Get Updates
Get notified of breaking news, exclusive insights, and must-see stories!

ಈಜಲು ಹೋದ 4 ಬಾಲಕರು ನೀರು ಪಾಲು

ಚಾಮರಾಜನಗರ : ಹೊಳೆಯಲ್ಲಿ ಈಜಲು ಹೋಗಿ ನಾಲ್ವರು ಬಾಲಕರು ನೀರು ಪಾಲಾಗಿರುವ ದುರ್ಘಟನೆ ಇಲ್ಲಿಗೆ ಸಮೀಪದ ದಿಡ್ಡಾಪುರದಲ್ಲಿ ಸಂಭವಿಸಿದೆ.

ದಿಡ್ಡಾಪುರ ಬಳಿ ಹೊಳೆಯಲ್ಲಿ ಈಜಲು ಹೋಗಿದ್ದ ಕೆ. ಪ್ರವೀಣ್‌ (14), ಸಿ.ಎಸ್‌. ಪ್ರಮೋದ್‌ (13), ಜೀವನ್‌ (14) ಶವಗಳು ಮಂಗಳವಾರ ಪತ್ತೆಯಾಗಿದ್ದು, 14 ವರ್ಷ ವಯಸ್ಸಿನ ನಂದಕುಮಾರ್‌ನ ಶವ ಇನ್ನೂ ಪತ್ತೆಯಾಗಿಲ್ಲ. ಇದಕ್ಕೂ ಮುನ್ನ ಭಾನುವಾರ 13 ವರ್ಷದ ಮಹದೇವಸ್ವಾಮಿಯ ಶವ ನದಿಯಲ್ಲಿ ದೊರಕಿತ್ತು.

ಭಾನುವಾರ ಆರು ಬಾಲಕರು ಸೈಕಲ್‌ ಏರಿ ದಿಡ್ಡಾಪುರ ಹೊಳೆಗೆ ಈಜಲು ಹೋಗಿದ್ದರು. ಮಹದೇವ ಸ್ವಾಮಿಯ ಶವ ಭಾನುವಾರವೇ ದೊರಕಿದ್ದ ಹಿನ್ನೆಲೆಯಲ್ಲಿ ತಮ್ಮ ಗೆಳೆಯನ ಸಾವಿನಿಂದ ಹೆದರಿದ ಇತರ ಮಕ್ಕಳು ಊರು ಬಿಟ್ಟು ಓಡಿ ಹೋಗಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಮಂಗಳವಾರ ಮೂರು ಶವಗಳು ಪತ್ತೆಯಾದ ಹಿನ್ನೆಲೆಯಲ್ಲಿ ನಂದಕುಮಾರನೂ ನೀರು ಪಾಲಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿ ಅಣ್ಣೇಗೌಡ ಅವರ ನೇತೃತ್ವದ ಪೊಲೀಸ್‌ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿದ್ದರು. ನಂದಕುಮಾರನಿಗಾಗಿ ಶೋಧ ಮುಂದುವರಿದಿದೆ. ಆರು ಮಕ್ಕಳ ಪೈಕಿ ಕಿರಣ್‌ ಮಾತ್ರ ಊರಿಗೆ ಓಡಿ ಬಂದಿದ್ದ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+