ತೆಂಗಿನ ಮರದಿಂದ ನೀರಾ : ರೈತ ಸಂಘದ ಹೊಸ ವರ್ಷದ ಕಾರ್ಯಕ್ರಮ
ಹಾಸನ : ರಾಜ್ಯ ರೈತ ಸಂಘ ತೆಂಗಿನ ಮರದಿಂದ ನೀರಾ ಇಳಿಸುವ ಕಾರ್ಯಕ್ರಮವನ್ನು ಜನವರಿ 4ರಿಂದ ಅರಸಿಕೆರೆಯಲ್ಲಿ ಆರಂಭಿಸಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕೋಡಿ ಹಳ್ಳಿ ಚಂದ್ರ ಶೇಖರ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ನೀರಾ ಇಳಿಸುವ ಕಾರ್ಯಕ್ರಮದಿಂದಾಗಿ ತೆಂಗಿನ ರೋಗಕ್ಕೆ ತಗುಲಿದ ನುಸಿರೋಗ ಬಿಡುಗಡೆ ಪಡೆಯಬಹುದು ಎಂದರು. ಅಖಿಲ ಭಾರತ ಕಿಸಾನ್ ಸಂಘದ ಅಧ್ಯಕ್ಷ ಟಿಕಾಯತ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಕೇರಳ ರಾಜ್ಯ ರೈತ ಒಕ್ಕೂಟದ ಅಧ್ಯಕ್ಷ ಜ್ಯೋಬಿ ಸೆಬಾಸ್ಟನ್ ಮುಖ್ಯ ಅತಿಥಿಗಳಾಗಿರುತ್ತಾರೆ.
ನೀರಾ ಇಳಿಸುವ ಮೊದಲು ಸಣ್ಣ ಬುರುಡೆ ಸಮೇತ ತೆಂಗಿನ ಮರದಲ್ಲಿ ಇರುವ ಎಲ್ಲ ಫಸಲನ್ನು ತೆಗೆಯಲಾಗುವುದು. ನಂತರ ಹೊಂಬಾಳೆಗೆ ಕಲ್ನಾರು ಕಲ್ಲು ಸಕ್ಕರೆ ಸಮೇತ ಮಡಿಕೆ ಕಟ್ಟಿ ನೀರಾ ಇಳಿಸಲಾಗುವುದು. ನುಸಿಯ ಆಯುಸ್ಸು ಕೇವಲ 20 ದಿನ ಮಾತ್ರ. ನೀರಾ ಇಳಿಸುವುದರಿಂದ ನುಸಿ ರೋಗಾಣು ಆಹಾರ ಸಿಗದೇ ಸತ್ತುಹೋಗುತ್ತದೆ.
ನುಸಿ ರೋಗದ ಹಾವಳಿಯಿಂದ ತೆಂಗಿನ ಬೆಲೆ ಕುಸಿದಿದ್ದು, ರೂಪಾಯಿ ಒಂದಕ್ಕೆ ಒಂದು ತೆಂಗಿನ ಕಾಯಿಯಂತೆ ಹಳ್ಳಿಗಳಲ್ಲಿ ಮಾರಾಟವಾಗುತ್ತಿದೆ. ಅಲ್ಲದೇ ಕೇಂದ್ರದ ಉದಾರೀಕರಣ ನೀತಿಯಿಂದ ಇಂಡೋನೇಷಿಯಾ ಮತ್ತು ಮಲೇಷಿಯಾದವರು ಸ್ಪರ್ಧಾತ್ಮಕ ದರದಲ್ಲಿ ಅಡಿಗೆ ಎಣ್ಣೆ ಮಾರುವುದಾಗಿ ಹೇಳುತ್ತಿದ್ದಾರೆ ಎಂದು ತೆಂಗು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಚಂದ್ರ ಶೇಖರ್ ಹೇಳುತ್ತಾರೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications