ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ದೇಹಸ್ಥಿತಿ ಗಂಭೀರ

By Staff
|
Google Oneindia Kannada News

ಬೆಂಗಳೂರು : ಕಳೆದ ವಾರದಿಂದಲೂ ನಗರದ ಮಣಿಪಾಲ್‌ ಆಸ್ಪತ್ರೆಯಲ್ಲಿ ಪಿತ್ತಕೋಶದ ತೊಂದರೆಗಾಗಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಅವರ ದೇಹಸ್ಥಿತಿ ಗಂಭೀರವಾಗಿದೆ. ಬುಧವಾರ ಸಂಜೆ ಪಟೇಲರ ದೇಹಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ಪಟೇಲ್‌ ಅವರ ಕರುಳಿನಲ್ಲಿ ಆಗುತ್ತಿದ್ದ ರಕ್ತ ಸ್ರಾವವನ್ನು ಸಿಂಗಪುರ್‌ನ ರೇಡಿಯೋಲಜಿ ಪ್ರೊಫೆಸರ್‌ ಡಾ. ಟ್ಯಾನ್‌ ಅವರು ಬಿಪ್‌ ಚಿಕಿತ್ಸಾ ವಿಧಾನದಿಂದ ನಿಲ್ಲಿಸಿದ್ದಾರಾದರೂ ಚಿಂತಾಜನಕ ಸ್ಥಿತಿಯಲ್ಲಿರುವ ಪಟೇಲ್‌ರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪಟೇಲರಿಗೆ ನೀಡಬೇಕಾದ ಚಿಕಿತ್ಸೆಯನ್ನೆಲ್ಲಾ ನೀಡಲಾಗಿದ್ದು, ಅವರ ದೇಹ ಪ್ರಕೃತಿ ಚಿಕಿತ್ಸೆಗೆ ಹೇಗೆ ಸ್ಪಂದಿಸುತ್ತದೆ ಎಂಬ ಬಗ್ಗೆ ತೀವ್ರ ನಿಗಾ ಇಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X