಯಿಸಲಿದೆ. ಈ ರಸ್ತೆಗಳಲ್ಲಿ ನಿಗದಿತ ಸಮಯದಲ್ಲಿ ವಾಹನ ಓಡಿಸುವುದಷ್ಟೇ ಅಲ್ಲ. ಅವುಗಳನ್ನು ಪಾರ್ಕ್‌ ಮಾಡುವಂತೆಯೂ ಇಲ್ಲ. ಅರ್ಥಾತ್‌ ನೀವು ಎಂಥ ಚೆಂದದ ಕಾರ್‌ ಇಟ್ಟುಕೊಂಡಿದ್ದರೂ ಎಲ್ಲೋ ನಿಲ್ಲಿಸಿ, ಕೊಂಚ ದೂರ ನಡೆಯುವ ಮನಸ್ಸು ಮಾಡಬೇಕು. ಇಲ್ಲವಾದರೆ ಎಲೈಟ್‌ ಜಾಗೆಯಲ್ಲಿ ಪಾರ್ಟಿ ಆಚರಿಸುವ ನಿಮ್ಮ ಯೋಜನೆಯನ್ನು ಕೈಬಿಡಬೇಕು.

ಆ ಸಮಯದಲ್ಲಿ ಅಲಸೂರು ಕಡೆಗೆ ಸಂಚರಿಸುವ ವಾಹನಗಳು ಅನಿಲ್‌ ಕುಂಬ್ಳೆ ವೃತ್ತದಿಂದ ವಯಾ ಕಬ್ಬನ್‌ ರಸ್ತೆ, ವೆಬ್‌ ಜಂಕ್ಷನ್‌ಗೆ ಹೋಗಬಹುದಾಗಿದೆ. ಅಲಸೂರಿನಿಂದ ಮೆಜೆಸ್ಟಿಕ್‌ ಕಡೆಗೆ ಹೋಗೋ ವಾಹನಗಳು, ಮೇಯೋ ಹಾಲ್‌ ಜಂಕ್ಷನ್‌ನಿಂದ ರೆಸಿಡೆನ್ಸಿ ರಸ್ತೆ ಮೂಲಕ ಸಂಚರಿಸಬಹುದು.

ನಮ್ಮ ನಿಮ್ಮ ಮೋಜಿನ ನಡುವೆ ಹೈರಾಣಾಗಿರುವ ಪೊಲೀಸರು

ಈಗ ರಂಜಾನ್‌ ಗಸ್ತು. ಅದರ ನಡುವೆಯೇ ಕ್ರಿಸ್‌ಮಸ್‌ ತಂದ ಸುಸ್ತು. ಇಷ್ಟು ಸಾಲದೆಂಬಂತೆ ಹೊಸ ವರ್ಷದ ಜನರ ಹುಚ್ಚು ಮೋಜಿನಾಚರಣೆ ವೇಳೆ ಆಗಬಾರದ್ದು ಆಗದಿರಲೆಂದು ಹದ್ದಿನ ಕಣ್ಣಿಂದ ಕಾಯಬೇಕಿದ ಅನಿವಾರ್ಯತೆ ಪೊಲೀಸರದ್ದು. ಕಳೆದ ವಾರ ಕೆಲ ಪೊಲೀಸ್‌ ತುಕಡಿಗಳು ಹೃತಿಕ್‌ ರೋಷನ್‌ ಮದುವೆಗೆ ಕಾವಲಾಗಿ ನಿಂತು, ಎರಡೆರಡು ಇಡ್ಲಿ ತಿಂದು ಹೊಟ್ಟೆ ತುಂಬಿಸಿಕೊಂಡಿದ್ದರು ! ರಂಜಾನ್‌ ಗಸ್ತಿನಲ್ಲಿ ಎಷ್ಟೋ ಪೊಲೀಸರು ಉಪವಾಸ ಇದ್ದಿರುವ ಪ್ರಸಂಗಗಳೂ ಇವೆ. ಒಟ್ಟಿನಲ್ಲಿ ವರ್ಷಾಂತ್ಯ ಪೊಲೀಸರ ಪಾಲಿಗೆ ನರಕಪ್ರಾಯವಾಗಿದೆ.

ಬಾಲಂಗೋಚಿ : ಜನ ಹಿತ ರಕ್ಷಣೆ ಪೊಲೀಸರ ಕರ್ತವ್ಯ. ಅಂತೆಯೇ, ಪೊಲೀಸರ ಕನಿಷ್ಠ ಅಗತ್ಯಗಳನ್ನು ಪೂರೈಸುವುದು ನಮ್ಮ ನಿಮ್ಮ ಕರ್ತವ್ಯ. ಅಲ್ಲವೇ!

(ಇನ್ಪೊ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X