ಮ್ಯಾಚ್ ಫಿಕ್ಸಿಂಗ್: ಕಳಂಕಿತ ಆಟಗಾರರ ಮೇಲೆ ಎರಗಲಿರುವ ಐಟಿ ನೋಟಿಸ್
ನವದೆಹಲಿ : ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಗಳಾಗಿರುವ ಆರೋಪದ ಮೇಲೆ ಶಿಕ್ಷೆಗೊಳಗಾಗಿರುವ ಕ್ರಿಕೆಟ್ ಆಟಗಾರರ ಮೇಲೆ ಮುಂದಿನ ವಾರದೊಳಗೆ ತೆರಿಗೆ ಇಲಾಖೆಯ ನೋಟಿಸ್‌ಗಳು ದಾಳಿ ಮಾಡಲಿವೆ.
ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಈಗಾಗಲೇ ಸಿದ್ಧವಾಗಿರುವ ನೋಟಿಸ್‌ಗಳನ್ನು, ಐವರು ಆಟಗಾರರಾದ ಮನೋಜ್ ಪ್ರಭಾಕರ್, ಅಜಯ್ ಜಡೇಜಾ, ಅಜಯ್ ಶರ್ಮಾ, ನಿಖಿಲ್ ಛೋಪ್ರಾ ಮತ್ತು ನವಜೋತ್ ಸಿಂಗ್ ಸಿಧು ಅವರು ನೀಡಬೇಕಾದ ಬೃಹತ್ ಮೊತ್ತದ ದಂಡಸಹಿತದ ಸುಸ್ತಿ ತೆರಿಗೆ ಪಾವತಿಸುವಂತೆ ತೆರಿಗೆ ಇಲಾಖೆ ಬರುವ ವಾರದೊಳಗೆ ಕಳುಹಿಸಿಕೊಡಲಿದೆ.
ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರು ಆದಾಯ ತೆರಿಗೆಗೆ ಸಂಬಂಧಿಸಿದಂತೆ ಈ ವರೆಗೆ ಘೋಷಣೆ ನೀಡಿಲ್ಲದಿರುವುದರಿಂದ ಅವರ ತೆರಿಗೆ ಪಾವತಿಗೆ ಕುರಿತ ಅಂದಾಜು ವರದಿಯನ್ನು ತಯಾರಿಸಲಾಗಿದ್ದು, ಅಂತಿಮ ಪರಿಶೇಲನೆ ನಡೆಸಲಾಗುತ್ತಿದೆ ಎಂದು ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಕೊಟ್ಯಾಂತರ ರುಪಾಯಿ ತೆರಿಗೆ ಹಣ ಕ್ರಿಕೆಟಿಗರಿಂದ ಬರಬೇಕಿದ್ದು, ಕೆಲವರು 1990-91 ಮತ್ತು 2000-2001ನೇ ಸಾಲಿನವರೆಗಿನ 10 ವರ್ಷದ ಅವಧಿಯ ತೆರಿಗೆ ಘೋಷಣೆ ಮಾಡಬೇಕಿದೆ, ಹಾಗಾಗಿ ಈ ಆಟಗಾರರು ಸುಸ್ತಿಯಾಗಿರುವ ದಂಡಸಹಿತ ತೆರಿಗೆ ಪಾವತಿ ಮಾಡಬೇಕಿದೆ. ಇತರ ಸಂದರ್ಭಗಳಲ್ಲಿ ಗರಿಷ್ಠ ಶೇಕಡಾ 34ರಷ್ಟು ಪಾವತಿಸಬೇಕು. ಆದರೆ ಕೆಲವರು ಶೇಕಡಾ 60ರಷ್ಟು ದಂಡಸಹಿತ ತೆರಿಗೆ ಪಾವತಿಸಬೇಕಿದೆ.
ಶೇಕಡಾ 100ರಿಂದ 300ರವರೆಗೆ ತೆರಿಗೆ : ತೆರಿಗೆಗೆ ಸಂಬಂಧಿಸಿದ ಬ್ಲಾಕ್ ರಿಟರ್ನ್ಸ್ ಸಲ್ಲಿಸಲು ವಿಫಲವಾದರೆ ಶೇಕಡಾ 100ರಿಂದ 300ರವರೆಗೆ ತೆರಿಗೆ ಪಾವತಿಸಬೇಕಾಗುತ್ತದೆ. ಅಂತವರ ವಿರುದ್ಧ ಇಲಾಖೆ ದಾವೆ ಹೂಡಬಹುದಾಗಿದೆ. ಆಟಗಾರರು ತಮ್ಮ ಬ್ಲಾಕ್ ರಿಟರ್ನ್ಸ್ ಸಲ್ಲಿಸಿದ ನಂತರ ತೆರಿಗೆಗೆ ಸಂಬಂಧಿಸಿದ ಅಂದಾಜು ವರದಿಗಳನ್ನು ಇಲಾಖೆ ತಯಾರಿಸಲಿದೆ. ತೆರಿಗೆ ಪಾವತಿಯ ಅಂದಾಜು ವರದಿಗಳನ್ನು ಸಿದ್ದಪಡಿಸಬೇಕಾದವರ ಪಟ್ಟಿಯಲ್ಲಿ ಕೆಲವು ಬುಕ್ಕಿಗಳು, ಬಿಸಿಸಿಐನ ಕೆಲವು ಅಧಿಕಾರಿಗಳು ಇದ್ದಾರೆ. ಅಜರುದ್ದೀನ್ ಅವರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ ಎಂದು ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಸಿಬಿಐ ವಿಚಾರಣೆ ನಂತರ ಜುಲೈ 20ರಂದು ರಾಷ್ಟಾದ್ಯಂತ ಕೆಲವು ಆರೋಪಿ ಆಟಗಾರರೂ ಸೇರಿದಂತೆ ಐಸಿಸಿಯ ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಮಾಜಿ ಖಜಾಂಚಿ ಕಿಶೋರ್ ರುಂಗ್ಟಾ ಮತ್ತು ಕೆಲವು ಬುಕ್ಕಿಗಳಿಗೆ ಸೇರಿದ ಸ್ಥಳಗಳ ಮೇಲೆ ತೆರಿಗೆ ಇಲಾಖೆ ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
(ಯುಎನ್‌ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications