Get Updates
Get notified of breaking news, exclusive insights, and must-see stories!

ಇಬ್ಬನಿಯ ಮರೆಯಲ್ಲಿ ಮಬ್ಬಾದ ಬೆಳಕು

ಬೆಂಗಳೂರು : ರಾಜ್ಯದಲ್ಲಿ ಬೆಳಗಿನ ವೇಳೆ ಇಬ್ಬನಿ ಸುರಿಯುತ್ತಿದೆ. ಎಲೆಗಳ ಮೇಲೆ, ಅರಳಿದ ಹೂಗಳ ಮೇಲೆ ಮುತ್ತಿನಂತೆ ಮಂಜಿನ ಹನಿಗಳು ಮನೆ ಮಾಡಿರುತ್ತವೆ. ಆದರೆ, ಈ ಸೊಬಗು ಕಾಣಲು ಸೂರ್ಯ ಹುಟ್ಟುವ ಮೊದಲೇ ಏಳಬೇಕಲ್ಲ ಎಂಬುದೇ ದೊಡ್ಡ ಚಿಂತೆ.

ಕಾರಣ ಉತ್ತರದ ಕಡೆಯಿಂದ ಬೀಸುತ್ತಿರುವ ಶೀತ ಮಾರುತ, ತಡವಾಗಿ ಉದಯಿಸುವ ಸೂರ್ಯ ಮಿಗಿಲಾಗಿ ರಾತ್ರಿಯ ವೇಳೆ ಕುಸಿಯುತ್ತಿರುವ ತಾಪಮಾನದ ನಡುವೆಯೂ ರಾಜ್ಯದಲ್ಲಿ ಒಣಹವೆ ಮುಂದುವರಿದಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡುಗಳಲ್ಲಿ ರಾತ್ರಿಯ ಉಷ್ಣಾಂಶ ಸಾಮಾನ್ಯವಾಗಿದ್ದರೆ, ಕರಾವಳಿಯ ಅನೇಕ ಕಡೆಗಳಲ್ಲಿ ರಾತ್ರಿಯ ಉಷ್ಣಾಂಶದಲ್ಲಿ ಬದಲಾವಣೆ ಕಂಡುಬಂದಿದೆ.

ರಾಜ್ಯದಲ್ಲಿಯೇ ಕನಿಷ್ಠ ತಾಪಮಾನ ಗುಲ್ಬರ್ಗಾದಲ್ಲೇ ಮತ್ತೆ ದಾಖಲಾಗಿದೆ. ಅಲ್ಲಿ 11ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ಇತ್ತು. ಮುನ್ಸೂಚನೆಯಂತೆ ರಾಜ್ಯದಲ್ಲಿ ಮತ್ತೆ ಒಣಹವೆಯೇ ಮುಂದುವರಿಯಲಿದೆ. ಸ್ಥಳೀಯ ಹವಾಮಾನ ಮುನ್ಸೂಚನೆಯಂತೆ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಮಾನ್ಯವಾಗಿ ನಿರ್ಮಲವಾದ ಆಕಾಶವಿದ್ದು, ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುವ ಸಾಧ್ಯತೆಗಳಿವೆ. ಬೆಳಗಿನ ವೇಳೆ ಮಂಜು ಅಥವಾ ಇಬ್ಬನಿ ಸುರಿಯಲಿದೆ. ಮುಂಜಾನೆಯಂತೂ ಬೆಂಗಳೂರಲ್ಲಿ ರಸ್ತೆಯೇ ಕಾಣದಂತೆ ಮಂಜು ಮುಸುಕಿರುತ್ತದೆ. ಸೂರ್ಯನ ಬೆಳಕೂ ನಸುಕಿನಲ್ಲಿ ಮಬ್ಬಾಗಿ ಹೋಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+