ಡಿ. 29ಕ್ಕೆ ಹೊಸ ಮಾಧ್ಯಮ ತರಬೇತಿ ಸಂಸ್ಥೆ ಉದ್ಘಾಟನೆ
ಬೆಂಗಳೂರು : ಪತ್ರಿಕೋದ್ಯಮ ಕಲೆಯನ್ನು ವಿಶೇಷ ಆಸ್ಥೆಯಿಂದ ಕಲಿಸುವ ಉದ್ದಿಶ್ಯ ಹೊಂದಿರುವ 'ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಜರ್ನಲಿಸಂ ಅಂಡ್ ನ್ಯೂ ಮೀಡಿಯಾ"ವನ್ನು ನಗರದ ಹೊರವಲದಲ್ಲಿರುವ ಕುಂಬಳಗೋಡಿನಲ್ಲಿ ಕೇಂದ್ರ ಕಾನೂನು ಸಚಿವ ಅರುಣ್ ಜೈಟ್ಲಿ ಡಿಸೆಂಬರ್ 29 ರಂದು ಉದ್ಘಾಟಿಸಲಿದ್ದಾರೆ.
ಭಾರತದಲ್ಲೇ ಇಂಥ ಸಂಸ್ಥೆ ತಲೆ ಎತ್ತುತ್ತಿರುವುದು ಇದೇ ಮೊದಲು. ಕೊಲಂಬಿಯಾ ಪತ್ರಿಕೋದ್ಯಮ ಪದವಿ ವಿದ್ಯಾಲಯದ ಪ್ರತಿಬಿಂಬ ಭಾರತೀಯ ಮೂಲದ ಈ ಸಂಸ್ಥೆ. ಇಲ್ಲಿ 2 ಸೆಮಿಸ್ಟರ್‌ಗಳ ಡಿಪ್ಲೊಮ ಪದವಿ ಬೋಧಿಸಲಾಗುತ್ತದೆ. ಇನ್ನು 2 ವರ್ಷಗಳಲ್ಲಿ ದೂರದರ್ಶನ ಮತ್ತು ರೇಡಿಯೋ ಜರ್ನಲಿಸಂ ಕೋರ್ಸ್‌ಗಳನ್ನೂ ಪ್ರಾರಂಭಿಸುವ ಉದ್ದೇಶ ಹೊಂದಿರುವ ಈ ಸಂಸ್ಥೆ ಯನ್ನು ಆದಿಚುಂಚನಗಿರಿ ಸಂಸ್ಥಾನ ಹಾಗೂ ಜಾರ್ಜ್ ಪ್ರತಿಷ್ಠಾನ ಜಂಟಿಯಾಗಿ ಸ್ಥಾಪಿಸಿವೆ.
ಜಾರ್ಜ್ ಪ್ರತಿಷ್ಠಾನದ ವ್ಯವಸ್ಥಾಪಕ ಸಂಸ್ಥಾಪಕ ಅಬ್ರಹಾಂ ಹಾಗೂ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಾಧ್ಯಮಗಳಿಗೆ ಮಂಗಳವಾರ ಈ ವಿಷಯ ತಿಳಿಸಿದರು. ಮೊದಲ ವರ್ಷ 40 ವಿದ್ಯಾರ್ಥಿಗಳನ್ನು ಆರಿಸಿ, ಮುದ್ರಣ ಹಾಗೂ ವೆಬ್ ಪತ್ರಿಕೋದ್ಯಮದ ಶಿಕ್ಷಣ ಬೋಧಿಸಲಾಗುವುದು. ಪ್ರಾಯೋಗಿಕ ಕಲಿಕೆಗೆ ಇಲ್ಲಿ ಒತ್ತು. ಸಾಧ್ಯವಾದಲ್ಲಿ ವಿದ್ಯಾರ್ಥಿಗಳನ್ನು ಇಂಟರ್ನ್‌ಷಿಪ್‌ಗೆ ಅಮೆರಿಕೆಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.
ಇಲ್ಲಿ ಶುಲ್ಕ ಭಾರಿ ಎನಿಸಬಹುದು. ಆದರೆ ವಾಸ್ತವವಾಗಿ ಅಭ್ಯಾಸ ಮಾಡುವವರಿಂದ ನಮಗೆ ಖರ್ಚಿನ ಅರ್ಧದಷ್ಟು ಹಣ ಮಾತ್ರ ಸಂದಾಯವಾಗುತ್ತದೆ. ಒಟ್ಟು ಶುಲ್ಕ 1.2 ಲಕ್ಷ ರುಪಾಯಿ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಲಿಯ ಮಾನ್ಯತೆ ಪಡೆಯಲೂ ಸಂಸ್ಥೆ ಪ್ರಯತ್ನಿಸುತ್ತಿದೆ ಎಂದು ಜಾರ್ಜ್ ತಿಳಿಸಿದರು.
ಕೇಂದ್ರ ಪ್ರವಾಸ ಖಾತೆ ಸಚಿವ ಅನಂತ ಕುಮಾರ್ ಹಾಗೂ ಮುಖ.್ಯಮಂತ್ರಿ ಎಸ್.ಎಂ.ಕೃಷ್ಣ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳು. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಇಂಗ್ಲೆಂಡ್ ಶಾಖೆಯ ಮುಖ್ಯಸ್ಥ ಬಾರ್ಬರ ಕ್ರಾಸೆಟ್ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications