ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಡಿ. 8ರಿಂದ ಜರ್ಮನ್‌ ಚಲನ ಚಿತ್ರೋತ್ಸವ

By Staff
|
Google Oneindia Kannada News

ಬೆಂಗಳೂರು : ಡಿಸೆಂಬರ್‌ 8 ರಿಂದ ಐದು ದಿನ ಗಳ ಕಾಲ ಜರ್ಮನ್‌ ಚಲನ ಚಿತ್ರೋತ್ಸವ ನಗರದಲ್ಲಿ ನಡೆಯಲಿದೆ ಎಂದು ವಾರ್ತಾ ಇಲಾಖೆ ನಿರ್ದೇಶಕ ಡಾ. ಡಿ.ವಿ. ಗುರುಪ್ರಸಾದ್‌ ಹೇಳಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯ, ಜರ್ಮನಿ ಸರಕಾರ ಮತ್ತು ರಾಜ್ಯ ವಾರ್ತಾ ಇಲಾಖೆಗಳು ಸಂಯುಕ್ತವಾಗಿ ಈ ಚಲನ ಚಿತ್ರೋತ್ಸವವನ್ನು ಆಚರಿಸುತ್ತಿವೆ ಎಂದರು.

ಒಂದು ದಶಕದ ಜರ್ಮನ್‌ ಚಲನ ಚಿತ್ರ ಎಂದು ಈ ಉತ್ಸವವನ್ನು ಕರೆಯಲಾಗುತ್ತಿದ್ದು, ಒಟ್ಟು 10 ಜರ್ಮನ್‌ ಚಿತ್ರಗಳನ್ನು ಪ್ರದರ್ಶಿಸಲಾಗುವುದು.

ಡಿಸೆಂಬರ್‌ 8ರಂದು ಸಂಜೆ ರಾಜ್ಯ ವಾರ್ತಾ ಸಚಿವ ಬಿ.ಕೆ. ಚಂದ್ರಶೇಖರ್‌ ಸಮಾರಂಭವನ್ನು ಉದ್ಘಾಟಿಸುವುದರೊಂದಿಗೆ ಚಿತ್ರೋತ್ಸವ ಆರಂಭವಾಗುತ್ತದೆ. ನಂತರ ಪ್ರತಿ ದಿನ ಸಂಜೆ 6ರಿಂದ 8 ಗಂಟೆವರೆಗೆ ನಗರದ ತ್ರಿವೇಣಿ ಚಿತ್ರ ಮಂದಿರದಲ್ಲಿ ಚಲನ ಚಿತ್ರ ಪ್ರದರ್ಶನವಿರುತ್ತದೆ. ಉತ್ಸವದ ಆರಂಭಿಕ ದಿನದಂದು ರನ್‌ ಲೋಲಾರನ್‌ ಎಂಬ ಚಿತ್ರವನ್ನು ಪ್ರದರ್ಶಿಸಲಾಗುತ್ತದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X