ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಡ್‌ಬಾಯ್‌ ಬುಷ್‌

By Staff
|
Google Oneindia Kannada News

george w. bushal goreಅಮೆರಿಕ ಅಧ್ಯಕ್ಷ ಚುನಾವಣೆಯ ಇತಿಹಾಸದಲ್ಲೇ ಅನೇಕ ಕಾರಣಗಳಿಂದ ಮಹತ್ವದ್ದೆನಿಸಿದ್ದ ಈ ಬಾರಿಯ ಚುನಾವಣಾ ಪ್ರಕ್ರಿಯೆ ಅಂತೂ ಕೊನೆಗೊಂಡಿದೆ. ಸರಿ ಸುಮಾರು 36 ದಿನಗಳ ಕಾಲ ನಡೆದ ಕಾನೂನು ಸಮರಗಳ ನಂತರ ಡೆಮಾಕ್ರಟಿಕ್‌ ಹುದ್ದರಿ ಆಲ್‌ ಗೋರ್‌ ಅಧ್ಯಕ್ಷ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಮಾತ್ರವಲ್ಲದೆ ಬುಧವಾರ ರಾತ್ರಿ ಅಮೆರಿಕದ ನೂತನ ಅಧ್ಯಕ್ಷ ಜಾರ್ಜ್‌ ಡಬ್ಲ್ಯು ಬುಷ್‌ ಅವರನ್ನು ಅಭಿನಂದಿಸಿದ್ದಾರೆ.

ಈ ಹಿಂದೆ ಅಮೆರಿಕ ಅಧ್ಯಕ್ಷರಾಗಿದ್ದ ಜಾರ್ಜ್‌ ಬುಷ್‌ ಸೀನಿಯರ್‌ ಅವರ ಪುತ್ರ ಜಾರ್ಜ್‌ ಡಬ್ಲ್ಯು ಬುಷ್‌. ಅಪ್ಪನಿಗೆ ತಕ್ಕ ಮಗ ಅನ್ನಿಸಿರುವ 54 ವರ್ಷದ ಮೆಥಾಡಿಸ್ಟ್‌ ಪಂಗಡಕ್ಕೆ ಸೇರಿದ ಬುಷ್‌ ಎರಡು ಮಕ್ಕಳ ಅಪ್ಪ , ಯಶಸ್ವಿ ಉದ್ಯಮಿ, ಆಡಳಿತಗಾರ ಹಾಗೂ ರಾಜಕಾರಣಿ ಎಂದು ಗುರ್ತಿಸಿಕೊಂಡಿದ್ದಾರೆ. ಆಡಳಿತದಲ್ಲಿ ಅಷ್ಟೇನೂ ಅನುಭವವಿಲ್ಲದಿದ್ದರೂ ರಾಜಕಾರಣದಲ್ಲಿ ಚಾಣಕ್ಯ. ಆ ಚಾಣಾಕ್ಷತನವೇ ಅವರನ್ನು ಅಧ್ಯಕ್ಷ ಪೀಠವನ್ನು ದಕ್ಕಿಸಿಕೊಟ್ಟಿದೆ.

ಭಾರತೀಯರ ಹಾಗೂ ಎನ್‌ ಆರ್‌ ಐ ಗಳ ಅಚ್ಚುನೆಚ್ಚು

‘ನಾನು ಅಧ್ಯಕ್ಷನಾದರೆ ಸಿಟಿಬಿಟಿಗೆ ಸಹಿ ಹಾಕುವಂತೆ ಭಾರತವನ್ನು ಒತ್ತಾಯಿಸುವುದಿಲ್ಲ. 1998ರಲ್ಲಿ ಅಮೆರಿಕ ವಿಧಿಸಿರುವ ಆರ್ಥಿಕ ದಿಗ್ಬಂಧನವನ್ನು ಸಂಪೂರ್ಣ ತೊಡೆದು ಹಾಕುತ್ತೇನೆ’ ಎಂಬಿತ್ಯಾದಿ ಭರವಸೆಗಳನ್ನು ಕೊಟ್ಟಿರುವ ಜಾರ್ಜ್‌ ಬುಷ್‌ ಒಂದೊಮ್ಮೆ ಕುಡಿದು ಕಾರ್‌ ಓಡಿಸಿ ಸಿಕ್ಕಿ ಹಾಕಿಕೊಂಡು ಸುದ್ದಿ ಮಾಡಿದ್ದುಂಟು. ಆದರೆ, ಆ ವಿಷಯ ಚುನಾವಣಾ ವಸ್ತುವಾಗಲಿಲ್ಲ. ಏಕೆಂದರೆ ಎದುರಾಳಿ ಗೋರ್‌ ಅಫೀಮು ಸೇವನೆ ಪ್ರಕರಣದಲ್ಲಿ ಸುದ್ದಿ ಮಾಡಿದ್ದರು.

ಅಧ್ಯಕ್ಷೀಯ ಚುನಾವಣೆಯಲ್ಲಿ ಇವರ ಪ್ರತಿಸ್ಪರ್ಧಿಯಾಗಿದ್ದ ಅಲ್‌ ಗೋರ್‌ ಇಂಟಲೆಕ್ಚುಯಲ್‌, ಈತ ತರಲೆ ಆಸಾಮಿ ಎಂಬ ಜನಾಭಿಪ್ರಾಯಗಳು ಕೇಳಿ ಬರುತ್ತಿದ್ದವು. ಹತ್ತಿರದವರಿಂದ ಬ್ಯಾಡ್‌ಬಾಯ್‌ ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಬುಷ್‌, ತಮ್ಮ ಗೆಲುವಿನ ಅನುಮಾನಗಳನ್ನು ಹುಸಿಯಾಗಿಸಿ 45 ವರ್ಷಗಳ ನಂತರ ಅಮೆರಿಕೆಯ ಶ್ವೇತ ಭವನ ಮತ್ತು ಕಾಂಗ್ರೆಸ್‌ ಎರಡರಲ್ಲೂ ರಿಪಬ್ಲಿಕ್‌ ಪಕ್ಷ ಆಡಳಿತ ನಡೆಸಲು ಐತಿಹಾಸಿಕ ವಿಜಯ ತಂದಿತ್ತಿದ್ದಾರೆ. ತುರುಸಿನ ಸ್ಪರ್ಧೆಯಲ್ಲೂ ಮಿಂಚಿದ್ದಾರೆ. ವಿಶ್ವದ ಅತಿ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರದ ಕಡಿವಾಣ ಹಿಡಿದಿರುವ ಈ ನಾಯಕನ ಸಂಕ್ಷಿಪ್ತ ಪರಿಚಯ ಇದೋ ಇಲ್ಲಿದೆ ....

  • ಹೆಸರು : ಜಾರ್ಜ್‌ ದುಬ್ಯಾ ಬುಷ್‌
  • ಜನನ : ಜುಲೈ 6, 1946, ಕನೆಕ್ಟಿಕಟ್‌ನ ನ್ಯೂ ಹೆವೆನ್‌ನಲ್ಲಿ
  • ವಿದ್ಯೆ : ಎಂ.ಬಿಎ (ಹಾರ್ವಡ್‌ ಬಿಸಿನೆಸ್‌ ಸ್ಕೂಲ್‌, 1975)
ಬಿ.ಎ. (ಯಾಲೆ ವಿಶ್ವವಿದ್ಯಾಲಯ, 1968)

  • ಪತ್ನಿ : ಲಾರಾ ವೆಲ್ಷ್‌ ಬುಷ್‌
ಉದ್ಯೋಗ ಮಾಹಿತಿ

  • ಜನರಲ್‌ ಮ್ಯಾನೇಜಿಂಗ್‌ ಪಾರ್ಟ್‌ನರ್‌, ಟೆಕ್ಸಾಸ್‌ ರೇಂಜರ್ಸ್‌ ಪ್ರೊ ಬೇಸ್‌ಬಾಲ್‌ ಟೀಂ (1989- 94)
  • ಸಂಸ್ಥಾಪಕ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ, ಬುಷ್‌ ಎಕ್ಸ್‌ಪ್ಲೋರೇಷನ್‌ ಆಯಿಲ್‌ ಮತ್ತು ಗ್ಯಾಸ್‌ ಕಂಪನಿ (ಆರ್ಬುಸ್ಟೋ ಎನರ್ಜಿ ಐ ಎನ್‌ಸಿ- 1975ರಿಂದ 86)
  • ಪೈಲಟ್‌, ಟೆಕ್ಸಾಸ್‌ ಏರ್‌ ನ್ಯಾಷನಲ್‌ ಗಾರ್ಡ್‌ (1968- 73)
ಮಂಡಳಿ/ದತ್ತಿಗಳಲ್ಲಿ ಸೇವೆ

  • ಟಾಂ ಬ್ರೌನ್‌, ಐ ಎನ್‌ಸಿ (ನಿರ್ದೇಶಕ, 1994ರಲ್ಲಿ ರಾಜೀನಾಮೆ)
  • ಕ್ಯಾಟೆರೇರ್‌ ಇಂಟರ್‌ನ್ಯಾಷನಲ್‌, ಐ ಎನ್‌ಸಿ (ನಿರ್ದೇಶಕ, 1994ರಲ್ಲಿ ರಾಜೀನಾಮೆ)
  • ಹಾರ್ಕೆನ್‌ ಎನರ್ಜಿ, ಐ ಎನ್‌ಸಿ (ನಿರ್ದೇಶಕ, 1993ರಲ್ಲಿ ರಾಜೀನಾಮೆ)
  • ಸಿಲ್ವರ್‌ ಸ್ಕಿೃೕನ್‌ ಪಾರ್ಟ್‌ನರ್ಸ್‌ (ಮಂಡಳಿ ಸದಸ್ಯ)
  • ಲಕ್ಕಿ ಛಾನ್ಸ್‌ ಮೈನಿಂಗ್‌ ಕಂಪನಿ (ಮಂಡಳಿ ಸದಸ್ಯ)
ರಾಜಕೀಯ ಜೀವನ

  • ಅಧ್ಯಕ್ಷ ಪ್ರಚಾರೀ ಸಮಿತಿಯ ಹಿರಿಯ ಸಲಹೆಗಾರ (1988- 1992 )
  • ಟೆಕ್ಸಾಸ್‌ನ ಗವರ್ನರ್‌ ಹುದ್ದೆ (1994- 98)
  • ಟೆಕ್ಸಾಸ್‌ ಗವರ್ನರ್‌ ಆಗಿ ಮರು ಆಯ್ಕೆ (1998- ಈವರೆಗೆ)
(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X