ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗರೂ ಕಿವಿ ಹಿಂಡಿದ ಕಿವಿ ವನಿತೆಯರಿಗೆ ವಿಶ್ವಕಪ್‌ ಕ್ರಿಕೆಟ್‌ ಪ್ರಶಸ್ತಿ

By Staff
|
Google Oneindia Kannada News

ಲಿಂಕನ್‌ : ಶನಿವಾರ ನಡೆದ ಜಿದ್ದಾಜಿದ್ದಿ ಫೈನಲ್ಸ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಮೂಲಕ ಅಚ್ಚರಿ ಜಯ ಸಾಧಿಸಿದ ನ್ಯೂಜಿಲೆಂಡ್‌ ವನಿತೆಯರು ಮಹಿಳಾ ವಿಶ್ವಕಪ್‌ ಪ್ರಶಸ್ತಿ ಗೆದ್ದುಕೊಂಡರು.

ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ ತಂಡ 48.4 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 184 ರನ್‌ ಗಳಿಸಿತು. ಆದರೆ, 49.1 ಓವರ್‌ಗಳಲ್ಲಿ 180 ರನ್‌ಗಳಿಗೆ ಎಲ್ಲಾ ವಿಕೆಟ್‌ ಕಳೆದುಕೊಂಡ ಫೇವರಿಟ್‌ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್‌ಗೆ ಚಾಂಪಿಯನ್‌ ಪಟ್ಟ ಬಿಟ್ಟು ಕೊಟ್ಟಿತು.

ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ ಬ್ಯಾಟಿಂಗ್‌ ಅಷ್ಟೇನೂ ಆಕರ್ಷಕವಾಗಿರಲಿಲ್ಲ . 3 ಬೌಂಡರಿ ನೆರವಿನಿಂದ 41 ರನ್‌ ಗಳಿಸಿದ ರ್ಯಾಮೆಲ್‌ ಹಾಗೂ 6 ಬೌಂಡರಿ ಚಚ್ಚಿ 34 ರನ್‌ ಕಲೆ ಹಾಕಿದ ರಾಲ್ಸ್‌ , ತಂಡ ಗೌರವ ಮೊತ್ತ ತಲುಪವಲ್ಲಿ ನೆರವಾದರು. ಆಸ್ಟ್ರೇಲಿಯಾ ಪರ ಫಿಜ್‌ಪ್ಯಾಟ್ರಿಕ್‌ 3, ಮ್ಯಾಗ್ರೇಗರ್‌ ಹಾಗೂ ಮ್ಯಾಸನ್‌ ತಲಾ 2 ವಿಕೆಟ್‌ ವಿಕೆಟ್‌ ಉರುಳಿಸಿದರು.

ಕಿವೀಸ್‌ನ ಸಾಧಾರಣ ಸವಾಲನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಆರಂಭದಲ್ಲೇ ಎಡವಿತು. 2 ರನ್‌ಗೆ ಮೊದಲ 2 ವಿಕೆಟ್‌ ಕಳೆದುಕೊಂಡಿತು. ನಾಯಕಿ ಬೆಲಿಂಡಾ ಕ್ಲಾರ್ಕ್‌ ಆಕರ್ಷಕ 91 ರನ್‌ ಗಳಿಸಿ ಜಯದ ಆಸೆ ಚಿಗುರಿಸಿದರಾದರೂ, ಅವರ ವಿಕೆಟ್‌ ಪತನದೊಂದಿಗೆ ನ್ಯೂಜಿಲೆಂಡ್‌ ಗೆಲುವಿನ ವೇದಿಕೆಯೂ ನಿರ್ಮಾಣವಾಯಿತು. ಕೊನೆಯ ಓವರ್‌ನಲ್ಲಿ 5 ರನ್‌ ಗಳಿಸಬೇಕಿದ್ದ ಆಸ್ಟ್ರೇಲಿಯಾ, ಮೊದಲ ಚೆಂಡಿನಲ್ಲೇ ವಿಕೆಟ್‌ ಕಳೆದುಕೊಳ್ಳುವ ಮೂಲಕ ಚಾಂಪಿಯನ್‌ ಕನಸನ್ನು ನೀಗಿಕೊಂಡಿತು. ಕಿವೀಸ್‌ ಪರ ಕೀನನ್‌, ಪುಲ್ಲರ್‌ ಹಾಗೂ ನಿಕೋಲ್ಸ ನ್‌ ತಲಾ 2 ವಿಕೆಟ್‌ ಪಡೆಯುವ ಮೂಲಕ ಯಶಸ್ವಿ ಬೌಲರ್‌ ಎನಿಸಿದರು.

(ಇನ್ಫೊ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X