Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಭೂಮಿ ಕಾಣಿ ವಿಷಯದಲ್ಲಿ ನಿಮ್ಮ ಸಂಕಲ್ಪ ಕೈ ಗೂಡುವುದು. ವೃತ್ತಿಯಲ್ಲಿನ ಸಮಸ್ಯೆಗಳು ತಾತ್ಕಾಲಿಕವಾದವು.

ವೃಷಭ : ಮನಸ್ಸಿನ ಕೊಳಕ್ಕೆ ಕಲ್ಲು ಬಿದ್ದಿದೆ. ತಿಳಿಯಾಗಬೇಕಿದ್ದರೆ ಸದ್ಯಕ್ಕೆ ಬೇರೆ ಕ್ಷೇತ್ರದತ್ತ ಗಮನ ಹರಿಸಿ.

ಮಿಥುನ : ಆತು ಕೊಳ್ಳಲು ಏನಾದರೂ ಬೇಕು ಎನಿಸುವುದು ಸಹಜ. ಈ ವರೆಗೆ ನಿಮ್ಮ ಬಳಿ ಇದ್ದ ಧ್ಯೇಯಗಳನ್ನು ಬಲಿ ಕೊಟ್ಟು ಹೊಸ ಹೆಜ್ಜೆ ಇಡುವುದು ಸರಿಯಲ್ಲ.

ಕಟಕ : ಅವಸರವಸರದಲ್ಲಿ ಏೕನೇನೋ ನಿರ್ಧಾರ ಸಲ್ಲ. ಈಗಿರುವ ಪರಿಸ್ಥಿತಿಯಿಂದ ಧೃತಿಗೆಡಬೇಕಾಗಿಲ್ಲ. ಇಂದು ನಿಮ್ಮ ಆಫೀಸಿನಲ್ಲಿ ಧಿಢೀರ್‌ ಬದಲಾವಣೆ ಯಾಗಬಹುದು.

ಸಿಂಹ : ನಿಮಗಿರುವ ಡಾಮಿನೇಟಿಂಗ್‌ ನೇಚರ್‌ನಿಂದಾಗಿ ಗೆಲುವನ್ನು ಕಷ್ಟಪಟ್ಟಾದರೂ ನಿಮ್ಮ ತೆಕ್ಕೆಗೆಳೆದುಕೊಳ್ಳುತ್ತೀರಿ. ಪ್ರೀತಿ ಪ್ರೇಮದಲ್ಲಿರುವ ಪ್ರಾಮಾಣಿಕತೆಗೆ ಇನ್ನೊಬ್ಬರಿಂದ ಶಹಬಾಸ್‌ ಗಿರಿ ಗಿಟ್ಟಿಸುವ ಪ್ರಯತ್ನದಲ್ಲಿ ಸೋಲಾಗಬಹುದು.

ಕನ್ಯಾ : ಇಷ್ಟ ಪಟ್ಟವರು ಮಾಡಿದ ತಪ್ಪಿಗೆ ಪಟ್ಟು ಹಿಡಿದು ವಿಶ್ಲೇಷಣೆ ಕೇಳಿದರೂ ನಿಮಗೆ ಉತ್ತರ ಸಿಗದು. ನಿಮಗೆ ಬರುವ ಸೋಲು ನಿಮ್ಮ ಬದುಕಿನ ಉತ್ತಮ ಪಾಠಗಳಲ್ಲಿ ಒಂದಾಗಿರುತ್ತದೆ.

ತುಲಾ : ಮಿತ್ರಾಗಮನ. ಆರೋಗ್ಯದಲ್ಲಿ ತುಸು ಏರು ಪೇರು. ಕೇಸು ವಿಲೇವಾರಿಗೆ ಹೊರಡುವವರಿದ್ದರೆ ಇಂದೇ ಹೊರಟು ಬಿಡಿ.

ವೃಶ್ಚಿಕ : ಸಿಟ್ಟು ಸೆಡವುಗಳನ್ನೆಲ್ಲಾ ಹಚ್ಚಿಕೊಂಡರೆ ಕೆಲಸ ನಡೆಯುತ್ತದೆಯೇ ? ಇವತ್ತು ಧನಾಗಮ. ಹಾಗೆಂದು ಅತಿ ಖುಷಿ ಬೇಡ.

ಧನಸ್ಸು : ಬಿಸಿನೆಸ್‌ ಕ್ಷೇತ್ರವೇ ಹೆಚ್ಚು ಲಾಭ ತರಲಿದೆ. ಲೆಕ್ಕಾಚಾರಗಳಿಗೆ , ಸ್ಟ್ರಾಟೆಜಿಗಳನ್ನು ಕಾರ್ಯರೂಪಕ್ಕೆ ತರಲು ಇದು ಒಳ್ಳೆ ದಿನ .

ಮಕರ : ಪರಿಸ್ಥಿತಿಗಳು ಮನಸ್ಸನ್ನು ಚಿತ್ರಾನ್ನ ಮಾಡುತ್ತಿವೆ ಅಂತ ಇನ್ನೊಬ್ಬರ ಮೇಲೆ ಆರೋಪಿಸವುದೇ ? ಸ್ನೇಹಿತರ ಒಳ್ಳೆಯತನ ನಿಮ್ಮ ನೆರವಿಗೆ ಬರಲಿದೆ. ಎಲ್ಲ ಸಂದರ್ಭದಲ್ಲಿಯೂ ಜನಾಭಿಪ್ರಾಯವನ್ನು ತಳ್ಳಿ ಹಾಕಬೇಡಿ.

ಕುಂಭ : ಆರೋಗ್ಯ ಬಾಧೆಯಿಂದ ಮನಸ್ಸು ಅಸ್ತವ್ಯಸ್ತವಾಗಬಹುದು. ಪ್ರಯಾಣ ಯೋಗ ಇರುವುದರಿಂದ ಸಿದ್ಧರಾಗಿರಿ.

ಮೀನ : ನಿಮ್ಮ ಎಲ್ಲ ವ್ಯವಹಾರಗಳನ್ನು ಜನ ಗಮನಿಸುತ್ತಾರೆ. ನಿಮ್ಮ ಸ್ನೇಹಿತರ ದೃಷ್ಟಿಯಲ್ಲಿ ಸಣ್ಣವರಾಗುತ್ತಾ ಹೋಗದಂತೆ ಎಚ್ಚರ ಇದ್ದರೆ ನೀವು ಗೆದ್ದಂತೆಯೇ. ಕುಂಬಳ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುವುದು ಬೇಡ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+