• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಜಯ ದಿನ ಹಾಗೂ ಕಪ್ಪು ದಿನಗಳ ನಡುವೆ ನಲುಗುತ್ತಿರುವ ಡಿಸೆಂಬರ್‌ 6

By Staff
|
 • ಶರತ್‌ ಪ್ರಧಾನ್‌
 • ಲಖನೌ : ಅಯೋಧ್ಯೆಯಲ್ಲಿದ್ದ 16 ನೇ ಶತಮಾನದ ಬಾಬರಿ ಮಸೀದಿ ನೆಲಸಮವಾದ 8 ನೇ ವಾರ್ಷಿಕ ದಿನದ ಸಂದರ್ಭದಲ್ಲಿ ಉತ್ತರಪ್ರದೇಶದ ಬಹು ಭಾಗಗಳಲ್ಲಿ ಮತ್ತೊಮ್ಮೆ ಬಿಗು ವಾತಾವರಣ ಮೈದೋರಿದೆ.

  ವಿರೋಧಿ ಬಣಗಳಿಂದ ಪ್ರಚೋದನಕಾರಿ ಹೇಳಿಕೆಗಳು ಪ್ರಕಟವಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಗು ಬಂದೋಬಸ್ತ್‌ ಏರ್ಪಡಿಸಲಾಗಿದೆ. ಯಾವುದೇ ಅವಾಂತರಗಳಿಗೆ, ಅದರಲ್ಲೂ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗುವ ಘಟನೆಗಳಿಗೆ ಅವಕಾಶ ಕಲ್ಪಿಸದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ರಾಜ್ಯ ಗೃಹ ಕಾರ್ಯದರ್ಶಿ ಹೇಮೇಂದ್ರ ಕುಮಾರ್‌ ತಿಳಿಸಿದ್ದಾರೆ.

  ಅವಳಿ ನಗರಗಳಾದ ಅಯೋಧ್ಯಾ, ಫೈಜಾಬಾದ್‌ ಮಾತ್ರವಲ್ಲದೆ ವಾರಾಣಸಿ ಹಾಗೂ ಮಥುರಾಗಳಲ್ಲೂ ಹೆಚ್ಚುವರಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ವಿಶ್ವ ಹಿಂದೂ ಪರಿಷತ್‌ನ ಅಜೆಂಡಾದಲ್ಲಿ ಈ ಸ್ಥಳಗಳೂ ಇರುವ ಹಿನ್ನೆಲೆಯಲ್ಲಿ ಭದ್ರತೆ ಕಲ್ಪಿಸಲಾಗಿದೆ. ಕಾನ್ಪುರ, ಗೊಂಡಾ, ಮೊರಾದ್‌ಬಾದ್‌, ಅಜಮ್‌ಗರ್‌, ಬಹ್‌ರೈಚ್‌ ಮುಂತಾದ ಸೂಕ್ಷ್ಮ ಪಟ್ಟಣಗಳಲ್ಲೂ ತೀವ್ರ ಪ್ರಹಾರ ದಳ ಸೇರಿದಂತೆ ಪೊಲೀಸ್‌ ಪಹರೆ ಹಾಕಲಾಗಿದೆ.

  ರಾಮದೇಗುಲ ನಿರ್ಮಾಣವ ಯಾರೂ ತಡೆಯಲಾರರು - ಉಮಾ ಭಾರತಿ

  ಹಮೀರಪುರ್‌ನಲ್ಲಿ ಸೋಮವಾರ ನಡೆದ ಪಕ್ಷದ ರ್ಯಾಲಿಯಾಂದರಲ್ಲಿ ಕೇಂದ್ರ ಕ್ರೀಡಾ ಸಚಿವೆ ಉಮಾ ಭಾರತಿ, ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ದೇಗುಲ ನಿರ್ಮಾಣ ನಡೆದೇ ತೀರುತ್ತದೆ. ಅದು ಕೋಟ್ಯಂತರ ಹಿಂದೂಗಳ ನಂಬಿಕೆಯ ಪ್ರಶ್ನೆ ಎಂದು ಹೇಳಿದ್ದರು. ನ್ಯಾಯಾಲಯದ ತೀರ್ಮಾನ ಕೂಡ ದೇಗುಲ ನಿರ್ಮಾಣದ ಸ್ಥಳ ಬದಲಿಸಲು ಸಾಧ್ಯವಿಲ್ಲ ಎನ್ನುವ ಇಂಗಿತವನ್ನು ಅವರು ವ್ಯಕ್ತ ಪಡಿಸಿದ್ದರು. ಕಾಕತಾಳೀಯ ಅನ್ನುವಂತೆ ಅದೇ ಹೊತ್ತಿನಲ್ಲಿ ಬಿಜೆಪಿಯ ನಾಯಕ ಬಂಗಾರು ಲಕ್ಷ್ಮಣ್‌ ಅವರು ದೇಹಲಿಯಲ್ಲಿ ಹೇಳಿಕೆಯಾಂದನ್ನು ಬಿಡುಗಡೆ ಮಾಡಿ, ಡಿಸೆಂಬರ್‌ 6 ರ ಘಟನೆ ಸಮರ್ಥನೀಯವಲ್ಲ . ಈ ಸಂಬಂಧ ನಡೆಸುವ ವಿಜಯೋತ್ಸವಗಳಿಗೆ ನಾವು ಕರೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

  ಡಿಸೆಂಬರ್‌ 6 ರ ದಿನವನ್ನು ಈಚಿನ ವರ್ಷಗಳಲ್ಲಿ ಕೆಲವು ಹಿಂದೂ ಸಂಘಟನೆಗಳು ವಿಜಯದ ದಿನವನ್ನಾಗಿ ಹಾಗೂ ಕೆಲವು ಮುಸ್ಲಿಂ ಸಂಘಟನೆಗಳು ಕಪ್ಪು ದಿನವನ್ನಾಗಿ ಆಚರಿಸುವುದು ಮಾಮೂಲಾಗಿದೆ. ಆದರೆ, ಈ ವರ್ಷ ಭಾರತದಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಚಳವಳಿ(ಎಸ್‌ಐಎಂಐ) ಸಂಘಟನೆಯು ಕಾನ್ಪುರದಲ್ಲಿ ಬುಧವಾರ ರ್ಯಾಲಿಯಾಂದನ್ನು ನಡೆಸಿ, ನಾಶವಾದ ಮಸೀದಿಯ ಪ್ರತಿಕೃತಿಯನ್ನು ಪ್ರದರ್ಶಿಸಲಾಗುವುದು ಎಂದು ಪ್ರಕಟಿಸಿದೆ. ಮಸೀದಿ ಇದ್ದ ಸ್ಥಳದಲ್ಲಿ ನಿರ್ಮಿಸಲು ಉದ್ದೇಶಿಸಿರುವ ದೇಗುಲದ ಮಾದರಿ ಯಾತ್ರೆಯನ್ನು ಜೈಪುರದಿಂದ ಪ್ರಾರಂಭಿಸಲು ಉದ್ದೇಶಿಸಿರುವ ಹಿಂದೂ ಸಂಘಟನೆಗಳ ಕ್ರಮದ ವಿರುದ್ಧ ಈ ರ್ಯಾಲಿ ಎಂದು ಎಸ್‌ಐಎಂಐ ವಕ್ತಾರರು ಬಣ್ಣಿಸಿದ್ದಾರೆ.

  ಪ್ರತಿಕೃತಿಯ ಪ್ರದರ್ಶನ ನಾಶವಾದ ಮಸೀದಿಯನ್ನು ಪುನರ್‌ ನಿರ್ಮಿಸುವ ನಮ್ಮ ಬೇಡಿಕೆಯ ಸಂಕೇತವಾಗಿದೆ. ನಮ್ಮ ಹೋರಾಟಕ್ಕೆ ಇತರ ಮುಸ್ಲಿಂ ಸಂಘಟನೆಗಳ ಬೆಂಬಲವೂ ಇದೆ. ಅಖಿಲ ಭಾರತ ಬಾಬರಿ ಮಸೀದಿ ಪ್ರಕ್ರಿಯೆ ಸಮಿತಿ ಸೇರಿದಂತೆ ವಿವಿಧ ಮುಸ್ಲಿಂ ಸಂಘಟನೆಗಳು ಮಸೀದಿಯ ಪುನರ್‌ ನಿರ್ಮಾಣವನ್ನು ಛಲವನ್ನಾಗಿ ಪರಿಗಣಿಸಲು ಜನತೆಗೆ ಕರೆ ನೀಡಿವೆ. ಈ ಕುರಿತು ವಿಶೇಷ ಪ್ರಾರ್ಥನೆಗಳನ್ನು ನಡೆಸುವಂತೆ ಮನವಿ ಮಾಡಿವೆ ಎಂದು ವಕ್ತಾರರು ತಿಳಿಸಿದ್ದಾರೆ.

  ಹೈದರಾಬಾದ್‌ನಲ್ಲಿ ಬೆದರಿಕೆಯ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್‌

  • ಮೊಹಮ್ಮದ್‌ ಶಫೀಕ್‌
  • ಕೆಲವು ಮುಸ್ಲಿ ಂ ಸಂಘಟನೆಗಳು ಬುಧವಾರ ಸಂಪಿನ ಬೆದರಿಕೆ ಒಡ್ಡಿರುವುದರಿಂದ ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದಿನಲ್ಲಿ ಪೊಲೀಸ್‌ ಪಡೆಗಳು ಕಟ್ಟೆಚ್ಚರದಿಂದಿವೆ. ಹೈದರಾಬಾದ್‌ ಮಾತ್ರವಲ್ಲದೆ ತೆಲಂಗಾಣ ಪ್ರದೇಶದ ಕೆಲವು ಜಿಲ್ಲೆಗಳು ಹಾಗೂ ಮುಸ್ಲಿಂ ಜನಾಂಗದ ಪ್ರಾಬಲ್ಯ ಹೆಚ್ಚಿರುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸುತ್ತಿರುವ ಪೊಲೀಸರು ಶಂಕಿತ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ.

   ವಿವಿಧ ಜಾತ್ಯತೀತ ಹಾಗೂ ಮುಸ್ಲಿಂ ಸಂಘಟನೆಗಳು ರ್ಯಾಲಿಗಳನ್ನು ನಡೆಸಿ, ಬಾಬರಿ ಮಸೀದಿ ಇದ್ದ ಸ್ಥಳದಲ್ಲಿಯೇ ಮಸೀದಿಯನ್ನು ಪುನರ್‌ ನಿರ್ಮಿಸುವ ಬೇಡಿಕೆಯ ಪತ್ರವನ್ನು ಸ್ಥಳೀಯ ಪ್ರಾಧಿಕಾರಗಳಿಗೆ ಸಲ್ಲಿಸುವುದಾಗಿ ತಿಳಿಸಿವೆ. ಆದರೆ, ಎಲ್ಲಾ ರ್ಯಾಲಿ, ಮೆರವಣಿಗೆ ಹಾಗೂ ಸಭೆಗಳನ್ನು ಹೈದರಾಬಾದ್‌ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಡಿಸೆಂಬರ್‌ 3 ರಿಂದಲೇ ಪೊಲೀಸರು ನಿಷೇಧಿಸಿದ್ದಾರೆ. ಎರಡು ತೀವ್ರ ಪ್ರಹಾರ ದಳ ಸೇರಿದಂತೆ 40 ಪೊಲೀಸ್‌ ತುಕಡಿಗಳನ್ನು ರಾಜಧಾನಿಯ ಸೂಕ್ಷ್ಮ ಪ್ರದೇಶಗಳಲ್ಲಿ ಶಾಂತಿ ಪಾಲನೆಯ ಕಾರ್ಯದಲ್ಲಿ ತೊಡಗಿವೆ.

   ಕೆಲವು ಮುಸ್ಲಿ ಂ ಸಂಘಟನೆಗಳು ಬುಧವಾರ ವ್ಯಾಪಾರವನ್ನು ಬಂದು ಮಾಡಿ ಪ್ರತಿಭಟನೆಯಲ್ಲಿ ಶಾಂತಿಯಿಂದ ಹಾಗೂ ಪ್ರಜಾಪ್ರಭುತ್ವ ರೀತಿಯಲ್ಲಿ ಪಾಲ್ಗೊಳ್ಳುವಂತೆ ಜನತೆಗೆ ಕರೆ ನೀಡಿವೆ. ಮಜ್ಲಿಸ್‌- ಇ- ಇತ್ತೆಹದುಲ್‌ ಮುಸ್ಲಿಮೀನ್‌(ಎಂಐಎಂ) ಸಂಘಟನೆಯ ನಾಯಕ ಹೈದರಾಬಾದ್‌ನ ಸಲಾವುದ್ದೀನ್‌ ಅವರು, ಪವಿತ್ರ ರಂಜಾನ್‌ ಮಾಸದ ಈ ಪ್ರತಿಭಟನೆಯು ಹಿಂದೆಂದಿಗಿಂತಲೂ ಹೆಚ್ಚು ಮಹತ್ವವನ್ನು ಪಡೆದಿದೆ ಎಂದು ಪ್ರಕಟಣೆಯಾಂದರಲ್ಲಿ ಬಣ್ಣಿಸಿದ್ದಾರೆ. ಜನತೆ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರು ಎಂದು ಅವರು ಆಶಿಸಿದ್ದಾರೆ.

   (ಐಎಎನ್‌ಎಸ್‌)

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more