ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ನಲ್ಲಿ ಬಾಂಬ್ ಪತ್ತೆ : ಐಎಸ್‌ಐ ಕೈವಾಡದ ಶಂಕೆ
ಬೆಂಗಳೂರು : ಮೀರಜ್‌ಗೆ ನಗರದಿಂದ ಭಾನುವಾರ ರಾತ್ರಿ ಹೊರಟಿದ್ದ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲಿನಲ್ಲಿ ಟೈಂ ಬಾಂಬ್ ಪತ್ತೆಯಾಗಿದ್ದು , ಈ ದಾರಿಯಲ್ಲಿ ರೈಲು ಸಂಚಾರವನ್ನು ಸ್ವಲ್ಪ ಹೊತ್ತು ತಡೆಯ ಹಿಡಿಯಲಾಗಿತ್ತು.
ಇದೇ ರೈಲಿನ ಪ್ರಥಮ ದರ್ಜೆ ಬೋಗಿಯಲ್ಲಿ ಭಾರೀ ನೀರಾವರಿ ಸಚಿವ ಎಚ್.ಕೆ. ಪಾಟೀಲ್ ಮತ್ತು ಮಾಜಿ ಮುಖ್ಯ ಮಂತ್ರಿ ಎಸ್. ಬಂಗಾರಪ್ಪ ಪ್ರಯಾಣಿಸುತ್ತಿದ್ದರು. ರೈಲಿನಲ್ಲಿ ರುವ ಟೈಂಬಾಬ್ ಎನ್ನಲಾಗಿರುವ ರೇಡಿಯಂನಂತಹ ವಸ್ತುವಿನ ಬಳಿ ಗಡಿಯಾರದಂತಹ ವಸ್ತುವೊಂದು ಪತ್ತೆಯಾಗಿದ್ದು ಅದು ಟಿಕ್ ಟಿಕ್ ಶಬ್ದ ಮಾಡುತ್ತಿತ್ತು. ಅದನ್ನು ಲ್ಯಾಬ್‌ನಲ್ಲಿ ಪರೀಕ್ಷಿಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಟಿ. ಮಡಿಯಾಳ್ ಹೇಳಿದರು.
ಚಲಿಸುತ್ತಿದ್ದ ಎಸ್-1 ಬೋಗಿಯಲ್ಲಿ ಪೊಲೀಸ್ ಪೇದೆ ವೆಂಕಟೇಶ್ ಎಂಬವರು ಶೌಚಾಲಯದಲ್ಲಿ ಮಿಂಚುವ ವಸ್ತುವನ್ನು ಕಂಡು ಬೊಬ್ಬೆ ಹಾಕಿದಾಗ ಮಲ್ಲೇಶ್ವರಂ ಬಳಿ ರೈಲಿನ ಚೈನು ಎಳೆದು ನಿಲ್ಲಿಸಲಾಯಿತು. ಕೂಡಲೇ ರೈಲು ನಿಲ್ಲಿಸಿ ಶ್ವಾನದಳದವರು ಮತ್ತು ಬಾಂಬ್ ಪತ್ತೆ ದಳದವರು ಬಾಂಬ್‌ನ್ನು ಪತ್ತೆ ಹಚ್ಚಿದರು. ಬಾಂಬ್ ಇರುವ ಬೋಗಿಯನ್ನು ದೂರಕ್ಕೆ ಕೊಂಡೊಯ್ದು ತಪಾಸಣೆ ನಡೆಸಿ, ರಾತ್ರಿ 11.15ಕ್ಕೆ ರೈಲು ಹೊರಡಲು ಸಿದ್ಧವಾಯಿತು.
ಕೇಂದ್ರ ಗೃಹ ಸಚಿವ ಎಲ್. ಕೆ. ಅಡ್ವಾಣಿ ನಗರಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ ರೈಲಿನಲ್ಲಿ ಬಾಂಬ್ ಇರುವ ಘಟನೆ ನಡೆದಿರುವುದರಿಂದ ಈ ಘಟನೆಯ ಹಿಂದೆ ಪಾಕಿಸ್ಥಾನದ ಐಎಸ್‌ಐನ ಕೈವಾಡ ಇರಬಹುದು ಎಂಬ ಶಂಕೆಯಿದೆ. ಘಟನೆ ನಡೆದ ಸ್ಥಳಕ್ಕೆ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ಪೊಲೀಸ್ ಮಹಾನಿರ್ದೇಶಕ ಸಿ. ದಿನಕರ್ ಮತ್ತು ನಗರ ಪೊಲೀಸ್ ಕಮಿಷನರ್ ಟಿ. ಮಡಿಯಾಳ್ ಭೇಟಿ ನೀಡಿದ್ದರು.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications