ಮ್ಯಾಚ್ಫಿಕ್ಸಿಂಗ್ : ಸದ್ಯದಲ್ಲೇ ಭಾರತಕ್ಕೆ ಐಸಿಸಿ ತನಿಖಾ ಅಧಿಕಾರಿ
ಲಂಡನ್ : ಅಜರ್ ಹಾಗೂ ಅಜಯ್ ಶರ್ಮಗೆ ಆಜೀವ ನಿಷೇಧ ಹೇರಿದ ಬಿಸಿಸಿಐ ನಿರ್ಣಯದಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಲಿ ಎಚ್ಚರಗೊಂಡಿದೆ.
ಮಂಗಳವಾರ ಚೆನ್ನೈನಲ್ಲಿ ಬಿಸಿಸಿಐ ಸಭೆ ನಡೆಯುತ್ತಿದ್ದರೆ, ಇಲ್ಲಿ ಐಸಿಸಿಯ ಭ್ರಷ್ಟಾಚಾರ ತನಿಖಾ ಘಟಕದ ಮುಖ್ಯ ಅಧಿಕಾರಿ ಪಾಲ್ ಕಾಂಡೋನ್ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಲಿಯ ವಿಶೇಷ ತನಿಖಾಧಿಕಾರಿ ಗ್ರೆಗ್ ಮೆಲಿಕ್ ಇನ್ನೊಂದು ಚರ್ಚೆ ನಡೆಸಿದ್ದಾರೆ. ಬಿಸಿಸಿಐ ನಿರ್ಣಯ ಹೊರ ಹೊಮ್ಮುತ್ತಿದ್ದಂತೆ ಇವರು ಭಾರತಕ್ಕೆ ಹೊರಡುವ ನಿರ್ಧಾರ ಕೈಗೊಂಡಿದ್ದಾರೆ.
ಮ್ಯಾಚ್ಫಿಕ್ಸಿಂಗ್ ಸಂಬಂಧಿಸಿದಂತೆ ಸಿಬಿಐ ವರದಿಯನ್ನು ಪರಿಶೀಲಿಸಿ, ದೆಹಲಿ ಪೊಲೀಸರು ಮತ್ತು ಬಿಸಿಸಿಐ ಅಧಿಕಾರಿಗಳ ಜೊತೆ ಕಾಂಡೋನ್ ಮತ್ತು ಮೆಲಿಕ್ ಚರ್ಚಿಸಲಿದ್ದಾರೆ.
ಭಾರತದಲ್ಲಿ ಮ್ಯಾಚ್ಫಿಕ್ಸಿಂಗ್ ತನಿಖೆ ನಡೆಸಿದ ಸಿಬಿಐ ತನ್ನ ವರದಿಯಲ್ಲಿ ಒಂಬತ್ತು ವಿದೇಶೀ ಕ್ರಿಕೆಟಿಗರನ್ನು ಹೆಸರಿಸಿದೆ. ಅದರ ಬಗೆಗೆ ಪೂರ್ಣ ಮಾಹಿತಿ ಕಲೆಹಾಕಿಕೊಂಡು ಬಂದು ನಮ್ಮ ತನಿಖೆಯನ್ನು ಚುರುಕಾಗಿಸಲು ಸಾಧ್ಯವಾಗುತ್ತದೆ. ಈ ಕಾರಣದಿಂದ ನಾವು ಭಾರತಕ್ಕೆ ಹೊರಡುವ ನಿರ್ಧಾರ ಕೈಗೊಂಡೆವು ಎಂದು ಕಾಂಡೋನ್ ತಿಳಿಸಿದರು. ಕಾಂಡೋನ್ ಮತ್ತು ಮೆಲಿಕ್ ಭಾರತಕ್ಕೆ ಎಂದು ಹೊರಡುತ್ತಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications