Get Updates
Get notified of breaking news, exclusive insights, and must-see stories!

ಎಟಿಪಿ ಟೆನ್ನಿಸ್‌ : ಪೇಸ್‌- ಭೂಪತಿ ಜೋಡಿಗೆ ಅನಿರೀಕ್ಷಿತ ಸೋಲು

ಬೆಂಗಳೂರು : ಇಲ್ಲಿನ ಕೆಎಸ್‌ಎಲ್‌ಟಿಎ ಕಣದಲ್ಲಿ ನಡೆಯುತ್ತಿರುವ ಎಟಿಪಿ ವಿಶ್ವ ಡಬಲ್ಸ್‌ ಟೆನಿಸ್‌ ಕಾಳಗದಲ್ಲಿ ಈಗಾಗಲೇ ಸೆಮಿಫೈನಲ್ಸ್‌ ಪ್ರವೇಶಿಸಿರುವ ಭಾರತದ ಪೇಸ್‌- ಭೂಪತಿ ಜೋಡಿ ಶುಕ್ರವಾರ ನಡೆದ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಅನಿರೀಕ್ಷಿತ ಸೋಲುಂಡಿದೆ.

ಅಮೆರಿಕದ ಅಲೆಕ್‌ ಓಬ್ರಿಯಾನ್‌ ಮತ್ತು ಜರೇದ್‌ ಪಾಲ್ಮರ್‌ ವಿರುದ್ಧ ನಡೆದ ಗೋಲ್ಡ್‌ ಗುಂಪಿನ ಲೀಗ್‌ ಪಂದ್ಯದ ಮೊದಲ ಸೆಟ್‌ನಲ್ಲಿ 6-2ರ ಸುಲಭ ಜಯ ಸಾಧಿಸಿದ ಭಾರತದ ಜೋಡಿ, 2ನೇ ಸೆಟ್‌ನ್ನು 4-6ರಲ್ಲಿ ಸೋತರು. ಟೈ ಬ್ರೇಕರ್‌ಗೆ ಎಡೆ ಮಾಡಿಕೊಟ್ಟ 3ನೇ ಸೆಟ್‌ನ್ನು ಅಮೆರಿಕ ಜೋಡಿ 7-5ರಲ್ಲಿ ಗೆದ್ದಿತು.

ಮತ್ತೊಂದು ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಆಟಗಾರರಾದ ಅಮೆರಿಕದ ರಿಕ್‌ ಲೀಚ್‌ ಮತ್ತು ದಕ್ಷಿಣ ಆಫ್ರಿಕಾದ ಎಲಿಸ್‌ ಫೆರೆರಾ ಜೋಡಿ ಸೆಮಿಫೈನಲ್ಸ್‌ ಪ್ರವೇಶಿಸಿತು. ಈ ಜೋಡಿ ಆಸ್ಟ್ರೇಲಿಯಾದ ಜೋಷ್‌ ಈಗಲ್‌ ಮತ್ತು ಆಂಡ್ರೂ ಫ್ಲಾರಂಟ್‌ ಜೋಡಿಯನ್ನು 4-6, 6-3, 7-6(7-2) ರಲ್ಲಿ ಸೋಲಿಸಿತು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+