ಮಾಲೂರಿನ ಡಾ.ಹೇಮಂತ್ ‘ಬ್ರಿಟಿಷ್ ಪ್ರತಿಷ್ಠಿತ ಪ್ರಜೆ’
ಮಾಲೂರು : ಇಲ್ಲಿ ಹುಟ್ಟಿ, ಜೂನಿಯರ್ ಕಾಲೇಜ್ ಓದಿ, ದಾವಣಗೆರೆಯ ಜೆಎಂಎಂ ವೈದ್ಯಕೀಯ ಕಾಲೇಜಿನಲ್ಲಿ ಕಲಿತು ಇಂಗ್ಲೆಂಡಿಗೆ ಹಾರಿದ ಡಾ.ಹೇಮಂತ ಕುಮಾರ್ ಬ್ರಿಟಿಷ್ ಚಕ್ರಾಧಿಪತ್ಯದ ಪ್ರತಿಷ್ಠಿತ ಪ್ರಜೆ(ಮೆಂಬರ್ ಫ್ ದಿ ಆರ್ಡರ್ ಆಫ್ ಬ್ರಿಟಿಷ್ ಎಂಪೈರ್ ) ಗೌರವಕ್ಕೆ ಭಾಜನರಾಗಿದ್ದಾರೆ.
ವೈದ್ಯಕೀಯ ವೃತ್ತಿಯಲ್ಲಿ ಸಲ್ಲಿಸುವ ಅತ್ಯುತ್ತಮ ಸೇವೆಗೆ ರಾಣಿ ಎಲಿಜಬೆತ್ ಈ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ. ನವೆಂಬರ್ 17ರಂದು ಲಂಡನ್ನಿನ ಅರಮನೆಯಲ್ಲಿ ಸ್ವತಃ ರಾಣಿ ಎಲಿಜಬೆತ್, ಹೇಮಂತಕುಮಾರ್ ಅವರಿಗೆ ಪ್ರಶಸ್ತಿ ಇತ್ತು ಗೌರವಿಸಿದರು.
ನಲವತ್ತೆಂಟರ ಹರೆಯದ ಹೇಮಂತ್ ತಮ್ಮ ಪತ್ನಿ ರೇಖಾ ಅವರ ಜೊತೆ ಲಂಡನ್ನಿನಲ್ಲಿ ಭರಣಿ ನರ್ಸಿಂಗ್ ಹೋಂ ನಡೆಸುತ್ತಿದ್ದಾರೆ. ಅದರಲ್ಲಿ 14 ವೈದ್ಯರು ಅಭ್ಯಾಸ ಮಾಡುತ್ತಿದ್ದಾರೆ. ರೆ. ಮತ್ತೊಂದು ವಿಶೇಷವೆಂದರೆ ಹೇಮಂತ್, ರಾಣಿ ಎಲಿಜಬೆತ್ ಅವರ ಫ್ಯಾಮಿಲಿ ಡಾಕ್ಟರ್. ಮಾಲೂರಿನ ಮೊದಲ ಪುರಸಭಾಧ್ಯಕ್ಷ ದಿವಂಗತ ಎಲ್. ವೇಮಾರೆಡ್ಡಿ ಅವರ ಮೊಮ್ಮಗ ಈ ಹೇಮಂತ್.
ಬಾಲಂಗೋಚಿ : ಓ! ರಾಣಿ ಫ್ಯಾಮಿಲಿ ಡಾಕ್ಟರಲ್ವೆ, ಅದಕ್ಕೇ ಪ್ರಶಸ್ತಿ ಕೊಟ್ಟಿದ್ದಾರೆ. ಅವರಿಗೆ ಸರಿಯಾಗೇ ಟ್ರೀಟ್ಮಂಟ್ ಕೊಟ್ಟಿರಬೇಕು. ಇಲ್ದಿದ್ರೆ ಅವರಿಗೆಲ್ಲಿ ಸಿಗುತ್ತಿತ್ತು ಪ್ರಶಸ್ತಿ ಎನ್ನುವ ಗೊಣಗು ಸದ್ಯಕ್ಕೆ ಇನ್ನೂ ಎದ್ದಿಲ್ಲ .
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications