Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಗೆಳೆಯರೊಂದಿಗೆ ಹೊಸ ಆಲೋಚನೆಗಳ ಲೆಕ್ಕಾಚಾರ. ಅವು ಖಂಡಿತ ಯಶಸ್ವಿಯಾಗುತ್ತವೆ. ಮುಂದುವರೆಯಿರಿ. ಪ್ರವಾಸದ ಟೈಂ ಟೇಬಲ್‌ ಗೊತ್ತುಪಡಿಸುತ್ತಿದ್ದೀರಲ್ಲವೇ? ನಿಮ್ಮದು ಸರಿಯಾದ ಹೆಜ್ಜೆ.

ವೃಷಭ : ಚಿಂತೆ. ಪದೇ ಪದೇ ಅವುಗಳದೇ ಮೆಲುಕು. ನಿಮ್ಮ ಬುದ್ಧಿಮತ್ತೆ ಬಗೆಗೆ ನಿಮಗಿರುವ ಆತ್ಮವಿಶ್ವಾಸಕ್ಕೆ ಕೊಂಚ ಕೊಡಲಿ ಪೆಟ್ಟು. ಗುಂಪೊಂದರಲ್ಲಿ ಇವತ್ತು ನೀವೇ ಕೇಂದ್ರ ಬಿಂದು.

ಮಿಥುನ : ಹೇಳಿದ್ದನ್ನು ಮಾಡುವ ಜಾಯಮಾನ. ಅದನ್ನೇ ಯಶಸ್ಸಿನ ಮೆಟ್ಟಿಲಾಗಿ ಮಾಡಿಕೊಳ್ಳಿ. ಆಕಾಶ ಚುಂಬಿಸುವಷ್ಟು ಎತ್ತರಕ್ಕೆ ಬೆಳೆಯುವಿರಿ. ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ಒಂದೊಮ್ಮೆ ಯೋಚಿಸಿ.

ಕಟಕ : ಮನೆಯಲ್ಲಿ ಹೊಸ ಬಂಧ, ವ್ಯಾಪಾರದಲ್ಲಿ ಹೊಸ ಸಂಪರ್ಕ, ಒಂದು ಹಿಡಿ ಹೊಸ ಗೆಳೆಯರು ನಿಮಗೆ ದಕ್ಕುವ ದಿನ. ಹ್ಞಾಂ, ಜೀವನ ಸಂಗಾತಿಯಾಗುವ ಸದ್ಯದ ಕಾಮರೇಡ್‌ ಸಿಹಿ ಸುದ್ದಿಯಾಂದನ್ನು ಕೊಡುತ್ತಾರೆ.

ಸಿಂಹ : ಬೇರೆಯವರ ಜುಟ್ಟು ನಿಮ್ಮ ಕೈಲಿರಬಹುದು. ಹಾಗಂತ ಅವರನ್ನು ಮೇಲೆತ್ತಲು ಯತ್ನಿಸದೆ, ಅವರ ಮೇಲೆ ಕಾಲಿಟ್ಟು ನೀವು ಮಾತ್ರ ಮೇಲೇರಲು ಹೋದರೆ, ನೆಲದ ಮೇಲೆ ಹಲ್ಲುದುರೀತು.

ಕನ್ಯಾ : ಅತೀವ ಒತ್ತಡ ಕೆಲಸದ ವೇಗ ಕಡಿಮೆಯಾಗುವಂತೆ ಮಾಡಿದೆ. ನಿಮ್ಮಲ್ಲಿ ಛಾತಿಯಿದೆ. ಮನಸ್ಸು ಗಟ್ಟಿ ಮಾಡಿಕೊಳ್ಳಿ. ಕೆಲಸದ ಮೇಲೆ ತೀವ್ರ ನಿಗಾ ಇಟ್ಟು, ಸಾಧಿಸಿ ತೋರಿಸಿ.

ತುಲಾ : ಹರಟೆ ಹೊಡೆಯುತ್ತಲೇ ವ್ಯಾಪಾರಿ ಸಲಹೆ ನಿಮಗೆ ತಾನೇ ತಾನಾಗಿ ಸಿಗುತ್ತದೆ. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವಷ್ಟು ಯೋಚನೆ ಮಾಡಬೇಕಷ್ಟೆ. ಆಗ ನೀವು ಕಾಣುತ್ತಿರುವ ಕನಸು ನನಸಾದೀತು.

ವೃಶ್ಚಿಕ : ಅಭದ್ರತೆ ಮಂಕು ಕವಿಸಿದೆ. ಇದೇನೂ ಪರ್ಮನೆಂಟಲ್ಲ. ಸಿಗುವ ಎಳ್ಳಷ್ಟು ಅವಕಾಶವನ್ನೇ ಆಕಾಶವನ್ನಾಗಿಸಿಕೊಳ್ಳುವ ಶಕ್ತಿ ನಿಮ್ಮಲ್ಲಿದೆ. ಧೈರ್ಯ ತಂದುಕೊಂಡು ಮುನ್ನುಗ್ಗಿ.

ಧನಸ್ಸು : ವಿರೋಧಿಗಳು ಇಡುತ್ತಿರುವ ಹೆಜ್ಜೆೆಯ ಜಾಡನ್ನು ಇಂಚಿಂಚೂ ಗುರ್ತಿಸುವುದರಲ್ಲಿ ನಿಮ್ಮ ಯಶಸ್ಸು ಅಡಗಿದೆ. ಅವರು ಹೋಗೋ ಹಾದಿಯಲ್ಲಿ ಯಾವುದೇ ಕಾರಣಕ್ಕೂ ಹೋಗಬೇಡಿ. ಹೀಗೆ ಮಾಡಿದಲ್ಲಿ ನೀವೇ ನಂಬರ್‌ ಒನ್‌.

ಮಕರ : ನಿಮ್ಮ ಯಶಸ್ಸು ನೀವೆಷ್ಟು ಜನಪ್ರಿಯರು ಎಂಬುದನ್ನೇ ತೀವ್ರವಾಗಿ ಅವಲಂಬಿಸಿದೆ. ಒಂದೇ ಚಿಟಿಕೆಗೆ ನೀವು ಅರಳಿ ಕಟ್ಟೆಗಾಗುವಷ್ಟು ಜನರನ್ನು ಸೇರಿಸಬಲ್ಲಿರಿ. ಆದರೆ ಅವರಲ್ಲಿ ಅಯೋಗ್ಯರನ್ನು ಶೋಧಿಸಿಬಿಡಿ.

ಕುಂಭ : ಬದುಕಿನ ಬಗೆಗೆ ಈ ತೆರನಾದ ಜಿಗುಪ್ಸೆ ಸಲ್ಲ. ಕಷ್ಟ ಮನುಷ್ಯನಿಗಲ್ಲದೆ ಮರಕ್ಕೆ ಬರುತ್ತದಾ? ಇವೆಲ್ಲಾ ಇದ್ದದ್ದೆ. ನಾಳೆ ಕಡೆ ನೋಡಿ. ಯಶಸ್ಸು ಕಟ್ಟಿಟ್ಟ ಬುತ್ತಿ.

ಮೀನ : ಸುಡುಚಿಂತೆ. ದ್ವಂದ್ವ. ಗೊಂದಲ. ಆಲಸ್ಯ. ಯಾವುದರಲ್ಲೂ ಮನ್ಸಸಿಲ್ಲ. ದೇಹ ಇಲ್ಲಿದ್ದರೆ, ಮನಸ್ಸು ಊರಾಚೆ. ಏನಾದರೂ ನಿರ್ಧಾರ ಕೈಗೊಳ್ಳಲೇ ಬೇಕು. ಎರಡೂ ಉತ್ತಮ ಆಯ್ಕೆ ಎನಿಸಿದರೂ, ದೇವರ ಮೊರೆ ಹೋಗಿ ಲಾಟರಿ ಎತ್ತಾದರೂ ಒಂದನ್ನು ಆರಿಸಿಕೊಳ್ಳಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+