ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಪ್ಪಂದ ನಿಯಮ ಉಲ್ಲಂಘನೆ : ರಿkುೕ ಟಿವಿ ವಿರುದ್ಧ ಖೇರ್‌ ಮೊಕದ್ದಮೆ

By Staff
|
Google Oneindia Kannada News

ಮುಂಬೈ: ರಿkುೕ ಟಿವಿಯ ಸವಾಲ್‌ ದಸ್‌ ಕ್ರೋರ್‌ ಕಾ ಕಾರ್ಯಕ್ರಮದ ನಿರೂಪಕನ ಹುದ್ದೆಯಿಂದ ತಮ್ಮನ್ನು ಏಕಾಕಏಕಿ ಕೈಬಿಟ್ಟರುವ ಬಗ್ಗೆ , ಇದೊಂದು ಹೇಯ ತೀರ್ಮಾನ ಹಾಗೂ ನೀಚ ವರ್ತನೆ. ಇದರಲ್ಲಿ ತಮ್ಮನ್ನು ಹರಕೆಯ ಕುರಿಯಂತೆ ನಡೆಸಿಕೊಳ್ಳಲಾಗಿದೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಖ್ಯಾತ ನಟ ಅನುಪಮ್‌ ಖೇರ್‌ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ತಮ್ಮನ್ನು ಬದಲಿಸುತ್ತಿರುವ ಬಗ್ಗೆ ಸವಾಲ್‌ ದಸ್‌ ಕ್ರೋರ್‌ ಕಾ ಕಾರ್ಯಕ್ರಮದ ನಿರ್ದೇಶಕ ಗಜೇಂದ್ರ ಸಿಂಗ್‌ ಹೇಳಿದ್ದರಾದರೂ ಈ ಮುಂಚೆ ಮಾಡಿಕೊಂಡಿರುವ ಒಪ್ಪಂದದನ್ವಯ 60 ದಿನಕ್ಕೆ ಮುಂಚೆ ಲಿಖಿತ ನೋಟೀಸ್‌ ನೀಡಬೇಕಿತ್ತು ಎಂದು ಖೇರ್‌ ಹೇಳಿದ್ದಾರೆ.

ಮುಂದಿನ ಎಸಿಸೋಡ್‌ಗಳ ಚಿತ್ರೀಕರಣಕ್ಕೆ ತಮ್ಮ ವೇಳೆ ಹೊಂದಿಕೆಯಾಗುವುದಿಲ್ಲ ಎಂಬ ದೂರಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ, ತಾವು ಈಗಾಗಲೇ ಲಿಖಿತ ಪತ್ರದ ಮೂಲಕ ವೇಳೆಯನ್ನು ನೀಡಿದ್ದು, ಪ್ರತಿ ತಿಂಗಳು 17ರಿಂದ 25ನೇ ತಾರೀಕಿನವರೆಗೆ ತಾವು ಲಭ್ಯವಿರುವುದಾಗಿ ತಿಳಿಸಲಾಗಿದೆ ಎಂದಿದ್ದಾರೆ.

ವಿವಾದದ ಸಂಬಂಧ ಅನುಪಮ್‌ ಖೇರ್‌ ಮತ್ತು ಕಾರ್ಯಕ್ರಮದ ನಿರ್ದೇಶಕ ಗಜೇಂದ್ರ ಅವರ ನಡುವೆ ಮಾತುಕತೆ ನಡೆಯುತ್ತಿದ್ದು, ಈ ತಿಂಗಳ ಕೊನೆಯಲ್ಲಿ ಆರಂಭವಾಗುವ ಮುಂದಿನ ಕಾರ್ಯಕ್ರಮಗಳ ಚಿತ್ರೀಕರಣಕ್ಕೆ ದಿನಾಂಕಗಳು ಹೊಂದಿಕೆಯಾಗಬೇಕಿದೆ. ನಿರೂಪಣಾಕಾರರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೆಚ್ಚು ಕಾಲಾವಾಕಾಶ ಬೇಕು ಆದರೆ ಖೇರ್‌ ಅವರು ಈ ಮುಂಚೆ ಚಲನಚಿತ್ರಗಳ ಚಿತ್ರೀಕರಣಕ್ಕೆ ಡೇಟ್ಸ್‌ ನೀಡಿರುವುದರಿಂದ ಅವರು ಕಾರ್ಯಕ್ರಮಕ್ಕೆ ಸಾಕಷ್ಟು ಸಮಯ ದೊರೆಯುವುದು ದುರ್ಲಬ ಆದ್ದರಿಂದ ಸಮಸ್ಯೆ ಆರಂಭವಾಗಿದೆ ಎಂದು ಎಂದು ರಿkುೕ ಟೀವಿಯ ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ಮೊಕದ್ದಮೆ ದಾಖಲು : ಮುಂಬೈನ ಸಿನಿಮಾ ಕಲಾವಿದರ ಸಂಘದ ಮೂಲಕ ರಿkುೕ ಟಿವಿ ವಿರುದ್ಧ ಅನುಪಮ್‌ ಖೇರ್‌ ಮೊಕದ್ದಮೆ ದಾಖಲು ಮಾಡಿದ್ದಾರೆ. ಈ ವಿಷಯವನ್ನು ಖಚಿತಪಡಿಸಿರುವ ಸಿನಿಮಾ ಕಲಾವಿದರ ಸಂಘದ ಕಾರ್ಯದರ್ಶಿ ರಾಜಾ ಮುರಾದ್‌, ಖೇರ್‌ ಮತ್ತು ರಿkುೕ ಟಿವಿಯ ನಡುವೆ ನಡೆದಿರುವ ಒಪ್ಪಂಧದ ಪ್ರತಿ ಸಂಘಕ್ಕೆ ಇನ್ನೂ ತಲುಪಬೇಕಿದ್ದು, ಮೊಕದ್ದಮೆಯ ಪ್ರತಿಯನ್ನು ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದ್ದಾರೆ.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X