Get Updates
Get notified of breaking news, exclusive insights, and must-see stories!

ವಿಚಾರಣಾಧೀನ ಕೈದಿಗಳಿಗೆ ಪ್ರತ್ಯೇಕ ಜೈಲು ಸ್ಥಾಪನೆಗೆ ಸರ್ಕಾರದ ನಿರ್ಧಾರ

  • ಎಂ.ಕೆ. ಮಧುಸೂದನ್‌
ಬೆಂಗಳೂರು : ಕ್ರಿಮಿನಲ್‌ ಕೋರ್ಟ್‌ ವ್ಯಾಪ್ತಿಯಲ್ಲಿ ಬರುವ ವಿಚಾರಣಾಧೀನ ಕೈದಿಗಳಿಗೆ ಪ್ರತ್ಯೇಕ ಜೈಲೊಂದನ್ನು ಸ್ಥಾಪಿಸಲು ರಾಜ್ಯ ಸರಕಾರ ನಿರ್ಧರಿಸಿದೆ.

ವಿಚಾರಣಾಧೀನ ಕೈದಿಗಳನ್ನು ಕೋರ್ಟ್‌ಗೆ ಹಾಜರು ಪಡಿಸುವಲ್ಲಿ ತಡವಾಗುತ್ತಿರುವುದಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ಮಂಗಳವಾರ ನಡೆಸಿತು. ವಿಚಾರಣೆಯು ತಡವಾಗುತ್ತಿರುವುದರಿಂದ ಜಿಲ್ಲಾ ಕೋರ್ಟುಗಳಲ್ಲಿಯೂ ಕ್ರಿಮಿನಲ್‌ ಕೇಸುಗಳು ಇತ್ಯರ್ಥವಾಗುವುದು ತಡವಾಗುತ್ತಿವೆ ಎಂದು ಕೋರ್ಟ್‌ ಅಭಿಪ್ರಾಯ ಪಟ್ಟಿದೆ. ಸರಕಾರವು ಆರೋಪಗಳನ್ನು ಎದುರಿಸುತ್ತಿರುವ ವಿಚಾರಣಾಧೀನ ಕೈದಿಗಳಿಗೆ, ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಬಳಿ ಪ್ರಯೋಗಾತ್ಮಕವಾಗಿ ಪ್ರತ್ಯೇಕ ಕಾರಾಗೃಹ ನಿರ್ಮಿಸಲು ಒಪ್ಪಿಕೊಂಡಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಇದಕ್ಕಾಗಿ 2.5 ಕೋಟಿ ರೂಪಾಯಿಗಳನ್ನು ವ್ಯಯಿಸುವುದಾಗಿ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ.

ವಿಚಾರಣೆಯಾಗದೇ ಜೈಲಿನಲ್ಲಿ ಉಳಿದಿರುವ ಕೈದಿಗಳ ಕುರಿತು ಪರಿಶೀಲನೆ ನಡೆಸಲು ಹೈ ಕೋರ್ಟ್‌ ಮಹಿಳಾ ನ್ಯಾಯವಾದಿ ಪ್ರಮೀಳಾ ನೇಸರ್ಗಿಯವರನ್ನು ನೇಮಿಸಿದೆ. ಈ ನಡುವೆ ರಾಜ್ಯದ ಜೈಲುಗಳಲ್ಲಿ ಸಿಬ್ಬಂದಿ ಕೊರತೆ ಕಂಡು ಬಂದಿದ್ದು, ಸದ್ಯಕ್ಕೆ 627 ಪೊಲೀಸ್‌ ಸಿಬ್ಬಂದಿಯನ್ನು ಜೈಲುಗಳಲ್ಲಿರುವ ಖಾಲಿ ಹುದ್ದೆಗಳಿಗೆ ಪ್ರತಿ ನಿಯೋಜಿಸಲು ನಿರ್ಧರಿಸಿದೆ.

ವಿಚಾರಣಾಧೀನ ಮಹಿಳಾ ಕೈದಿಗಳಿಗಾಗಿ, ರಾಜ್ಯ ಕಾನೂನು ಸೇವಾ ಪ್ರಾಧಿಕಾರ ( ಕೆಎಸ್‌ಎಲ್‌ಎ) ವಕೀಲರ ಉಚಿತವಾಗಿ ನೇಮಿಸುವಂತೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಿ. ಎಂ. ಚಂದ್ರಶೇಖರ್‌ ಬರೆದಿರುವ ಪತ್ರವನ್ನೂ ಹೈಕೋರ್ಟ್‌ ಪರಿಗಣಿಸಿದೆ. ಪ್ರಸ್ತುತ 49 ಆಪಾದಿತ ಮಹಿಳೆಯರು ವಿಚಾರಣೆ ಇಲ್ಲದೆ ಜೈಲಿನಲ್ಲಿ ಕೊಳೆಯುತ್ತಿದ್ದಾರೆ ಎಂದು ಚಂದ್ರಶೇಖರ್‌ ಹೇಳಿದ್ದಾರೆ. ಕೆಎಸ್‌ಎಲ್‌ಎಯ ಕಾರ್ಯ ನಿರ್ವಾಹಕ ಅಧ್ಯಕ್ಷ ಎ. ಜೆ. ಸದಾಶಿವ ಅವರು ವಿಚಾರಣಾಧೀನ ಮಹಿಳಾ ಕೈದಿಗಳಿಗೆ ಅಗತ್ಯವಿರುವ ಕಾನೂನು ತಜ್ಞರನ್ನು ಒದಗಿಸಲು ತಾವಾಗಿಯೇ ಮುಂದೆ ಬಂದಿದ್ದಾರೆ. ವಿಚಾರಣಾಧೀನ ಕೈದಿಗಳಿಗೆ ಪ್ರತ್ಯೇಕ ಜೈಲು ಸ್ಥಾಪಿಸುವ ನಿಟ್ಟಿನಲ್ಲಿ ಸರಕಾರ ಶೀಘ್ರದಲ್ಲಿಯೇ ಕಾರ್ಯ ಪ್ರವೃತ್ತವಾಗಬೇಕು ಎಂದು ಹೈಕೋರ್ಟ್‌ ಹೇಳಿದೆ.

(ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+