Get Updates
Get notified of breaking news, exclusive insights, and must-see stories!

ಅಯ್ಯಪ್ಪನ ದರ್ಶನಕ್ಕೆ ನೂಕು ನುಗ್ಗಲು, ಕಾಲ್ತುಳಿತಕ್ಕೆ ಇಬ್ಬರು ಬಲಿ

ಕೊಟ್ಟಾಯಂ : ಶಬರಿ ಮಲೆಯ ದೇವರ ದರ್ಶನಕ್ಕಾಗಿ ಕಾಯುತ್ತಿದ್ದ ಜನರ ಸರತಿ ಸಾಲಿನಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ ಇಬ್ಬರು ಮೃ ತಪಟ್ಟಿದ್ದು, ಹಲವಾರು ಭಕ್ತಾದಿಗಳಿಗೆ ಗಂಭೀರ ಗಾಯಗಳಾಗಿರುವುದಾಗಿ ವರದಿಯಾಗಿದೆ.

ಸೋಮವಾರ ಬೆಳಿಗ್ಗೆ ಮಾರಕ್ಕೊಮ್‌ ಬಳಿ ಅಯ್ಯಪ್ಪ ದೇವರ ದರ್ಶನಕ್ಕಾಗಿ ಸಾಲು ನಿಂತಿದ್ದ ಜನರ ನೂಕು ನುಗ್ಗಲಲ್ಲಿ ಸರತಿಯ ಸಾಲು ಅಸ್ತವ್ಯಸ್ತವಾದಾಗ ಜನರು ಕೆಳಗೆ ಬಿದ್ದು ಇತರ ಭಕ್ತರ ಕಾಲ್ತುಳಿತಕ್ಕೆ ಸಿಕ್ಕಿದ್ದಾರೆ. ಗಾಯಾಳುಗಳನ್ನು ಪಂಪಾ ಕ್ಷೇತ್ರದ ಬಳಿಯ ಆಸ್ಪತ್ರೆಗೆ ಸಾಗಿಸಲಾಗಿದೆ.

ಮಂಗಳವಾರ ಮಂಡಲ ಪೂಜೆ ನಡೆಯಲಿದ್ದುದರಿಂದ ಭಕ್ತರು ಒಂದು ದಿನ ಮುಂಚಿತವಾಗಿ ಸನ್ನಿಧಾನಕ್ಕೆ ಬಂದು ಕಾಯುತ್ತಿದ್ದು , ಸೋಮವಾರ ಜನಸಂದಣಿ ದಟ್ಟವಾಗಿತ್ತು ಎಂದು ದೇವಸ್ಥಾನದ ಮಂಡಳಿಯ ಅಧಿಕಾರಿಗಳು ಹೇಳಿದ್ದಾರೆ. ಎರಡು ವರ್ಷದ ಹಿಂದೆ ಅಯ್ಯಪ್ಪನ ದರ್ಶನಕ್ಕೆ ಇದೇ ರೀತಿಯ ನೂಕು ನುಗ್ಗಲು ಉಂಟಾಗಿ ಅನೇಕ ಭಕ್ತರು ಮೃತರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+