ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಟ್‌ಸ್ಕೇಪ್‌ ಕಮ್ಮುನಿಕೇಷನ್ಸ್‌ ಭಾರತಕ್ಕೆ ಪದಾರ್ಪಣ

By Staff
|
Google Oneindia Kannada News

ಬೆಂಗಳೂರು : ಕ್ಯಾಲಿಫೋರ್ನಿಯಾ ಮೂಲದ ನೆಟ್‌ಸ್ಕೇಪ್‌ ಕಮ್ಯೂನಿಕೇಷನ್‌ ತನ್ನ ಕಾರ್ಯಕ್ಷೇತ್ರವನ್ನು ಭಾರತಕ್ಕೂ ವಿಸ್ತರಿಸಿದೆ. ಗುರುವಾರ ಈ ಬಗ್ಗೆ ಬೆಂಗಳೂರಿನಲ್ಲಿ ಅಧಿಕೃತವಾಗಿ ಪ್ರಕಟಿಸಲಾಯಿತು. 10 ದಶಲಕ್ಷ ಅಮೆರಿಕನ್‌ ಡಾಲರ್‌ ಬಂಡವಾಳ ತೊಡಗಿಸುವ ಮೂಲಕ ಭಾರತದಲ್ಲಿ ತನ್ನ ಕಾರ್ಯಕ್ಷೇತ್ರವನ್ನು ಸಂಸ್ಥೆ ವಿಸ್ತರಿಸುತ್ತಿದೆ.

ಈ ವಿಷಯವನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೀಶ್‌ ಧರ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಕಂಪನಿಯ ಈ ವಿಸ್ತರಣೆಯಿಂದ ಭಾರತದಲ್ಲಿ 100 ಮಂದಿ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಉದ್ಯೋಗ ಪಡೆಯಲಿದ್ದಾರೆ. ಪ್ರಾರಂಭದಲ್ಲಿ ಐ - ಪ್ಲಾನೆಟ್‌, ಇ - ಕಾಮರ್ಸ್‌ ಸೂತ್ರಗಳ ಅಭಿವೃದ್ಧಿ ಯೋಜನೆಗೆ ಕಂಪನಿ ವಿಶೇಷ ಅದ್ಯತೆ ನೀಡುವುದು ಎಂದೂ ಅವರು ಹೇಳಿದರು.

ಅಮೆರಿಕದ ವೆಬ್‌ ಬ್ರಾಂಡ್‌ ಮತ್ತು ಇಂಟರ್‌ನೆಟ್‌, ತಂತ್ರಜ್ಞಾನ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕಾ ಅನ್‌ಲೈನ್‌ ಲಿಮಿಟೆಡ್‌ನ ಅಂಗಸಂಸ್ಥೆಯಾಗಿ ನೆಟ್‌ಸ್ಕೇಪ್‌ ಕಮ್ಯುನಿಕೇಷನ್ಸ್‌ ಕಾರ್ಯ ನಿರ್ವಹಿಸುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X