ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಲಿಸುತ್ತಿರುವಾಗಲೇ ಹತ್ತಿ ಉರಿದ ಮಾರುತಿ ಕಾರು

By Staff
|
Google Oneindia Kannada News

ಮಂಗಳೂರು : ಮಂಗಳೂರಿನತ್ತ ಹೊರಟಿದ್ದ ಮಾರುತಿ ಕಾರೊಂದು ಪಣಂಬೂರು ಬಳಿ ಚಲಿಸುತ್ತಿರುವಾಗಲೇ ಬೆಂಕಿ ಹತ್ತಿ ಉರಿದು ಭಸ್ಮವಾಗಿ ಹೋಗಿದೆ. ಬುಧವಾರ ಮಧ್ಯಾಹ್ನ ಕಾರು ಮಂಗಳೂರಿನತ್ತ ಸಾಗುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಕಾರು ಓಡಿಸುತ್ತಿದ್ದ ಎಂಐಟಿ ಕಾಲೇಜಿನ ವಿದ್ಯಾರ್ಥಿ ವಿವೇಕ್‌ (19) ಕಾರಿನಿಂದ ಕೆಳಗಿಳಿದು, ಪ್ರಾಣಾಪಾಯದಿಂದ ಪಾರಾದರು.

ಅಷ್ಟು ಹೊತ್ತಿಗಾಗಲೇ ಕಾರು ಸಂಪೂರ್ಣವಾಗಿ ಹತ್ತಿ ಉರಿಯ ತೊಡಗಿತು. ಎನ್‌ಎಂಪಿಟಿಯ ಅಗ್ನಿ ಶಾಮಕ ದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ, ಕಾರು ಸಂಪೂರ್ಣ ಭಸ್ಮವಾಗಿ ಹೋಗಿತ್ತು.

ಕಾರಿನ ತಾಂತ್ರಿಕ ದೋಷದಿಂದ ಬೆಂಕಿ ಹತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಬೆಂಕಿ ಆಕಸ್ಮಿಕದಿಂದಾಗಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಉಡುಪಿ - ಮಂಗಳೂರು ನಡುವೆ ಸಂಚಾರ ಸ್ತಬ್ಧವಾಗಿತ್ತು. ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಯಾರಿಗೂ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X