Get Updates
Get notified of breaking news, exclusive insights, and must-see stories!

ಮುಸುಕು ತೆಗೆಯಲು ಒಲ್ಲೆ ಎನ್ನುವ ಮನಸ್ಸು

ಬೆಂಗಳೂರು : ಬೆಂಗಳೂರಿನಲ್ಲಿ ಬೆಳಗ್ಗೆ ಕೊರೆಯುವ ಚಳಿ. 9-30 ಕಳೆದರೂ ಭಾನುವಾರ ಮೋಡ ಮುಸುಕಿತ್ತು. ಉಣ್ಣೆಯ ಉಡುಪು ತೊಟ್ಟಿದ್ದರೂ ಚಳಿಯ ಅನುಭವ ಆಗುತ್ತಿತ್ತು. ಗುಲ್ಬರ್ಗಾದಲ್ಲಿ 0.5 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಏರಿತ್ತು. ರಾಜ್ಯದ ಕನಿಷ್ಠ ತಾಪಮಾನವೂ ಗುಲ್ಬರ್ಗಾದಲ್ಲಿ 10 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು.

ಚಳಿ ಚಳಿ ತಾಳೆನು ಈ ಚಳಿಯ ಎಂಬ ಚಕ್ರವ್ಯೂಹ ಚಿತ್ರದ ಗೀತೆ ಹಾಡಲು ಇದೇ ಸರಿಯಾದ ಸಮಯ ಎನ್ನುತ್ತಿದ್ದ ಮನಸ್ಸು , ಏಕಾದರೂ ಬೆಳಗಾದೀತೋ ಎಂದು ಮುಸುಕು ಹಾಕಿ ಮಲಗಿತ್ತು. ಭಾನುವಾರದ ರಜೆ, ಕೊರೆವ ಚಳಿಯ ಹಿನ್ನೆಲೆಯಲ್ಲಿ ಗಂಟೆ ಎಂಟಾದರೂ ಮುಸುಕು ತೆಗೆಯಲು ಮನಸ್ಸು ಒಲ್ಲೆ ಎಂದಿತ್ತು. ಅಂದಹಾಗೆ ರಾಜ್ಯದಲ್ಲಿ ಒಣಹವೆ ಮುಂದುವರಿದಿತ್ತು. ರಾಜ್ಯದ ಬಹಳಷ್ಟು ಕಡೆಗಳಲ್ಲಿ ಕನಿಷ್ಠ ತಾಪಮಾನ ಕೆಳಮಟ್ಟಕ್ಕೆ ಇಳಿದಿತ್ತು. ಮುನ್ಸೂಚನೆಯ ರೀತ್ಯ ಮುಂದಿನ 48 ಗಂಟೆಗಳ ಅವಧಿಯಲ್ಲಿ ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆಗಳೇನೂ ಕಂಡು ಬರುವ ಸೂಚನೆಗಳಿಲ್ಲ.

ಸ್ಥಳೀಯ ಹವಾಮಾನ ಮುನ್ಸೂಚನೆಯ ರೀತ್ಯ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನಿರ್ಮಲ ಆಕಾಶ ಇದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್‌ ಇರುತ್ತದೆ ಎಂದು ಹವಾಮಾನ ವೀಕ್ಷಣಾಲಯದ ವರದಿ ಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+