ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ತವರಲ್ಲಿ ಹುತ್ತರಿ ಸಂಭ್ರಮ

By Staff
|
Google Oneindia Kannada News

*ದೇವಕಿ ಪ್ರಿಯ

ತನ್ನ ವಿಶಿಷ್ಟ ಸಂಸ್ಕೃತಿಯ ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಕೊಡಗು, ಇವತ್ತು ಮತ್ತೊಮ್ಮೆ ಹುತ್ತರಿ ಹಬ್ಬಕ್ಕೆ ಸಜ್ಜಾಗಿದೆ. ಕಣ್ಣು ಕೂರೈಸುವ ಪ್ರಕೃತಿಯ ಸೆರಗೊದ್ದು ನವ ವಧುವಿನಂತೆ ಸದಾ ಕಂಗೊಳಿಸುವ ಕೊಡಗಿನಲ್ಲಿ ಈಗ ಸುಗ್ಗಿ ಹಬ್ಬ.

ಹುತ್ತರಿ ಅಥವಾ ಪುತ್ತರಿ ಎಂದು ಕರೆಯಲಾಗುವ ವಿಶಿಷ್ಟ ಜಾನಪದ ಹಬ್ಬ ಬರುವ ಸೋಮವಾರ ನಡೆಯುತ್ತಿದೆ. ಕೇರಳದಲ್ಲಿ ಓಣಂ ನಡೆದ ಮೂರು ತಿಂಗಳ ನಂತರ ನಡೆಯುವ ಈ ಹಬ್ಬ, ಕೇರಳಿಗರಿಗೆ ಓಣಂ ಹೇಗೂ ಹಾಗೆ. ವಿವಿಧ ಜಾನಪದ ನೃತ್ಯಗಳಿಂದ ಕೂಡಿದ ಪುತ್ತರಿ ಹಬ್ಬ ಕೊಡಗರಿಗೆ ಪ್ರತಿವರ್ಷ ಸಾಂಸ್ಕೃತಿಕ ಕಾರ್ಯಕ್ರಮಗಳ ಕೇಂದ್ರವಾಗುತ್ತದೆ. ಈ ಸುಗ್ಗಿಯ ಹಬ್ಬಕ್ಕೆ ಕೊಡವರು ತಮ್ಮ ಜಾನಪದ ಉಡುಗೆ-ತೊಡುಗೆಗಳಿಂದ ನಿಗಧಿತ ಸ್ಥಳ ಸೇರಿ ವಿವಿಧ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಮನೆಯ ಯಜಮಾನ ಮುಖ್ಯ ಪಾತ್ರ ವಹಿಸುವ ಈ ಹಬ್ಬ ಕೊಡಗರ ಸಂಸ್ಕೃತಿ ಸಾರುತ್ತದೆ.

ಹಸಿರು ನಾಡಿನ ಒಡೆಯರು : ಮೈದುಂಬಿ ಹರಿಯುವ ಕಾವೇರಿ, ಐತಿಹಾಸಿಕ ಪ್ರಸಿದ್ಧ - ಕೋಟೆ, ಭೂದೇವಿಗೆ ಜಲಧಾರೆಯ ಚುಂನ ನೀಡುವ ‘ಅಬ್ಬಿ ಜಲಪಾತ’ದಿಂದ ಕೂಡಿದ ವೀರ ಸೇನಾನಿಗಳ ಬೀಡು. ಉಡುಗೆ ತೊಡುಗೆಗಳಿಗೆ ವಿಶಿಷ್ಟ ವಿನ್ಯಾಸವಿದೆ.ಒಟ್ಟಿನಲ್ಲಿ ಹಸಿರು ಸಿರಿತನದ ತವರಿನಲ್ಲಿ ಪ್ರಕೃತಿ ರಸದೌತಣ ನೀಡುವ ಸ್ವರ್ಗಧಾಮವೇ ಕೊಡಗು.

ವಿಶಿಷ್ಟ ಜಾನಪದ ಕಲೆಯ ಮೆರುಗು ಇಲ್ಲಿನ ಕೊಡವರ ನಡೆ-ನುಡಿ, ಉಡುಪುಗಳಲ್ಲಿ ಎದ್ದು ಕಾಣುತ್ತ್ತದೆ. ಮಹಿಳೆ ಹಾಗೂ ಪುರುಷರ ವರ್ಣರಂಜಿತ ಉಡುಪು ಬಲು ಆಕರ್ಷಕ. ಪುರುಷರು ಕಪ್ಪು ಬಣ್ಣದ ಕುಪ್ಪಸ, ರೇಷ್ಮೆಯ ಅಂಚಿರುವ ದಟ್ಟಿಯನ್ನು ಸೊಂಟಕ್ಕೆ ಸುತ್ತಿ ತಲೆಗೆ ಪೇಟ, ಸೊಂಟಕ್ಕೆ ಪೀಚೆಕತ್ತಿ ಸಿಕ್ಕಿಸಿಕೊಂಡು ನಡೆದಾಡುವುದನ್ನು ನೋಡುವುದೇ ಒಂದು ಸೊಗಸು. ಮಹಿಳೆಯರ ಉಡುಪಿನದು ಮತ್ತ್ತೊಂದು ಬಗೆಯ ಸೊಗು. ಸೀರೆಯ ಸೆರಗನ್ನು ಹಿಂದಿನಿಂದ ಬಲದ ತೋಳಭುಜದ ಮೇಲೆ ತಂದು ಕಟ್ಟುತ್ತಾರೆ. ಎಡತೋಳಿನ ಕುಪ್ಪಸ ಹಾಗೂ ತಲೆಗೆ ಕಟ್ಟುವ ಟ್ಟೆ ಮಹಿಳೆಯರನ್ನು ಹೆಚ್ಚು ಸುಂದರಿಯರನ್ನಾಗಿಸುತ್ತದೆ. ನೂರಾರು ವರ್ಷಗಳ ಇತಿಹಾಸ ಇರುವ ಕೊಡವರ ಉಡುಪು, ಭಾಷೆ, ಸಂಸ್ಕೃತಿ ಭಾರತೀಯ ಸಂಸ್ಕೃತಿಗೆ ಒಂದು ವಿಶಿಷ್ಟ ಕೊಡುಗೆ.

ಕೊಡವರ ಜನಪದ ನೃತ್ಯ ನೋಡುಗರ ಕಣ್ಣುಗಳಿಗೆ ಮುದ ನೀಡುತ್ತದೆ. ಈ ನೃತ್ಯ ಪ್ರಕಾರಗಳಲ್ಲಿ ಉಮ್ಯತ್ತಾಟ್‌, ಬೊಳಕಾಟ್‌, ಕೊಂಬಾಟ್‌ ಮತ್ತ್ತು ಪೀಲಿಯಾಟ್‌, ಹುತ್ತ್ತರಿ ಕೋಲಾಟ, ವಾಲಗತ್ತಾಟ್‌, ಕುದುರೆಯಾಟ್‌ ಎಂದು ಹಲವು ಬಗೆ ಇವೆ.

ಬೊಳಕಾಟ್‌ ಕೊಡಗಿನ ಬಹುಮುಖ್ಯ ನೃತ್ಯ. ಇದು ಶೌರ್ಯ ಹಾಗೂ ವೀರತ್ವಕ್ಕೆ ಪ್ರತೀಕವಾದ ಕೊಡಗಿನ ಪುರುಷರ ನೃತ್ಯ. ಬೊಳಕಾಟ್‌ ಎಂದರೆ ಬೆಳಕಿನ ಆಟ (ದೀಪ). ಕೊಡವರು ಕುಪ್ಪಸ-ದಟ್ಟೆ, ಪೀಚೆಕತ್ತಿ, (ರುಮಾಲು) ತಲೆಗೆ ವಿಶೇಷವಾದ ಪೇಟ ಧರಿಸಿ ಲಗೈಯಲ್ಲಿ ಒಡಿಕತ್ತಿ (ವಿಶೇಷ ಕತ್ತಿವರಸೆ) ಹಿಡಿದು ದುಡಿಯ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಾರೆ. ಕೊಡವ ಭಾಷೆಯ ಹಾಡಿನ ಹಿನ್ನೆಲೆ ಇರುತ್ತ್ತದೆ. ಇದು ಕೇಳಲು ಬಲು ಇಂಪು. ಹಿಂದಿನ ಕಾಲದಲ್ಲಿ ಈ ನತ್ಯವು ದೇವರ ಗುಡಿಗಳ ಮುಂದೆ ನಡೆಯುತ್ತಿತ್ತು. ಆದರೆ ಇಂದು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ತೆರೆಮರೆಗೆ ಸರಿಯುತ್ತಿರುವ ಬೊಳಕಾಟ್‌ನ್ನು ಉಳಿಸುವತ್ತ ಕೊಡವರು ಗಮನ ನೀಡಬೇಕಿದೆ.

ಕೊಡವ ಬೆಡಗಿಯರ ಮೋಹಕ ನೃತ್ಯವೇ ಉಮ್ಯತ್ತಾಟ್‌. ಮಹಿಳೆಯರು ತಾಳಮೇಳಕ್ಕೆ ಸರಿಯಾಗಿ ಹಾಡಿ ನರ್ತಿಸುವ ಈ ನೃತ್ಯ ತುಂಬಾ ಮೋಹಕ. ಕೊಡವ ಮಹಿಳೆಯರ ವಿಶಿಷ್ಟ ಉಡುಪು ಈ ನೃತ್ಯಕ್ಕೆ ಮೆರುಗು ನೀಡುತ್ತದೆ. ಉಮ್ಯತ್ತಾಟ್‌ ನೃತ್ಯಕ್ಕೆ ಹೊಸ ರೂಪ ಕೊಡುತ್ತದೆ. ಮಹಿಳೆಯರು ಕೈಯಲ್ಲಿ ಕಂಚಿನ ತಾಳ ಹಿಡಿದು ಮಂಡಳ ಆಕಾರದಲ್ಲಿ ಸುತ್ತುತ್ತಾ ಹಾಡಿನ ತಾಳಕ್ಕೆ ತಕ್ಕಂತೆ ವಿವಿಧ ಭಂಗಿಗಳಲ್ಲಿ ನರ್ತಿಸುತ್ತಾರೆ.

ಈ ಮಂಡಲದ ಮಧ್ಯೆ ಇರುವ ದೀಪ ಮತ್ತು ಕೊಡಗಿನ ಕುಲದೇವತೆ ಕಾವೇರಿಯಂತೆ ವೇಷಧರಿಸಿ ನಿಂತ ಹೆಣ್ಣುಮಗಳ ಸುತ್ತಾ ಇವರು ನರ್ತಿಸುತ್ತಾ ರೆ. ಈ ಸಂದರ್ಭದಲ್ಲಿ ಕಾವೇರಿಯ ಕುರಿತು, ಕೊಡಗಿನ ಜನಜೀವನದ ಬಗ್ಗೆ, ಯೋಗಕ್ಷೇಮದ ಕುರಿತು ಹಾಡುಗಳನ್ನು ಹಾಡಲಾಗುತ್ತದೆ. ಕೊಡಗಿನ ಮುಖ್ಯ ಹಬ್ಬಗಳಾದ ತೆಲಪೊಳತ್‌(ತೆಲ ಮೂಹರ್ತ) ಹಾಗೂ ಹುತ್ತರಿ ಹಬ್ಬ, ಊರ ದೇವರ ಉತ್ಸವ ಸಂದರ್ಭಗಳಲ್ಲಿ ಉಮ್ಯತ್ತಾಟ್‌ನೃತ್ಯ ಮಾಡಲಾಗುವುದು.

ಉಮ್ಯತ್ತಾಟ್‌ಗೆ ಪೌರಾಣಿಕ ಹಿನ್ನೆಲೆಯ ಕಲೆ ಇದೆ. ಸಮುದ್ರ ಮಥನದ ಸಮಯದಲ್ಲಿ ಮೋಹಿನಿ ರೂಪ ಧರಿಸಿದ ವಿಷ್ಣು ಸುರಾಸುರರನ್ನು ಮೆಚ್ಚಿಸಲು ಉಮಾದೇವಿಯ ನಾನಾ ಬಗೆಯ ನೃತ್ಯಗಳನ್ನು ಮಾಡಿ ಮುಕ್ತಾಯದಲ್ಲಿ ಅಮೃತವನ್ನು ಹಂಚಿದ ಪ್ರತೀಕ ಉಮ್ಯತ್ತಾಟ್‌ಎಂದು ಕೊಡವರ ನಂಬಿಕೆ. ಉಮಾದೇವಿಯ ನೃತ್ಯ ಕಲೆಯಾಗಿರುವುದರಿಂದ ಉಮ್ಯತ್ತಾಟ್‌ಎಂದು ಕರೆಯುತ್ತಾರೆ.

ಕೊಂಬಾಟ್‌, ಪೀಲಿಯಾಟ್‌

ಜಿಂಕೆಯ ಕೊಂಬು ಹಾಗೂ ನವಿಲುಗರಿ ಹಿಡಿದು ದೇವರ ಗುಡಿಯ ಮುಂದೆ ನರ್ತಿಸುವುದು ಕೊಂಬಾಟ್‌ನ ವಿಶೇಷ. ಬಹುತೇಕ ಊರ ಹಬ್ಬದ ಸಮಯದಲ್ಲಿ ಇದನ್ನು ಪ್ರದರ್ಶಿಸಲಾಗುತ್ತದೆ. ಬೊಳಕಾಟ್‌ ನೃತ್ಯದ ಉಡುಪೇ ಇದ್ದರೂ ಬಣ್ಣ ಬಿಳಿಯದಾಗಿರುತ್ತದೆ. ಇದು ಸಹ ಮೋಹಿನಿ ಭಸ್ಮಾಸುರರ ಹಿನ್ನಲೆಯ ನೃತ್ಯವಾಗಿದೆ. ಮೋಹಿನಿಯ ರೂಪದ ವಿಷ್ಣು ಒಮ್ಮೆ ಕೊಂಬನ್ನು (ಜಿಂಕೆಯ ಕೊಂಬು) ಮತ್ತೊಮ್ಮೆ ಪೀಲಿಯನ್ನು (ನವಿಲು ಗರಿ) ಹಿಡಿದು ನರ್ತಿಸುವುದೇ ಇದರ ವಿಶೇಷ.

ವಾಲಗತ್ತಾಟ್‌(ನಾದಸ್ವರ ನೃತ್ಯ)

ಇದು ಕೊಡವರ ಜೀವನದಲ್ಲಿ ಅಡಕವಾದ ವಿಶೇಷ ನೃತ್ಯ. ಇದು ಸಾಮಾನ್ಯವಾಗಿ ಹಬ್ಬ ಹರಿದಿನಗಳು, ಮದುವೆ ಹಾಗೂ ಸರ್ವೇಸಾಮಾನ್ಯ ಸಮಾರಂಭಗಳ ಯಾವುದೇ ಕಟ್ಟುಪಾಡುಗಳಿಲ್ಲ, ಯಾವುದೇ ಉಡುಪಿನಲ್ಲಿ ನರ್ತಿಸಬಹುದಾದ ನೃತ್ಯ.

ವಾಲಗತ್ತಾಟ್‌ಎಂದರೆ ವಾಲಗ ಡೊಳ್ಳು (ದೊಡ್ಡ ವಾಲಗ) ನಾದಸ್ವರ ಮೋರಿ(ಕೊಂಬು)ಗಳನ್ನು ಬಳಸಿ ಹೆಚ್ಚಾಗಿ ದಲಿತರೇ ನಡೆಸುವ ವಾದ್ಯಗೋಷ್ಠಿ. ವಾದ್ಯಕ್ಕೆ ಗಂಡಸರು, ಹೆಂಗಸರು, ಮಕ್ಕಳು, ಹಿರಿಯ-ಕಿರಿಯ ಬೇಧಭಾವವಿಲ್ಲದೆ ಸಂಖ್ಯೆಗೆ ಮಿತಿಯಿಲ್ಲದೆ ತಾಳ-ಮೇಳಕ್ಕೆ ಹೆಜ್ಜೆ ಹಾಕುವ ನೃತ್ಯವಿದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X